Advertisement

ಕೆಲವು ರಾಜ್ಯಗಳಲ್ಲಿ SSLC ಪರೀಕ್ಷೆ ರದ್ದು ಮಾಡುವ ನಿರ್ಧಾರದ ಕುರಿತು ನಿಮ್ಮ ಅಭಿಪ್ರಾಯವೇನು ?

04:16 PM Jun 10, 2020 | keerthan |

ಮಣಿಪಾಲ: ತೆಲಂಗಾಣ, ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆ ರದ್ದು ಮಾಡಲು ನಿರ್ಧರಿಸಿರುವುದರ ಕುರಿತು ನಿಮ್ಮ ಅಭಿಪ್ರಾಯವೇನು? ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ರಾನು ಕಂಬ್ಳೆ; ಒಳ್ಳೆಯ ನಿರ್ಧಾರ. ಮಕ್ಕಳ ಆರೋಗ್ಯ ಮುಖ್ಯ. ಅಂಕಗಳ ಹಿಂದೆ ಹೋಗಬೇಡಿ, ವಿಷಯದ ಪರಿಕಲ್ಪನೆ ಬೇಕು. ಫಲಿತಾಂಶ ಕೇವಲ ಮುಂದಿನ ತರಗತಿಗೆ ಹೋಗುವ ಅನುಮತಿ ಇದ್ದಾಗೆ, ಮಕ್ಕಳು ಪರೀಕ್ಷೆ ಬರೆಯೊಕೆ ಹೋದಾಗ ಕೋವಿಡ್-19 ರೋಗಿಗೆ ತುತ್ತಾದರೆ, ಏನು ಮಾಡತ್ತಿರಾ.? ಪರೀಕ್ಷೆ ರದ್ದು ಪಡಿಸಿ, ಅವರ ರಾಜ್ಯದ ಮಕ್ಕಳ ಆರೋಗ್ಯ ಮುಖ್ಯ ಎಂದು ತೋರಿಸಿಕೊಟ್ಟ ರಾಜ್ಯಗಳಿಗೆ ನನ್ನ ವಂದನೆಗಳು

ಸತೀಶ್ ರಾವ್:  ವಿದ್ಯಾರ್ಥಿಗಳ ಹಿತ,ಸ್ವಾಸ್ಥ್ಯ,ಆರೋಗ್ಯ ದೃಷ್ಠಿಯಿಂದ ಹೇಳುವುದಾದರೆ SSLC ಪರೀಕ್ಷೆ ಗಳನ್ನು ಮುಂದುದೂಡುವುದು ಒಳ್ಳೆಯದು’

ಕಿರಣ್ ಕುಮಟಾ:  ಎಕ್ಸಾಮ್ ಆಗಲೇಬೇಕು. ಯಾವುದ ಒಂದು ಕ್ರೀಡಾಂಗಣದಲ್ಲಿ ಆಟವಾಡದೇ ವಿನ್ ಅಂತಾ ಹೇಳೋಕೆ ಆಗಲ್ಲ.  ಮುಂಜಾಗ್ರತಾ ಕ್ರಮ ವಹಿಸಿ ಪರೀಕ್ಷೆಗಳು ನಡೆಸುವುದು ಒಳಿತು. ಈ ತರ ಎಕ್ಸಾಮ್ ರದ್ದು ಮಾಡಿ ಪಾಸ್ ಮಾಡೋದಾದರೆ ಕೆಲವೊಂದು ವಿದ್ಯಾರ್ಥಿಗಳ ಪರಿಶ್ರಮಕ್ಕೆ ಅರ್ಥ ಇಲ್ಲದೇ ಇರೋ ತರ ಆಗುತ್ತದೆ. ಪರೀಕ್ಷೆಗಳು ನಡೆಸಿ ಸುರಕ್ಷತಾ ಕ್ರಮಗಳು ಕಟ್ಟು ನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಿ

