Advertisement
ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ನಾಡು-ನುಡಿಗಾಗಿ ಸಾಕಷ್ಟು ಮಹನೀಯರು ಶ್ರಮಿಸಿದ್ದು, ಆದರೆ ಈಗ ಗಡಿಭಾಗದಲ್ಲಿ ಕನ್ನಡ ಮಂಕಾಗುತ್ತಿದೆ. ಕನ್ನಡಿಗರು ಬಡವಾಗುತ್ತಿದ್ದರೂ ಸರಕಾರದ ಪ್ರಯತ್ನಗಳು ಫಲಪ್ರದವಾಗುತ್ತಿಲ್ಲ. ಒಳನಾಡಿನಲ್ಲಿರುವ ನಾವು ಗಡಿನಾಡಿಗರ ಕಡೆ ಗಮನ ಹರಿಸಬೇಕಿದೆ. ಅವರ ಭಾವನೆಗಳಿಗೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ.
Related Articles
Advertisement
ಆದರೆ, ಈ ಪಿಡುಗುಗಳ ಉನ್ಮೂಲನೆ ಸಾಧ್ಯವಾಗದಿರುವುದು ಶೋಚನೀಯ. ನ್ಯಾಯಾಂಗದ ವ್ಯವಸ್ಥೆ ಪರಾಕಾಷ್ಟೆ ತಲುಪಿದೆ. ಸಾವಿರ-ಲಕ್ಷ ಪ್ರಕರಣಗಳು ನ್ಯಾಯ ಕಾಣದೆ ತೀಪುದಾರರು ಇಂದಿಗೂ ಕೋರ್ಟ್‌ಗೆ ಎಡತಾಕುವುದು ತಪ್ಪಿಲ್ಲ. ಪ್ರಕರಣಗಳಿಗೆ ಕಟ್ಟುನಿಟ್ಟಾದ ಪರಿಮಿತಿ ಹಾಕುವುದು ಅವಶ್ಯ ಎಂದರು.
ಬರಕ್ಕೆ ಸ್ಪಂದಿಸಿ: ರಾಜ್ಯದಲ್ಲಿ ಬರ ಆವರಿಸಿದ್ದು, ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರಜ್ಞಾವಂತರ ಗುಂಪು ಆ ಕಡೆ ಕೆರೆ-ಕಟ್ಟೆಗಳನ್ನು ಹೂಳೆತ್ತುವ ಮತ್ತು ಅವುಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕಿದೆ. ಇದಲ್ಲದೇ ಬರದ ಹೊಡೆತ ತಾಳಲಾರದೇ ಆತ್ಮಹತ್ಯೆಗೆ ಶರಣಾಗುತ್ತಿರುವ ಅನ್ನದಾತರ ಸಹಾಯಕ್ಕೆ ನಿಲ್ಲುವುದು ನೆಮ್ಮಲ್ಲರ ಧರ್ಮವಾಗಬೇಕು.
ಇದರೊಂದಿಗೆ ಸಮಾಜದಲ್ಲಿ ಅಸಂಬದ್ಧ ಘಟನೆಗಳು ನಡೆದಾಗ ಅವುಗಳನ್ನು ಪ್ರತಿಭಟಿಸುವ, ನೊಂದ ಮಹಿಳೆಯರಿಗೆ ಸಹಾಯ ಹಸ್ತ ನೀಡುವ ಅನುಕಂಪ ಅಲೆಗಳು ನಮ್ಮ ಹೃದಯದಿಂದ ಹೊರ ಹೊಮ್ಮಬೇಕಿದೆ ಎಂದರು. ಸಾಹಿತ್ಯವೂ ಸಾಮಾಜಿಕ, ವೈಜ್ಞಾನಿಕ, ಆಧ್ಯಾತ್ಮಿಕ ಹೀಗೆ ಹಲವು ವಿಷಯಗಳಲ್ಲಿ ಜನತೆ ಎದುರಿಸುವ ಆತಂಕಗಳಿಗೆ ಪರಿಹಾರದ ಕ್ಷಮತೆ ಒದಗಿಸಬೇಕು.
ಸ್ತ್ರೀ ಸಬಲೀಕಣ, ಗಡಿ ವಿವಾದ, ರೈತರ ಗೋಳು, ಭ್ರಷ್ಟಾಚಾರ ನಿರ್ಮೂಲನೆ, ನ್ಯಾಯಾಂಗದ ಅವನತಿ, ಬಾಲಕಾರ್ಮಿಕರ ಸಮಸ್ಯೆಗಳು, ಬಾಲ್ಯವಿವಾಹದಂಥ ಅನೇಕ ಪಿಡುಗು ಗ್ರಾಮೀಣ ಭಾಗದಲ್ಲಿ ಹಾಗೆಯೇ ಉಳಿದಿವೆ. ಸರ್ಕಾರ ಈ ದಿಸೆಯಲ್ಲಿ ಪರಿಣಾಮಕಾರಿ ಯೋಜನೆ ಜಾರಿಗೆ ತರುವುದು ಅಗತ್ಯವಿದೆ ಎಂದರು.
ನ್ಯಾಯ ಬಗೆಹರಿಸಿ: ನ್ಯಾಯಾಲಯಗಳಲ್ಲಿ ಸಾವಿರ ಸಾವಿರ ಲಕ್ಷಗಟ್ಟಲೆ ಕೇಸುಗಳು ನ್ಯಾಯ ಕಾಣದೇ ತೀರ್ಪು ದೊರೆಯದೇ ಪಕ್ಷಗಾರರು ಕೋರ್ಟುಗಳಿಗೆ ಎಡತಾಕಿ ವಕೀಲರಿಗೆ ಪ್ರತಿ ಮುಂದೂಡುವಿಕೆಗೆ ಸಾವಿರಾರು ಹಣ ಸುರಿದು ಸೋತಿದ್ದಾರೆ. ನ್ಯಾಯ ಸಿಗುವ ಮುಂಚೆಯೇ ಸಾಕಷ್ಟು ಜನ ಸತ್ತು ಹೋಗಿದ್ದಾರೆ.
ಹೀಗಾಗಿ ಬುದ್ಧಿ ಜೀವಿಗಳು ತಮ್ಮ ಲಕ್ಷವನ್ನು ಇತ್ತ ಹೊರಳಿಸಿ ಕೇಸುಗಳ ಮುಂದೂಡಿಕೆಗೆ ಲಗಾಮು ಹಾಕುವ ವಿಧಾನ, ಸತ್ಯಾಗ್ರಹಗಳ ಮೂಲಕ ಸಂವಿಧಾನದಲ್ಲಿ ಕಾಯ್ದೆ ಮಾಡಿ ಒಂದೊಂದು ಕೇಸಿಗೆ ಕಟ್ಟು ನಿಟ್ಟಾದ ಅವಧಿಯ ಪರಿಮಿತಿ ಹಾಕುವುದು ಅವಶ್ಯವಿದೆ ಎಂದರು.