ಕಾಲೇಜು ಅಂದಮೇಲೆ ಫ್ರೀ ಪೀರಿಯಡ್ ಬೇಕಲ್ವಾ? ಹೌದು, ಫ್ರೀ ಪೀರಿಯಡ್ ಇಲ್ಲದೆ ಇಡೀ ದಿನ ಪಾಠ ಕೇಳ್ಳೋದು ಅಂದರೆ ಅದು ಕಾಲೇಜು ಅನಿಸದೆ ಶಾಲೆ ಅನ್ಸಿಬಿಡುತ್ತೆ. ಒಂದು ದಿನ ಫ್ರೀ ಪೀರಿಯಡ್ ಇಲ್ಲವಾದರೆ ಆ ದಿನ ಪೂರ್ತಿ ಮೂಡ್ ಆಫ್. ಕಾಲೇಜಿಗೆ ಹೋದ ತತ್‌ಕ್ಷಣ ಮೊದಲು ಮಾಡುವ ಕೆಲಸವೇ ಇವತ್ತು ಯಾವ ಲೆಕ್ಚರರ್ ಬಂದಿಲ್ಲ ಅಂತ ನೋಡುವುದು, ಯಾರಾದ್ರೂ ಬಂದಿಲ್ಲದಿದ್ದರೆ ಆವತ್ತು ಆ ಪೀರಿಯೆಡ್ ಫ್ರೀ ಇರುತ್ತೆ. ನಮಗೆ ಹಬ್ಬವೇ. ಅದರಲ್ಲೂ ಇಬ್ಬರು ಲೆಕ್ಚರರ್ ಏನಾದ್ರೂ ಬಂದಿಲ್ಲ ಅಂದ್ರೆ ಅವತ್ತು ನಮಗೆ”ಡಬಲ್ ಸೆಂಚುರಿ’ ಹೊಡೆದಷ್ಟು ಸಂತೋಷ!
“ಫ್ರೀ ಪೀರಿಯಡ್‌ನಲ್ಲಿ ನೀವು ಏನ್ ಮಾಡ್ತೀರಾ?’ ಅಂತಯಾರಾದ್ರೂ ಕೇಳಿದ್ರೆ ಕೆಲವರು, “ನಾವು ಮನೆಗೆ ಹೋಗ್ತಿವಿ’ ಎನ್ನುತ್ತಾರೆ. ಇನ್ನು ಕೆಲವರು, “ನಾವು ಗ್ರಂಥಾಲಯಕ್ಕೆ ಅಥವಾ ಕಂಪ್ಯೂಟರ್ ರೂಮ್‌ಗೆ ಹೋಗ್ತಿàವಿ’ ಅಂತಾರೆ. ಅದರಲ ್ಲೂ “ನಾವು ಹರಟೆ ಹೊಡಿತೀವಿ’ ಅಂತ ಹೇಳುವವರೇ ಜಾಸ್ತಿ.
ಅದೇನೇ ಇರಲಿ, ಅದರ ಬದಲು ಇರುವ 50 ನಿಮಿಷದ ಪೀರಿಯಡ್‌ನಲ್ಲಿ ಗೆಳತಿಯರ ಮನೆ ಹತ್ತಿರವಿದ್ದರೆ ಅಲ್ಲಿಗೆ ಹೋಗೋದು, ಅವರ ಮುಂದಿನ ಆಸೆ, ಅವರ ಮನೆಯ ವಿಷಯ, ಪಾಠದ ವಿಷಯ… ಹೀಗೆ ಅಲ್ಲಿ ಮಾತನಾಡಬಹುದು. ಕೆಲವೊಮ್ಮೆ ಮಾತಾಡ್ತಾ ಮಾತಾಡ್ತಾ ಟೈಮ್ ಆಗೋದೇ ಗೊತ್ತಾಗಲ್ಲ, “ಅಯ್ಯೋ ಎಷ್ಟು ಬೇಗ ಬೆಲ್ ಆಯ್ತು’ ಅಂತ ಅನ್ನಿಸುವುದಿದೆ. ಅದೇ ಕ್ಲಾಸ್ ನಡೀತಿದ್ರೆ ಲೆಕ್ಚರರ್‌ಗಳ ಲೆಕ್ಚರ್ ಕೇಳುತ್ತಾ ಬೋರ್ ಆಗಿ ಯಾವಾಗ ಬೆಲ್ ಆಗುತ್ತೋ ಅಂತ ಕಾಯ್ತಾ ಇರಿ¤àವಿ!
