ಹುಬ್ಬಳ್ಳಿ: ರಾಷ್ಟ್ರ ಭಾಷೆ ವಿಚಾರದ ಕುರಿತು ಚಿತ್ರನಟ ಸುದೀಪ್ ಹೇಳಿರುವುದು ಸರಿಯಾಗಿದೆ. ನಮ್ಮ ರಾಜ್ಯಗಳು ಭಾಷಾವಾರು ಪ್ರಾಂತ್ಯಗಳು. ಆ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳು, ಮಾತೃ ಭಾಷೆಗಳಿಗೆ ಮಹತ್ವವಿದೆ. ಅದೇ ಸಾರ್ವಭೌಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವನ್ನೇ ಸುದೀಪ್ ಹೇಳಿದ್ದಾರೆ. ಇದನ್ನು ಎಲ್ಲರೂ ಮನಗಾಣಬೇಕು ಮತ್ತು ಗೌರವ ನೀಡಬೇಕೆಂದು ಹೇಳುವ ಮೂಲಕ ಸುದೀಪ್ ಹೇಳಿಕೆಯನ್ನು ಬೆಂಬಲಿಸಿದರು.
ಇದನ್ನೂ ಓದಿ:ಎಲ್ಲಾ ಭಾಷೆಗೂ ಈ ದೇಶದಲ್ಲಿ ಸಮಾನ ಮಾನ್ಯತೆಯಿದೆ: ಡಿ.ಕೆ. ಶಿವಕುಮಾರ್
ನಟ ಸುದೀಪ್ ಹೇಳಿಕೆಗೆ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡಾ ಬೆಂಬಲ ಸೂಚಿಸಿದ್ದಾರೆ.