ಚೆನ್ನೈ: ಬಹುನಿರೀಕ್ಷಿತ ಓಲಾ ಎಲೆಕ್ಟ್ರಿಕ್ ಸ್ಕೂಟರ್ ರವಿವಾರ ಬಿಡುಗಡೆಯಾಗಿದೆ. ಎಸ್1 ಮತ್ತು ಎಸ್1 ಪ್ರೊ ಹೆಸರಿನ ಎರಡು ಮಾದರಿಗಳಲ್ಲಿ ಸ್ಕೂಟರ್ ಮಾರುಕಟ್ಟೆಗೆ ಬಂದಿದೆ. ಇದರ ಆರಂಭಿಕ ಬೆಲೆ 1 ಲಕ್ಷ ರೂ. ಆಗಿದೆ. ಎಸ್1 ವೇರಿ ಯೆಂಟ್ ಬೆಲೆ 99,999 ರೂ.( ಎಕ್ಸ್ ಶೋ ರೂಂ) ಇದ್ದರೆ, ಎಸ್1 ಪ್ರೊ ಬೆಲೆ 1,29,999 ರೂ.. ಪ್ರೊನಲ್ಲಿ ವಿಶಿಷ್ಟವಾಗಿ ವಾಯ್ಸ್ ಕಂಟ್ರೋಲ್, ಹಿಲ್ ಹೋಲ್ಡ್, ಕ್ರೂಸ್ ಕಂಟ್ರೋಲ್ ನೀಡಲಾಗಿದೆ.
ಇದನ್ನೂ ಓದಿ‘ಸರಿಯಾಗಿ ರಾಷ್ಟ್ರಗೀತೆ ಹಾಡಿ’ ಎಂದ ವ್ಯಕ್ತಿಗೆ ನಟ ಸುದೀಪ್ ಹೇಳಿದ್ದೇನು ?
ಎಸ್1 ಸ್ಕೂಟರ್ ಒಮ್ಮೆ ಪೂರ್ತಿ ಚಾರ್ಜ್ ಆದರೆ 121 ಕಿಮೀವರೆಗೆ ಮೈಲೇಜ್ ನೀಡುತ್ತದೆ (ಗರಿಷ್ಠ ವೇಗ 90 ಕಿಮೀ). ಪ್ರೊ ಗಾಡಿಯು 181ಕಿಮೀವರೆಗೆ ಮೈಲೇಜ್ ಕೊಡುತ್ತದೆ (ಗ ರಿಷ್ಠ ವೇಗ 115 ಕಿಮೀ). ಎಸ್1 ಗಾಡಿ ಯನ್ನು 3.6 ಸೆಕೆಂಡ್ ಗಳಲ್ಲಿ 0-40 ಕಿಮೀ ವೇಗಕ್ಕೆ ಹಾಗೂ 7 ಸೆಕೆಂಡ್ ಗಳಲ್ಲಿ 0-60 ಕಿಮೀ ವೇಗಕ್ಕೆ ವೇಗ ಹೆಚ್ಚಿಸಬಹುದು. ಪ್ರೊಗಾಡಿಯಲ್ಲಿ ಈ ಸಮಯ ಕ್ರಮವಾಗಿ 3, 5 ಸೆಕೆಂಡ್ ಗಳಷ್ಟಿದೆ. ಎಸ್1 ಗಾಡಿ ಪೂರ್ತಿ ಚಾರ್ಜ್
ಆಗಲು 4 ಗಂಟೆ 48 ನಿಮಿಷ ತೆಗೆ ದುಕೊಂಡರೆ ಪ್ರೊ ಗಾಡಿಗೆ 6 ಗಂಟೆ 30 ನಿಮಿಷ ಬೇಕು.
ಎರಡೂ ಸ್ಕೂಟರ್ ನಲ್ಲಿ 3ಜಿಬಿ RAM ಇರುವ ಸ್ಮಾರ್ಟ್ ವೆಹಿಕಲ್ ಕಂಟ್ರೋಲ್ ಯುನಿಟ್ ಅಳವಡಿಸಲಾಗಿದೆ. ವೈಫೈ, ಬ್ಲೂಟೂತ್ ಮೂಲಕ ಕೆಲಸ ಮಾಡುವ ಇದು ರೋಡ್ ಮ್ಯಾಪ್ ತೋರಿಸುವುದರಿಂದ ಹಿಡಿದು ಅನೇಕ ಸ್ಮಾರ್ಟ್ ವರ್ಕ್‌ಗಳನ್ನು ಮಾಡುತ್ತದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅಕ್ಟೋಬರ್ ನಲ್ಲಿ ಗ್ರಾಹಕರ ಮನೆಗಳಿಗೆ ಪೂರೈಕೆ ಮಾಡುವ ಉದ್ದೇಶ ಹೊಂದಿದೆ.