Advertisement

ಬ್ಯಾಗ್‌ ಒಳಗೆ ಏನಿದೆ?

07:38 PM Mar 26, 2019 | mahesh |

ಕೃಷ್ಣನ ಪುಟ್ಟ ಬಾಯಲ್ಲಿ ಯಶೋಧೆಗೆ ಬ್ರಹ್ಮಾಂಡವೇ ಕಂಡಂತೆ, ಹುಡುಗಿಯರ ಬ್ಯಾಗ್‌ನೊಳಗೊಂದು ಬ್ರಹ್ಮಾಂಡ ಅಡಗಿದೆ. ಬಾಚಣಿಗೆ, ಬಾಟಲಿ, ಹೇರ್‌ಪಿನ್ನು, ಕ್ಲಿಪ್ಪು ಎಲ್ಲವೂ ಅಲ್ಲಿರುತ್ತೆ. ಆದ್ರೆ, ಬೇಕಾದ ಸಮಯದಲ್ಲೇ ಬೇಕಾಗಿದ್ದು ಕೈಗೆ ಸಿಗೋದಿಲ್ಲ. ಈ ಬೇಸಿಗೆಯಲ್ಲಿ ಹಾಗಾಗೋದು ಬೇಡ. ಮನೆಯಿಂದ ಹೊರಗೆ ಹೊರಟಾಗ ಈ ಕೆಳಗಿನ ವಸ್ತುಗಳೆಲ್ಲ ಬ್ಯಾಗ್‌ನೊಳಗೆ ಇದೆಯಾ ಅಂತ ಚೆಕ್‌ ಮಾಡಿಕೊಂಡೇ ಹೊರಡಿ…

Advertisement

1. ಕರ್ಚಿಫ್
ಬೇಸಿಗೆಯಲ್ಲಿ ಬೆವರಿನಿಂದ ಮುಜುಗರವಾಗಬಾರದು ಅಂತಿದ್ರೆ, ಕರವಸ್ತ್ರವೊಂದು ಯಾವಾಗ್ಲೂ ಜೊತೆಗಿರಲಿ. ಬೆವರಿದ ಕೈಯಲ್ಲಿ ಮೊಬೈಲ್‌ನಂಥ ವಸ್ತುಗಳು ನಿಲ್ಲದೆ, ಜಾರಿ ಕೆಳಗೆ ಬೀಳುವ ಸಂಭವವೂ ಇದರಿಂದ ತಪ್ಪುತ್ತೆ. ಜಾಸ್ತಿ ಬೆವರು ಸಮಸ್ಯೆ ಇರುವವರು ಎರಡು ಕಚೀìಫ್ ಇಟ್ಟುಕೊಂಡರೆ ಉತ್ತಮ.

2. ಪರ್ಫ್ಯೂಮ್‌
ಬೇಸಿಗೆಯಲ್ಲಿ ಪಾಕೆಟ್‌ ಪರ್ಫ್ಯೂಮ್‌ ಯಾವಾಗಲೂ ಜೊತೆಗಿರಬೇಕು. ಮೈ ಬೆವರಿ ವಾಸನೆ ಬರುತ್ತಿದೆ ಅಂತಾದಾಗ, ಕಸಿವಿಸಿಗೊಳ್ಳುವ ಪ್ರಮೇಯ ಬರುವುದಿಲ್ಲ.

3. ಸನ್‌ಸ್ಕ್ರೀನ್‌/ ಮಾಯಿಶ್ಚರೈಸರ್‌ ಕ್ರೀಂ
ಕೆಲವರಿಗೆ ಬಿಸಿಲಿಗೆ ಹೋದ ಸ್ವಲ್ಪ ಹೊತ್ತಿನಲ್ಲಿ, ತ್ವಚೆ ಒಣಗಿ ಉರಿಯಲು ಶುರುವಾಗುತ್ತದೆ. ಅಂಥವರು, ಮಾಯಿಶ್ವರೈಸರ್‌ ಕ್ರೀಂ ಅನ್ನು ಯಾವಾಗಲೂ ಬ್ಯಾಗ್‌ನಲ್ಲಿ ಇಟ್ಟುಕೊಂಡಿರಬೇಕು.

4. ನೀರಿನ ಬಾಟಲಿ
ಬೇಸಿಗೆಯಲ್ಲಿ ಬಾಯಾರಿಕೆ, ಆಯಾಸ ಹೆಚ್ಚು. ಹಾಗಾಗಿ ಎಲ್ಲಿಗೇ ಹೋಗುವುದಾದರೂ ನೀರಿನ ಬಾಟಲಿಯನ್ನು ಕೊಂಡೊಯ್ಯಲು ಮರೆಯದಿರಿ

Advertisement

5. ಫೇಸ್‌ವಾಶ್‌
ಆಗಾಗ್ಗೆ ಮುಖ ತೊಳೆಯುವ ಅಭ್ಯಾಸವುಳ್ಳವರು ಫೇಸ್‌ವಾಶ್‌ ಅನ್ನೂ ಇಟ್ಟುಕೊಳ್ಳಿ. ಮುಖ ತೊಳೆದ ನಂತರ ಲಿಪ್‌ಸ್ಟಿಕ್‌, ಕಾಜಲ್‌ ಹಚ್ಚುವುದಾದರೆ ಅವುಗಳೂ ಜೊತೆಗಿರಲಿ.

6. ಶಾಲು/ ದುಪಟ್ಟಾ
ಬೇಸಿಗೆಯ ಬಿಸಿಲಿನಿಂದ ರಕ್ಷಣೆಗೆ ಶಾಲು/ ದುಪಟ್ಟಾದ ಮೊರೆ ಹೋಗಬಹುದು. ಬಿಸಿಲು ವಿಪರೀತ ಅನ್ನಿಸಿದರೆ ಅದರಿಂ ಮುಖ ಕವರ್‌ ಮಾಡಿಕೊಂಡು ತ್ವಚೆಯ ರಕ್ಷಣೆಯನ್ನೂ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next