ಅಗತ್ಯ ಎಂಬ ಕಾರಣಕ್ಕೆ ದ್ವಿಚಕ್ರ ವಾಹನ ಈಗ ಎಲ್ಲರ ಬಳಿಯೂ ಇದೆ. ಆದರೆ ಕೆಲವೊಮ್ಮೆ ಮೈಲೇಜ್ ಸಿಗುತ್ತಿಲ್ಲ ಎಂಬ ಚಿಂತೆ ನಿಮ್ಮನ್ನು ಆವರಿಸಿರಬಹುದು. ಹೀಗಾಗಲು ಕಾರಣವೇನು ಮತ್ತು ಮೈಲೇಜ್ ಪರೀಕ್ಷೆ ಹೇಗೆ ಮಾಡಬೇಕು ಎಂಬುದನ್ನು ನೋಡೋಣ.
ದ್ವಿಚಕ್ರ ವಾಹನದಲ್ಲಿ ವಾಹನದ ಸಾಮರ್ಥ್ಯಕ್ಕಿಂತ ದೊಡ್ಡದಾದ ಹಾರ್ನ್, ಲೈಟ್‌ಗಳಿದ್ದರೆ ಎಂಜಿನ್, ದೊಡ್ಡ ಟಯರ್‌ಗಳಿದ್ದರೆ ಹೆಚ್ಚುವರಿ ಹೊರೆ ಬೀಳುತ್ತದೆ. ಇದರಿಂದ ಮೈಲೇಜ್ ಕಡಿಮೆಯಾಗಬಹುದು.
ಹೈವೇ/ಸಿಟಿ ರೈಡಿಂಗ್
100 ಸಿಸಿ ಬೈಕ್‌ಗಳಾದರೆ 50- 60 ಕಿ.ಮೀ. ಗಳಲ್ಲಿ ಹೈವೇಯಲ್ಲಿ ಉತ್ತಮ ಮೈಲೇಜ್ ನೀಡುತ್ತವೆ. 300 ಸಿಸಿ ಮೇಲ್ಪಟ್ಟ ಬೈಕ್‌ಗಳಾದರೆ 80 ಕಿ.ಮೀ. ವರೆಗೆ ಉತ್ತಮ ಮೈಲೇಜ್ ನೀಡಬಹುದು. ಇದನ್ನು ಅರಿತು ಒಂದೇ ರೀತಿಯ ಸ್ಪೀಡ್ ನಿಭಾಯಿಸಿಕೊಂಡು ಬೈಕ್ ಚಾಲನೆ ಮಾಡಿದರೆ ಉತ್ತಮ ಮೈಲೇಜ್ ಸಿಗಬಹುದು. ನಗರದಲ್ಲಾದರೆ 100 ಸಿಸಿ ಬೈಕ್‌ಗಳು 40 ಕಿ.ಮೀ. ವೇಗದಲ್ಲಿ ಅತ್ಯುತ್ತಮ ಮೈಲೇಜ್ ನೀಡುತ್ತವೆ. ಏಕಾಏಕಿ ಎಕ್ಸಲರೇಟರ್ ತಿರುವುದು, ಗೇರ್ ಬದಲಾಯಿಸುವುದು, ವಿಪರೀತ ವೇಗ ಮೈಲೇಜ್ ನೀಡುವುದಿಲ್ಲ. ಹಾಗೆಯೇ ಕ್ಲಚ್ ಹಿಡಿದುಕೊಂಡೇ ಇರುವುದರಿಂದ, ಬ್ರೇಕ್ ಅನ್ನು ತುಳಿದೇ ಇರುವುದರಿಂದಲೂ ಮೈಲೇಜ್ ಸಿಗಲಾರದು. ಜತೆಗೆ ಟ್ರಾಫಿಕ್‌ನಲ್ಲಿ ಆಗಾಗ್ಗೆ ಎಂಜಿನ್ ರೇಸ್ ಮಾಡುತ್ತಿರುವುದು, ಎಕ್ಸಲರೇಟರ್ ತಿರುವುತ್ತ ಇರುವುದರಿಂದ ಇಂಧನ ಹೆಚ್ಚು ಮುಗಿಯುತ್ತದೆ.
•••••ಈಶ
Advertisement
ಮೈಲೇಜ್ ಇಳಿಕೆಗೆ ಕಾರಣಗಳು
Related Articles
Advertisement
ಭಾರ
ಬೈಕ್‌ಗೆ ಭಾರೀ ಭಾರದ ಕ್ರಾಶ್‌ಗಾರ್ಡ್, ಸಾರಿಗಾರ್ಡ್‌ಗಳನ್ನು ಅಳವಡಿಸಬೇಡಿ. ಹೆಚ್ಚುವರಿ ಭಾರವನ್ನು ಹಾಕಬೇಡಿ. ಇದರಿಂದ ಮೈಲೇಜ್ ಕೊರತೆಯಾಗುತ್ತದೆ.
ಶುಚಿಯಾಗಿಡಿ
ಬೈಕ್ ಅನ್ನು ಆದಷ್ಟೂ ಶುಚಿಯಾಗಿಟ್ಟುಕೊಳ್ಳಿ. ಕೆಸರಿನಲ್ಲಿ ಹೋಗಿದ್ದರೆ, ತೊಳೆಯಿರಿ. ಟಯರ್, ಚೈನ್‌ನ ಭಾಗದಲ್ಲಿ ಕೆಸರು-ಧೂಳು ತುಂಬಿ ಇರುವುದರಿಂದ ಮೈಲೇಜ್ ಕಡಿಮೆಯಾಗುತ್ತದೆ.
ಇಂಧನ ಹಾಕುವುದು
ಆದಷ್ಟೂ ಒಂದೇ ಪೆಟ್ರೋಲ್ ಬಂಕ್‌ನಲ್ಲಿ ಇಂಧನ ತುಂಬಿಸಿಕೊಳ್ಳಿ. ಬೆಳಗ್ಗೆ ಇಂಧನ ತುಂಬಿಸುವುದರಿಂದ ಇಂಧನ ಆವಿ ಪ್ರಮಾಣ ಕಡಿಮೆಯಾಗಿ ಸರಿಯಾದ ಪ್ರಮಾಣದ ಇಂಧನ ಟ್ಯಾಂಕ್‌ಗೆ ಸೇರುತ್ತದೆ.
ಸ್ಪಾರ್ಕ್ ಪ್ಲಗ್
ಮೂರ್‍ನಾಲ್ಕು ತಿಂಗಳಿಗೊಮ್ಮೆ ಬೈಕ್ ಸರ್ವೀಸ್ ಮಾಡಿಸಬೇಕು. ಸ್ಪಾರ್ಕ್ ಪ್ಲಗ್, ಏರ್ ಫಿಲ್ಟರ್ ಕ್ಲೀನ್ ಮಾಡಿಸಬೇಕು. ಇದು ಕೂಡ ಮೈಲೇಜ್ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಸ್ಪಾರ್ಕ್ ಪ್ಲಗ್, ಏರ್‌ಫಿಲ್ಟರ್ ಹಳತಾಗಿದ್ದರೆ ಕೂಡಲೇ ಬದಲಾಯಿಸಿ.
ಮೈಲೇಜ್ ಪರೀಕ್ಷೆ ಹೇಗೆ?
ದ್ವಿಚಕ್ರ ವಾಹನದ ಇಂಧನ ಟ್ಯಾಂಕ್‌ಗೆ ಪೆಟ್ರೋಲ ಭರ್ತಿ ಮಾಡಿ. ಬಳಿಕ ಮೀಟರ್‌ನಲ್ಲಿ ‘0’ಗೆ ರೀಸೆಟ್ ಮಾಡಿ. ಸ್ಟಾರ್ಟ್ ಮಾಡಿ. 1 ಕಿ.ಮೀ. ವಾಹನ ಓಡಿಸಿ. ಬಳಿಕ ಮತ್ತೆ ಟ್ಯಾಂಕ್ ಫುಲ್ ಮಾಡಿ. ಎಷ್ಟು ಇಂಧನ ಹಾಕಿದ್ದೀರಿ ಎಂಬು ದನ್ನು ತಿಳಿದು ಕಿಲೋ ಮೀಟರ್‌ನೊಂದಿಗೆ ಅದನ್ನು ಲೆಕ್ಕ ಹಾಕಿ. ಈಗ ನಿಜವಾದ ಮೈಲೇಜ್ ಲೆಕ್ಕ ಸಿಗುತ್ತದೆ.