ಸುರೇಶ್ ಸಾಲ್ಯಾನ್:  ಜಸ್ಟ್ ಪಾಸ್ ಆಗೋ ವಿದ್ಯಾರ್ಥಿಗಳು ಫೇಲ್ ಆದರೆ ಯಾರು ಹೊಣೆ? ಉನ್ನತ ಶಿಕ್ಷಣಕ್ಕಾಗಿ ರ್ಯಾಂಕ್ ವಿದ್ಯಾರ್ಥಿಗಳು ಪ್ರವೇಶ ಪಡೆವ ವೇಳೆ ಪರೀಕ್ಷೆ ಮಾಡಲಿ.

Advertisement

ರಮೇಶ್ ಬಿವಿ:  ಪಾಸಾದ ಅಷ್ಟೂ ವಿದ್ಯಾರ್ಥಿಗಳಿಗೆ ಪಿಯುಸಿ ಓದಲು ಕಾಲೇಜಿನಲ್ಲಿ ಜಾಗ ಸಿಗುತ್ತಾ ಅಷ್ಟೊಂದು ಕಾಲೇಜುಗಳು ಇವೆಯಾ. ಇದ್ದರೂ ಯಾವ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಸೀಟ್ ಕೊಡ್ತಾರೆ. ಯೋಚಿಸಿ ನಿರ್ಧಾರ ಮಾಡಬೇಕಿತ್ತು

ಸಂತೋಷ್ ಕುಮಾರ್ ದೇವಿ ಶೆಟ್ಟಿ ಎಂ: ಅಯ್ಯೋ ಎಸ್ಎಸ್ಎಲ್ ಸಿ ಅಷ್ಟೇ ಸಾಕ ಅದೇ ತರಹದ ಪಿಯುಸಿನೂ ಪಾಸ್ ಮಾಡಿ. ನಿಮ್ಮ ಈ ಆಜ್ಞೆ ದಡ್ಡನಿಗೆ ಹಾಲು ತುಪ್ಪ ಕೊಟ್ಟ ಹಾಗೆ ಜಾಣನಿಗೆ ವಿಷ ಉಣಿಸಿದ ಹಾಗೆ ಸೋ ದಯವಿಟ್ಟು ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಿ. ಆಗೆ ಪಾಸ್ ಮಾಡಬೇಡಿ

ರವಿ ಕುಮಾರ್ : ನಿರ್ಧಾರ ಸರಿಯಲ್ಲ. ಮುಂದಿನ ದಿನಗಳಲ್ಲಿ ಯಾವ ಆಧಾರದ ಮೇಲೆ ಮುಂದಿನ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಿರಿ.

ಗಂಗಾಧರ್: ಸಾಮಾಜಿಕ ಅಂತರ ಕಾಯ್ದುಕೊಂಡು ಬಾರ್ ಗಳಲ್ಲಿ ಮದ್ಯ ಖರೀದಿ ಮಾಡಬಹುದು ಸಾಮಾಜಿಕ ಅಂತರ ಕಾಯ್ದುಕೊಂಡು ದೇವಾಲಯಗಳಲ್ಲಿ ಪ್ರಾರ್ಥನೆ ಪೊಜೇ ಸಲ್ಲಿಸ ಬಹುದು! ಬಸ್ಸು ಗಳಲ್ಲಿ ಸಂಚಾರಿಸಬಹುದು.  ಆದರೇ ಪರೀಕ್ಷೆ ಬರೆಯಲು ಮಾತ್ರ ಆಗಲ್ಲ ಯಾಕೆ? ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಬಳಸಿಕೊಂಡು ಪರೀಕ್ಷೆ ಮಾಡಬೇಕು ಮಕ್ಕಳ ಮುಂದಿನ ಭವಿಷ್ಯಕ್ಕಾಗಿ.

Advertisement

Udayavani is now on Telegram. Click here to join our channel and stay updated with the latest news.

Next