Advertisement
ಒಬ್ಬನ ದುಷ್ಟತನ ಗುರುತಿಸುವುದು ಜಾತಕಗಳಿಂದ ಸಾಧ್ಯಜನ್ಮಕುಂಡಲಿಗಳು ಒಬ್ಬನ ದುಷ್ಟತನ ಅಥವಾ ಸಾಚಾತನಗಳನ್ನು ಗುರುತಿಸಲು ನೆರವಾಗುತ್ತದೆ. ಮನೋಸ್ವಭಾವದಲ್ಲಿನ ನೇರ, ನಡೆನುಡಿಗಳ ವಿಷಯವಾಗಿ ವ್ಯಕ್ತಿಯೋರ್ವನ ಕುರಿತು ಜಾತಕ ಬೆಳಕು ಚೆಲ್ಲುತ್ತದೆ. ಒಬ್ಬನ ದುಷ್ಟತನದ ಒಟ್ಟೂ ಮೊತ್ತ ಇದೇ ಗಾತ್ರದಲ್ಲಿ ಅಡಕಗೊಂಡಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಬಹುದು. ವ್ಯಕ್ತಿತ್ವದ ವರ್ಚಸ್ಸಿನ
ಭಾಗಗಳನ್ನು ಬಹು ಮುಖ್ಯವಾಗಿ ಒಬ್ಬ ವ್ಯಕ್ತಿಯ ಲಗ್ನಭಾವದಲ್ಲಿ ಪ್ರಧಾನವಾಗಿ ಕಂಡುಕೊಳ್ಳಬಹುದು. ಲಗ್ನಭಾವವು ಆ ವ್ಯಕ್ತಿಯ ಹುಟ್ಟಿದ ಕ್ಷಣದ ಘನಿತ ಬಿಂದು. ಇದನ್ನು ಆ ವ್ಯಕ್ತಿ ಹುಟ್ಟಿದ ದಿನಾಂಕದ ಹುಟ್ಟಿದ ವೇಳೆಯ ಅಂತೆಯೇ ಹುಟ್ಟಿದ ಊರು ಯಾವುದೆಂಬುದರ ಮೇಲಿಂದ ನಿಖರವಾಗಿ ಪಡೆದುಕೊಳ್ಳಬಹುದು. ಈ ಘನಿತ ಬಿಂದುವಿನ ಒಡೆಯನಾಗಿ ಒಂದು ನಿರ್ದಿಷ್ಟ ಗ್ರಹ ಕೆಲಸ ಮಾಡುತ್ತದೆ. ಗ್ರಹಗಳಲ್ಲಿ ಕ್ರೂರ ಗ್ರಹಗಳು, ಸೌಮ್ಯ ಗ್ರಹಗಳು ಎಂಬ ವಿಭಾಗೀಕರಣವಿದೆ. ಗ್ರಹಗಳಲ್ಲಿ ನಿರಂತರವಾಗಿ ನಿಂತ ನೀರಾಗದೆ ಚಲಿಸುವ ಮನೋಭಾವವನ್ನು ಒದಗಿಸುವ ಧಾತುಗಳು ಒದಗಿದವಾದರೆ ವ್ಯಕ್ತಿಯ ಮನೋಗತದಲ್ಲಿ ಉಂಟಾಗುವ ಸ್ವಭಾವಗಳು ಪ್ರತ್ಯೇಕವಾಗಿರುತ್ತದೆ. ಸ್ಥಿರತೆಯನ್ನು ಅಥವಾ ಇಬ್ಬಂದಿತನವನ್ನು ಒದಗಿಸುವ ಶಕ್ತಿಯನ್ನು ಗ್ರಹಗಳು ಪಡೆದವು ಎಂದಾದರೆ ಸ್ವಭಾವಗಳು ಆ ನಿಟ್ಟಿನಲ್ಲಿ ತಮ್ಮ ಗುಣಧರ್ಮವನ್ನು ಪಡೆಯುತ್ತದೆ. ಒಬ್ಬ ದುಷ್ಟನ ನಿರ್ಮಾಣ ಕೇವಲ ಕ್ರೂರಗ್ರಹಗಳಾದ ಶನಿ,ಕುಜ, ಸೂರ್ಯ, ರಾಹು, ಕೇತುಗಳ ಮೇಲಿಂದಲೇ ರೂಪ ಪಡೆಯಬೇಕಿಲ್ಲ. ಅಂತಾರಾಷ್ಟ್ರೀಯವಾಗಿ ತನ್ನ ಕುಕೃತ್ಯಗಳಿಂದ ಗಮನಸೆಳೆದ ಚಾರ್ಲ್ಸ್ ಶೋಭರಾಜ್ ವ್ಯಕ್ತಿತ್ವವನ್ನು ಋಣಾತ್ಮಕ ದಿಸೆಯತ್ತ ದೂಡುವಲ್ಲಿ ಪ್ರಧಾನವಾದ ಪಾತ್ರವನ್ನು ಸೌಮ್ಯಗ್ರಹವಾದ ಬುಧನೇ ಪ್ರಧಾನವಾಗಿ ಪ್ರಾಪ್ತಿಮಾಡಿದ್ದಾನೆ. ಮನೋಹರವಾದ ರೂಪವನ್ನು ಬುದ್ಧಿಶಕ್ತಿಯನ್ನು ನವಿರಾದ ಮಾತು, ಮಾತುಗಳಿಗಾಗಿನ ವೈವಿಧ್ಯಮಯ ತಿಳುವಳಿಕೆ ಸಾಂದ್ರ, ಸ್ನಿಗ್ಧ, ಚೈತನ್ಯಶಕ್ತ ಚಂದ್ರನ ಮೂಲಕವಾಗಿ ಬಂದು ಅನನ್ಯ ತಾಳ್ಮೆ ಇತ್ಯಾದಿಗಳನ್ನು ಶೋಭರಾಜ್‌ಗೆ ಒದಗಿಸಿದ್ದಾನೆ.
ವೈರಿಯ ಮನೆಯಲ್ಲಿ ಸ್ಥಿತನಾದ ಲಗ್ನಾಧಿಪತಿಯ ಮೇಲೆ ದುಷ್ಟನಾದ ಕ್ರಿಮಿನಲ್ ವಿಚಾರದಲ್ಲಿ ಲೈಂಗಿಕ ವಿಚಾರದಲ್ಲಿ ಗರಿಷ್ಠ ಪರಿಣಾಮಗಳನ್ನು ಸಕಾರಾತ್ಮಕವಾಗಿ ನೀಡಲು ಸಾಧ್ಯವೇ ಇರದ ಕುಜನಿಂದ ದೃಷ್ಟಿ ಇದೆ. ಕುಜ ಉತ್ತಮನಾಗಿರಬೇಕಾದುದಕ್ಕೆ ಅಸಾಧ್ಯವಾಗುವಂತೆ ಆತನೊಂದಿಗೆ ಶುಕ್ರನ ಉಪಸ್ಥಿತಿ ಮರಣ ಸ್ಥಾನದಲ್ಲಿ. ಈ ರೀತಿಯ ಕುಜ, ಶುಕ್ರ ದುಷ್ಟಕೂಟದ ಮೇಲೆ ಶನಿಮಹಾರಾಜರ ದೃಷ್ಟಿ, ಮರಣ ಸ್ಥಾನಾಧಿಪತಿ ಸೂರ್ಯನ ಕ್ರೂರ ದೃಷ್ಟಿ ಲಗ್ನಭಾವದ ಮೇಲೆ ಈ ಎಲ್ಲಾ ಕಾರಣಗಳಿಂದ ಸ್ವಭಾವ ನೈತಿಕ ಚೌಕಟ್ಟುಗಳು ಉತ್ತಮವಾಗಿರಲು ಸಾಧ್ಯವೇ ಇಲ್ಲ. ಭಾರತ ಕಂಡ ಸ್ವಾತಂತ್ರ್ಯೋತ್ತರದ ಮಹಾ ಸಂದರ್ಭದಲ್ಲಿ ಇವರ ಪಾತ್ರ ಬಹುದೊಡ್ಡದು ಹಾಗೂ ಕುಖ್ಯಾತಿಯಿಂದ ಮೇರು ಸದೃಶವಾದದ್ದು. ಇವರು ಯಾರು ಎಂಬ ವಿಚಾರ ಬೇಡ. ಈ ಜನ್ಮದ್ದು ಇದೇ ಜನ್ಮದಲ್ಲಿ ಎಂಬಂತೆ ಒಂದು ದೊಡ್ಡ ಬೆಲೆ ತೆರಬೇಕಾಗಿ ಬಂದದ್ದೂ ಒಂದು ವಿಪರ್ಯಾಸವೇ. ಭಾರತದ ಆಷೇìಯ ಕರ್ಮ ಸಿದ್ಧಾಂತ ಕೇತು ಗ್ರಹದ ಸ್ಥಿತಿಗತಿಯ ಮೇಲಿಂದ ಈ ಜನ್ಮದಲ್ಲೇ ಒಂದು ತೆರೆನಾದ ಬಾಧೆಯನ್ನು ಒದಗಿಸಿತು. ಉಪ್ಪು ತಿಂದವರು ನೀರು ಕುಡಿಯ ಬೇಕೆಂಬುದಕ್ಕೆ ನಮ್ಮ ಈ ಮಾಜಿ ಮಂತ್ರಿಗಳು ಒಂದು ಜ್ವಲಂತ ಉದಾಹರಣೆಯಾಗಿದ್ದಾರೆ. ಭಾಗ್ಯದ ಸುಖದ ಪೂರ್ವಪುಣ್ಯಸ್ಥಾನದ ಗಟ್ಟಿತನಗಳು ಕೆಲವೊಮ್ಮೆ ಈ ಜನ್ಮದಲ್ಲಿ ಉಪ್ಪು ತಿಂದರೂ ಮುಂದಿನ ಜನ್ಮದಲ್ಲಿ ನೀರಿಗಾಗಿನ ಪ್ರಾರಬ್ಧ ಮುಂದುವರೆಯುತ್ತದೆ.
Related Articles
ವ್ಯಕ್ತಿತ್ವಕ್ಕೆ ದೋಷ ತರುವ ನೀಚ ಚಂದ್ರ ವ್ಯಕ್ತಿತ್ವವನ್ನು (ಉರಿವ ಬೆಂಕಿಯ ಮೇಲೆ ಇತರರನ್ನು ತಳ್ಳುವ ರೀತಿಯಲ್ಲಿ) ನಿರ್ದಯವಾಗಿರಿಸಲು ಉರುವಲು ಒದಗಿಸಿದ್ದು ಮಾರಕ ರಾಹು, ಕುಜ. ಇವರ ಕುತಂತ್ರಕ್ಕೂ ಕಾರಣವಾಗುವ ಚೈತನ್ಯ ಇಟ್ಟುಕೊಂಡ ಶನೈಶ್ಚರನ ನಕ್ಷತ್ರದಲ್ಲಿ ಕುಳಿತ ಗುರು ಕಾರಣವಿರದ ಯುದ್ಧವೊಂದನ್ನು ಪಕ್ಕ ದೇಶದ ಮೇಲೆ ಸಾರಿ ರಕ್ತದೋಕುಳಿಗೆ ಕಾರಣವಾಗುವಂತೆ ಮಾಡಿದ. ಆ ಮಿಲಿಟ್ರಿ ಜನರಲ್ ಒಬ್ಬರನ್ನು ಪ್ರೇರೇಪಿಸಿ ಒಂದು ದೇಶವನ್ನು ಅರಾಜಕತೆಯ ಅಂಚಿಗೆ ತಂದದ್ದು, ಆ ದೇಶದ ಯಾತನೆಯೋ ಮಿಲಿಟರಿಯ ಜನರಲ್ ಆಗಿದ್ದ ಅವರ ಪಾಡೋ ತಿಳಿಯದು. ಈ ಶನಿಕಾಟ ಒಟ್ಟು ಏಳೂವರೆ ವರ್ಷಗಳದ್ದು. ಈಗ ರಾಹು ದಶಾ ಪ್ರಾಣಕ್ಕೂ ಎರವಾಗಬಹುದಾದಷ್ಟು ಉರಿಯನ್ನು ಶನೈಶ್ಚರನ ಮೂಲಕ ಒದಗಿಸುತ್ತಲೇ ಇದೆ. ಈ ಶನೈಶ್ಚರನೇ ಮರಣಸ್ಥಾನದ ಅಧಿಪತಿ ಕೂಡಾ. ತಿಂದಿರುವ ಉಪ್ಪಿಗೆ ನೀರಂತೂ ಸಿದ್ಧವಾಗುವ ಮಟ್ಟದಲ್ಲಿದೆ. ಅಧಿಕಾರಕ್ಕಾಗಿ ಎಲ್ಲಾ ರೀತಿಯ ಕುತಂತ್ರಗಳನ್ನೂ ನಡೆಸಿ ಗೆಲ್ಲಲೆತ್ನಿಸಿದ ಪ್ರತ್ಯಕ್ಷ ಕೌರವ ಈತ.
Advertisement
ಒಟ್ಟಿನಲ್ಲಿ ಜನ್ಮ ಕುಂಡಲಿ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಒಮ್ಮೊಮ್ಮೆ ಅನಿಸುತ್ತದೆ ಎಲ್ಲವೂ ಹಣೆಬರಹವಾಗಿದ್ದರೆ ಬದುಕಿನ ಅರ್ಥ ಏನು ಅಂದು? ಪುರುಷಸ್ಯ ಭಾಗ್ಯಂ ಏವೋನಾ ಜಾನಾತಿ ಎಂದು ಒಂದು ಮಾತಿದೆ. ಹೀಗಾಗಿ ಆತ್ಮವನ್ನು ವಿಶ್ಲೇಷಿಸಿಕೊಳ್ಳುವ ಮೌನಕ್ಕೆ ಮೌನದೊಳಗಿನ ಓಂಕಾರಕ್ಕೆ ಕಿಟಕಿ ತೆರೆದರೆ ಸಾತ್ವಿಕ ಗುಣವನ್ನು ಕಾಣುವ ದೈವತ್ವಕ್ಕೆ ತೆರೆದುಕೊಳ್ಳುವ ಆದ್ರì ಹೃದಯವನ್ನು ಮೊಳಕೆಯೊಡೆಸಬಹುದು. ಆದರೆ ಸಾತ್ವಿಕತೆ ದಡ್ಡತನ ಬೋಳೆತನ ಎಂಬ ಅಪಹಾಸ್ಯಕ್ಕೆ ಗುರಿಯಾಗುವ ಕಾಲದಲ್ಲಿ ನಾವಿದ್ದೇವೆ ಎಂದೂ ಸ್ವಾಭಿಮಾನ ಬಿಡಬೇಡ ಎಂಬ ಮಾತೊಂದಿದೆ. ಕಾರ್ಯವಾಸಿ ಕತ್ತೆಯ ಕಾಲು ಹಿಡಿಯಬೇಕು ಎಂಬ ನಾಣ್ನುಡಿಯೂ ಇದೆ. ಯಾವುದು ಆಖೈರಿನ ಸತ್ಯ? ಯಾವುದು ಆಖೈರಿನ ಶಾತ್ವಿಕತೆ? ನಮ್ಮ ಕೆಲಸ ಕಾರ್ಯಗಳು ನಮಗೆ ನಾಚಿಕೆ ತರದಿದ್ದರೆ ಇನ್ನೊಬ್ಬರನ್ನು ಶತಾಯಗತಾಯ ಮುಗಿಸುತ್ತೇನೆ ಎಂಬ ಭಂಡತನ ಕ್ರೌರ್ಯ ತುಂಬಿಕೊಂಡರೆ ಏನಾಗಬಹುದು ಎಂಬುದಕ್ಕೆ ಪ್ರಸ್ತುತ ವರ್ತಮಾನ ಭಾರತದಲ್ಲಂತೂ ಸ್ಪಷ್ಟವಾಗಿ ಹರಳುಗಟ್ಟಿದೆ.