ಏನೇ ಆಗ್ಲಿ , ಫ್ರೀ ಪೀರಿಯಡ್ ಅಂತೂ ಬೇಕೇ ಬೇಕು ಅಲ್ವಾ. ಫ್ರೀ ಪೀರಿಯಡ್ ನಮ್ಮ ಇಡೀ ಕಾಲೇಜು ದಿನದ ತುಂಬ ಸಂತೋಷದ ಟೈಮ್ ಆಗಿರುತ್ತದೆ. ಫ್ರೀ ಪೀರಿಯಡ್‌ನಲ್ಲಿ ನಾವು ನಮ್ಮ ಮನೆಯ ಯಾವುದೇ ತೊಂದರೆ ಇರಬಹುದು, ಯಾವುದೇ ಖುಷಿ ಇರಬಹುದು, ಅದನ್ನು ಫ್ರೆಂಡ್ಸ್ ಜೊತೆ ಹಂಚಿಕೊಂಡು ಖುಷಿ ಪಟ್ಟಿದ್ದೇವೆ. ಹಾಗೆಯೇ ಮನಸ್ಸಿನ ದುಃಖವನ್ನು ಅವರಲ್ಲಿ ಹೇಳಿಕೊಂಡು ಹಗುರಾಗಿದ್ದೂ ಉಂಟು.
ಫ್ರೀ ಪೀರಿಯಡ್ ಅಂತ ಗೆಳತಿಯರ ಜೊತೆ ಅದೂ ಇದೂ ಮಾತಾಡ್ತಾ ಹರಟೆ ಹೊಡೀತಾ ಇದ್ರೆ ಪಕ್ಕದ ಕ್ಲಾಸಿಗೆ ಡಿಸ್ಟರ್ಬ್ ಆಗುತ್ತೆ ಅಂತಲೂ ನಮಗೆ ಗೊತ್ತಿತ್ತು. ಹಾಗಾಗದಂತೆ ಎಚ್ಚರ ವಹಿಸುತ್ತಿದ್ದೆವು. ಪರೀಕ್ಷೆಯ ಸಮಯದಲ್ಲಿ ಲೆಕ್ಚರರ್ ಬಾರದಿದ್ದಾಗ ಓದುತ್ತಿದ್ದೆವು. ಲೈಬ್ರೆರಿಗೆ ಹೋಗಿ ಪುಸ್ತಕಗಳನ್ನು ಓದುತ್ತಿದ್ದೆವು. ಪಾಠದ ವಿಷಯ ಹಾಗೂ ಪಠ್ಯೇತರ ವಿಷಯಗಳ ಬಗೆಗೂ ಡಿಸ್ಕಸ್ ಮಾಡುತ್ತಿದ್ದೆವು. ಅರ್ಥವಾಗದ, ಕ್ಲಿಷ್ಟವೆನಿಸುವ ವಿಷಯಗಳನ್ನು ಲೆಕ್ಚರರ್ಗಳ ಜೊತೆ, ಫ್ರೆಂಡ್ಸ್‌ಗಳ ಜೊತೆ ಕೇಳಿ ತಿಳಿಯುತ್ತಿದ್ದೆವು. ಅಂತೂ ಫ್ರೀ ಟೈಮ್‌ನ್ನು ಸುಮ್ಮನೆ ಹಾಳುಮಾಡದೆ ಉಪಯೋಗಿಸಿಕೊಂಡದ್ದೇ ಹೆಚ್ಚು.
“ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್’ ಅನ್ನೋ ಪ್ರಖ್ಯಾತ ವಾಕ್ಯವೇ ಇದೆ. ಓದುವ ಸಮಯ ಎನ್ನುವುದು ನಾವು ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಒಂದು ಸುವರ್ಣ ಅವಕಾಶ. ಹಾಗಾಗಿ ಆ ಅಮೂಲ್ಯವಾದ ಸಮಯವನ್ನು ಹಾಳುಮಾಡದೆ ಸದುಪಯೋಗಿಸಿಕೊಂಡರೆ ನಾವು ನಮ್ಮ ಗುರಿಯನ್ನು ತಲುಪಬಹುದು.
–
ಸೋನಾ
ದ್ವಿತೀಯ ಬಿ.ಕಾಂ.
ಶ್ರೀ ವೆಂಕಟರಮಣ ಮಹಿಳಾ ಕಾಲೇಜು, ಕಾರ್ಕಳ