Advertisement
ಯಾಕೆಂದರೆ ನಿತ್ಯ ಇಲ್ಲಿ ಘನ ಲಾರಿಗಳ ಸರತಿ ಸಾಲು ಕಾಣುತ್ತದೆ. ಪಣಂಬೂರು ನಂದನೇಶ್ವರ ದೇವಸ್ಥಾನದ ರಸ್ತೆ ಹಾಗೂ ಮೀನಕಳಿಯ ರಸ್ತೆಯುದ್ದಕ್ಕೂ ಇದು ಕಾಣ ಸಿಗುತ್ತದೆ. ಎರಡೂ ಕಡೆ ಲಾರಿಗಳು ನಿಲ್ಲುವುದರಿಂದ ಮಧ್ಯದಲ್ಲಿ ಬಹು ಕಷ್ಟದಿಂದ ಪ್ರವಾಸಿಗರ ಕಾರು ಚಲಿಸಬೇಕಾಗುತ್ತದೆ. ಸ್ವಲ್ಪ ಎಡವಟ್ಟಾದರು ಅಪಾಯ ಖಚಿತ.
ಇದೀಗ ಬಂದರಿನ ಚಟುವಟಿಕೆ ಹೆಚ್ಚಾದ ಕಾರಣ ಲಾರಿಗಳ ಸಂಖ್ಯೆಯೂ ಅಧಿಕವಾಗಿದೆ. ಬೈಕಂಪಾಡಿಯಾಗಿ ಬಂದರಿನ ಕೆ.ಕೆ. ಗೇಟ್‌ವರೆಗೆ ಹೊಸ ಕಾಂಕ್ರೀಟ್ ಹಾಕಲಾದ ಚತುಷ್ಪಥಗೊಂಡ ರಸ್ತೆ ನಿರ್ಮಾಣವಾಗುತ್ತಿದೆ. ಇದರ ಮೂಲಕ ಲಾರಿಗಳು ಆಗಮಿಸುತ್ತಿದ್ದು ಇತ್ತ ಪಣಂಬೂರು ಬೀಚ್ ಮೂಲಕವೂ ಲಾರಿಗಳು ಬರುತ್ತಿವೆ. ಹೀಗಾಗಿ ಬೀಚ್‌ಗೆ ಪ್ರವಾಸಿಗರ ಆಗಮನಕ್ಕೆ ಸಮಸ್ಯೆಯಾಗಿದೆ.
Related Articles
ಹೆದ್ದಾರಿ 66ರ ಪಣಂಬೂರು ದೇವಸ್ಥಾನದಿಂದ ನೇರವಾಗಿ ಬೀಚ್ ಗೆ ತಲುಪಬಹುದಾಗಿದೆ. ಇಲ್ಲಿ ಬಸ್ ವ್ಯವಸ್ಥೆ ಇಲ್ಲದ ಕಾರಣ ಸುಮಾರು ಮುಕ್ಕಾಲು ಕಿ.ಮೀ. ನಡೆದುಕೊಂಡೇ ಬೀಚ್ ತಲುಪಬೇಕಿದೆ. ಸರಕಾರದಿಂದ ನರ್ಮ್ ಬಸ್ ಓಡಾಟಕ್ಕೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಸ್ಪಂದನೆ ದೊರಕಿಲ್ಲ. ಪರ್ಯಾಯ ರಸ್ತೆ ಮಾಡಿದರೂ ಬಲು ದೂರ. ಹೀಗಾಗಿ ಟ್ರಕ್ ಓಡಾಟಕ್ಕೆ ಚತುಷ್ಪಥ ರಸ್ತೆಯನ್ನು ಪೂರ್ಣಗಳಿಸಿ ಬೀಚ್ ರಸ್ತೆಯನ್ನು ಶಾಶ್ವತವಾಗಿ ಅಭಿವೃದ್ಧಿಪಡಿಸಿದಲ್ಲಿ ಮಾಲಿನ್ಯ ಮುಕ್ತವಾಗಿ ಪಣಂಬೂರು ಬೀಚ್ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ.
Advertisement
ನಿಯಂತ್ರಣಕ್ಕೆ ಕ್ರಮಎನ್ಎಂಪಿಟಿ ಕೆ.ಕೆ. ಗೇಟ್ ಭಾಗದಲ್ಲಿ ಸರಕು ನಿರ್ವಹಿಸುತ್ತಿದೆ. ಹೀಗಾಗಿ ಇಲ್ಲಿ ಟ್ರಕ್ ಓಡಾಟ ನಿಯಂತ್ರಣಕ್ಕೆ ಎನ್ ಎಂಪಿಟಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಪರಿಸರ ಸಹ್ಯ ವಾತಾವರಣ ನಿರ್ಮಿಸಲು ಮಂಡಳಿ ಕ್ರಮ ಕೈಗೊಳ್ಳುತ್ತಾ ಬಂದಿದೆ ಎಂದು ಎನ್‌ಎಂಪಿಟಿ ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ಟ್ರಕ್ ಯಾರ್ಡ್ ಅಗತ್ಯ
ಈ ಭಾಗದಲ್ಲಿ ಪ್ರತ್ಯೇಕ ಟ್ರಕ್ ಯಾರ್ಡ್ ನಿರ್ಮಿಸಿದರೆ ಈ ಸಮಸ್ಯೆಯನ್ನು ಬಗೆ ಹರಿಸಬಹುದು. ರೈಲ್ವೇ ಗೋಡೌನ್ ಹಾಗೂ ಎನ್‌ಎಂಪಿಟಿ ಗೋದಾಮು ಭಾಗಗಳಲ್ಲಿ ವಿಶಾಲ ಜಾಗವಿದ್ದು, ಇಲ್ಲಿ ಟ್ರಕ್ ಯಾರ್ಡ್ ರಚಿಸಿದರೆ ರಸ್ತೆ ಬದಿ ಲಾರಿಗಳ ನಿಲುಗಡೆಯನ್ನು ತಪ್ಪಿಸಬಹುದಾಗಿದೆ. ಇದಲ್ಲದೆ ಕಲ್ಲಿದ್ದಲನ್ನು ಕಂಟೈನರ್ ಮೂಲಕ ಸಾಗಿಸಲು ಉಪಕ್ರಮ ಕೈಗೊಂಡಲ್ಲಿ ಇಲ್ಲಿ ನೆಲದ ಮೇಲೆ ಬೀಳುವ ಕಲ್ಲಿದ್ದಲು ಹುಡಿಯನ್ನು ನಿಯಂತ್ರಿಸಬಹುದು. ಇದರಿಂದ ಬೀಚ್ ರಸ್ತೆಯಲ್ಲಿ ಪ್ರವಾಸಿಗರು ನಿರಾಳವಾಗಿ ಸಂಚರಿಸಬಹುದು.
– ಯತೀಶ್ ಬೈಕಂಪಾಡಿ,ಸಿಇಒ
ಪಣಂಬೂರು ಬೀಚ್ ಅಭಿವೃದ್ಧಿ ಯೋಜನೆ ವಿಶೇಷ ವರದಿ