ದೇಶದ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ಶೀಘ್ರ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಘೋಷಿಸಿದ್ದರು. ಅಲ್ಲದೆ ಇದೇ ವರ್ಷ ಎಪ್ರಿಲ್‌ನಿಂದ ಈ ವ್ಯವಸ್ಥೆ ಜಾರಿಗೊಳಿ ಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಲಹೆಗಾರರನ್ನು ನೇಮಿಸಿದ್ದು, ನೂತನ ವ್ಯವಸ್ಥೆ ಕುರಿತು ಮಾಹಿತಿ.
ಎಪ್ರಿಲ್‌ನಿಂದಲೇ ಎಲ್ಲ ರಾಹೆಗಳಲ್ಲಿ ಹೊಸ ವ್ಯವಸ್ಥೆ ಜಾರಿ – ಹೇಗೆ ಕಾರ್ಯನಿರ್ವಹಿಸಲಿದೆ?
ಜಿಪಿಎಸ್ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯು ಹೆದ್ಧಾರಿಗಳಲ್ಲಿ ಅಳವಡಿ ಸಲಾಗಿರುವ ಕೆಮರಾಗಳ ಮೂಲಕ ಸ್ವಯಂ ಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ(ಎಎನ್‌ಪಿಆರ್) ವ್ಯವಸ್ಥೆಯನ್ನು ಬಳಸುತ್ತದೆ. ವಾಹನವು ಪ್ರಯಾಣಿಸುವ ದೂರದ ಆಧಾರದ ಮೇಲೆ ಟೋಲ್ ಮೊತ್ತವನ್ನು ಕಡಿತಗೊಳಿಸುತ್ತದೆ. ಪ್ರಸ್ತುತ ಫಾಸ್ಟಾಗ್, ಟೋಲ್ ಪ್ಲಾಜಾಗಳಲ್ಲಿ ಆರ್‌ಎಫ್ಐಡಿ ಆಧರಿಸಿ ಟೋಲ್ ಸಂಗ್ರಹಿಸಲಾಗುತ್ತಿದೆ.
-ಈ ಸಾಧನವು ಟೋಲ್ ರಸ್ತೆಗಳಲ್ಲಿ ನಿಮ್ಮ ಪ್ರವೇಶ ಮತ್ತು ನಿರ್ಗಮನ ಬಿಂದುಗಳನ್ನು ನಿಖರವಾಗಿ ಗುರುತಿಸುತ್ತದೆ. ಪ್ರಯಾಣದ ದೂರ ವಿಶ್ಲೇಷಿಸಿ, ಹಾದು ಹೋಗಿರುವ ಟೋಲ್ ಗುರುತಿಸಿ, ಅದಕ್ಕನುಗುಣ ವಾಗಿ ಶುಲ್ಕ ಲೆಕ್ಕ ಹಾಕಲಿದೆ.
-ಟೋಲ್‌ಗಳಲ್ಲಿ ಸರದಿ ಸಾಲಿನಲ್ಲಿ ನಿಲ್ಲುವುದು , ಫಾಸ್ಟಾಗ್ ಬ್ಯಾಲೆ ನ್ಸ್ ಪರಿಶೀಲಿಸುವುದನ್ನು ತಪ್ಪಿಸಲಿದೆ.
-ಸುರಕ್ಷಿತ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆ ಬಳಸಿಕೊಂಡು ನೀವು ಲಿಂಕ್ ಮಾಡಿದ ಖಾತೆಯಿಂದ ಟೋಲ್ ಶುಲ್ಕವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ.