Advertisement

“ಕಣ್ತೆರೆ’ಯುವ ಗಳಿಗೆ ಬರುವುದೇ?

06:40 AM Sep 01, 2017 | Team Udayavani |

ಸನಾ: ಸಿರಿಯಾ, ಯೆಮೆನ್‌ನ ಯುದ್ಧ ಭೀಕರತೆಯನ್ನು ಸಾರಿ ಹೇಳುವಂಥ ಫೋಟೊಗಳು ಇಡೀ ಜಗತ್ತನ್ನು ನೋವಿನಲ್ಲಿ ಮುಳುಗಿಸುತ್ತಿವೆ. ಕಳೆದ ವರ್ಷ ಧೂಳಿನಿಂದ ಮುಚ್ಚಿದ್ದ ಮುಖದಲ್ಲಿ ರಕ್ತ ಒರೆಸಿಕೊಳ್ಳುತ್ತಿದ್ದ  4 ವರ್ಷ ವಯಸ್ಸಿನ ಒಮ್ರಾನ್‌ ಎಂಬ ಮಗುವಿನ ಹಾಗೂ ಕಡಲ ತಡಿಯಲ್ಲಿ ಶವವಾಗಿ ತೇಲಿಬಂದಿದ್ದ ಮಗುವಿನ ಫೋಟೋ ಇಡೀ ವಿಶ್ವವನ್ನೇ ಕಂಗೆಡಿಸಿತ್ತು. ಇದೀಗ ಮನಕಲಕುವಂಥ ಅಂಥದ್ದೇ ಮತ್ತೂಂದು ಫೋಟೊ ಬಹಿರಂಗವಾಗಿದೆ.

Advertisement

ಯೆಮೆನ್‌ನಲ್ಲಿ ವಾಯುದಾಳಿಯಲ್ಲಿ ಸಿಲುಕಿ ತೀವ್ರವಾಗಿ ಗಾಯಗೊಂಡಿರುವ 4 ವರ್ಷ ವಯಸ್ಸಿನ ಮಗು ಬುಥೈನಾ ಮೊಹಮ್ಮದ್‌ ಮನ್ಸೂರ್‌, ತೆರೆಯಲು ಸಾಧ್ಯವಿಲ್ಲದಷ್ಟು ಊದಿಕೊಂಡಿರುವ ಕಣ್ಣನ್ನು ಕೈ ಸಹಾಯದಿಂದ ತೆರೆದು ನೋಡಲು ಪ್ರಯತ್ನಿಸುತ್ತಿರುವ ದೃಶ್ಯ ಮನಕಲಕುವಂತಿದೆ. ಬುಥೈನಾ ಇದ್ದ ಸನಾದ ಅಪಾರ್ಟ್‌ಮೆಂಟ್‌ ಮೇಲೆ ವಾಯು ದಾಳಿ ನಡೆದು ಮನೆ ನೆಲಸಮವಾಗಿದೆ. ಕುಟುಂಬದ 8 ಜನರಲ್ಲಿ ಬದುಕುಳಿದದ್ದು ಈ ಪುಟ್ಟ ಮಗು ಮಾತ್ರ. ಆಕೆಗೆ ತನ್ನ ಕುಟುಂಬದ ಯಾರೂ ಬದುಕಿಲ್ಲ ಎಂಬ ಅರಿವೂ ಇಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆ ಮೃತಪಟ್ಟಿರುವ ತನ್ನ ಸಂಬಂಧಿ ಮೌರಿನ್‌ರನ್ನು ಕೂಗುತ್ತಾಳೆ. ಆಕೆಯ ಮತ್ತೂಬ್ಬ ಸಂಬಂಧಿ ಹೇಳುವಂತೆ, ಯುದ್ಧಪೀಡಿತ ಪ್ರದೇಶದಲ್ಲಿದ್ದ ಬುಥೈನಾ ಕುಟುಂಬದವರ ಯೋಗಕ್ಷೇಮ ವಿಚಾರಿ ಸಲು ಮೌರಿನ್‌ ತೆರಳಿದ್ದರು. ಈ ವೇಳೆ ದಾಳಿ ನಡೆದು ಮೌರಿನ್‌ ಸಹಿತ ಬುಥೈನಾ ಕುಟುಂಬದ ಎಲ್ಲರೂ ಮೃತರಾದರು.

Advertisement

Udayavani is now on Telegram. Click here to join our channel and stay updated with the latest news.

Next