Advertisement
“ವ್ಯಾಕ್ಯೂಮ್ ಬಾಂಬ್’ ವ್ಯಾಖ್ಯಾನವೇನು? ಇದು ಸಾಂಪ್ರದಾಯಿಕ ಶೈಲಿಯ ಬಾಂಬ್‌ಗಳಿಗಿಂತ ಭಿನ್ನ. ಹೆಚ್ಚು ಸಾವು ಉಂಟು ಮಾಡುವುದೇ ಈ ಬಾಂಬ್ ಉಪಯೋಗದ ಮುಖ್ಯ ಉದ್ದೇಶ. ಇದರಲ್ಲಿ ಎರಡು ರೀತಿಯ ಪದಾರ್ಥಗಳಿರುತ್ತವೆ. ಒಂದು – ವಾತಾವರಣದಲ್ಲಿ ಅತ್ಯುಷ್ಣ ಉಂಟು ಮಾಡುವ ಶಕ್ತಿಶಾಲಿ ಸ್ಫೋಟಕ. ಮತ್ತೊಂದು -ಏರೋಸೋಲ್‌ಗಳು. (ಸರಾಗವಾಗಿ ಗಾಳಿಯಲ್ಲಿ ಹರಿದಾಡುವಂಥ ರಾಸಾಯನಿಕ ಅಥವಾ ವಸ್ತುವಿನ ಸೂಕ್ಷ್ಮ ಕಣಗಳು)
ಈ ಬಾಂಬ್, ಒಂದು ಶೆಲ್ ಮಾದರಿಯಲ್ಲಿದ್ದು ಅದು ಮೂರು ವಿಭಾಗಗಳನ್ನು ಹೊಂದಿರುತ್ತದೆ. ಮೇಲು¤ದಿಯ ವಿಭಾಗದಲ್ಲಿ ಏರೋಸೋಲ್ ಹಾಗೂ ದ್ರವರೂಪದ ಇಂಧನವಿರುತ್ತದೆ. ಮಧ್ಯದ ವಿಭಾಗದಲ್ಲಿ ಶಕ್ತಿಶಾಲಿ ಸ್ಫೋಟಕವಿರುತ್ತದೆ. ಶೆಲ್‌ನ ಕೆಳಭಾಗದ ವಿಭಾಗದಲ್ಲಿ ಗ್ರೆನೇಡ್ ಹಾಗೂ ಪ್ಯಾರಾಚೂಟ್ ಇರುತ್ತದೆ. ನಿರ್ದಿಷ್ಟ ಪ್ರದೇಶದಲ್ಲಿ ಈ ಬಾಂಬ್ ಶೆಲ್ ಸ್ಫೋಟಗೊಂಡಾಗ ಎರಡು ಬಾರಿ ಸ್ಫೋಟಗಳಾಗುತ್ತವೆ. ಮೊದಲ ಸ್ಫೋಟದ ವೇಳೆ ಶೆಲ್‌ನ ಮಧ್ಯಭಾಗ ಸ್ಫೋಟಗೊಂಡು, ಶೆಲ್‌ನ ಮೇಲ್ಭಾಗದಲ್ಲಿರುವ ಇಂಧನ ಹಾಗೂ ಏರೋಸೋಲ್ ಕಣಗಳು ಹೊರಬರುತ್ತವೆ. ದ್ರವರೂಪದ ಇಂಧನ, ಅನಿಲದ ಕಣಗಳಾಗಿ ಮಾರ್ಪಟ್ಟು ವಾತಾವರಣದಲ್ಲಿ ಹರಡುತ್ತದೆ. ಆ ಕಣಗಳೊಂದಿಗೆ ಏರೋಸೋಲ್ ಕಣಗಳೂ ಹರಡಿ ವಾತಾವರಣದಲ್ಲಿದ್ದ ಆಮ್ಲಜನಕವನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತವೆ.
Related Articles
Advertisement
ಇತರ ಹೆಸರುಗಳು:– ಥರ್ಮೋಬೋರಿಕ್ ಬಾಂಬ್
– ಏರೋಸೋಲ್ ಬಾಂಬ್ ಸಾಂಪ್ರದಾಯಿಕ ಬಾಂಬ್ “ವರ್ಸಸ್’ ವ್ಯಾಕ್ಯೂಮ್ ಬಾಂಬ್
1. ಸ್ಫೋಟಕ ಮತ್ತು ಲೋಹದ ಚೂರುಗಳ ಬಳಕೆ- ಸ್ಫೋಟಕದ ಜೊತೆಗೆ ಏರೋಸೋಲ್‌ಗಳ ಬಳಕೆ
2. ಲೋಹದ ಚೂರುಗಳಿಂದ ಮಾತ್ರ ಜನರ ಸಾವು – ಏರೋಸೋಲ್ ಹಾಗೂ ಗರಿಷ್ಠ ಉಷ್ಣಾಂಶದ ಮೂಲದ ಹೆಚ್ಚಿನ ಜನರ ಸಾವು.
3. ನಿರ್ದಿಷ್ಟ ವಲಯದಲ್ಲಿ ವ್ಯಾಪ್ತಿ ಹಾಗೂ ಭೀಕರತೆ – ದುಷ್ಪರಿಣಾಮ, ನಿರ್ದಿಷ್ಟ ವಲಯವನ್ನೂ ದಾಟುವ ಸಾಧ್ಯತೆ
4. ತಡೆಗೋಡೆಗಳಿದ್ದರೆ ಮನುಷ್ಯರು ಬಚಾವ್ ಆಗುವ ಸಾಧ್ಯತೆ – ತಡೆಗೋಡೆಗಳಾಚೆಗೆ ಇರುವ ಜನರನ್ನೂ ಕೊಲ್ಲಬಹುದಾದ ಸಾಧನ
5. ಪ್ರತಿಯೊಂದು ದೇಶದಲ್ಲೂ ಕಾನೂನಾತ್ಮಕ ನಿಷೇಧ – ಕಾನೂನಾತ್ಮಕ ನಿಷೇಧದ ಬಗ್ಗೆ ಇನ್ನೂ ನಿರ್ಧಾರವಿಲ್ಲ. 150 -200 ಕಿ.ಮೀ.
ವ್ಯಾಕ್ಯೂಮ್ ಬಾಂಬ್ ದುಷ್ಪರಿಣಾಮದ ವಲಯ
—–
ಶೇ. 75
ಸಾಂಪ್ರದಾಯಿಕ ಬಾಂಬ್‌ಗಳಲ್ಲಿ ಅಳವಡಿಸುವ ಸ್ಫೋಟಕ ಪ್ರಮಾಣ
—–
ಶೇ. 100
ವ್ಯಾಕ್ಯೂಮ್ ಬಾಂಬ್‌ಗಳಲ್ಲಿ ಅಳವಡಿಸುವ ಸ್ಫೋಟಕದ ಪ್ರಮಾಣ
————-
40 ಟನ್
ಪ್ರತಿಯೊಂದು ವ್ಯಾಕ್ಯೂಮ್ ಬಾಂಬ್‌ನ ತೂಕ