Advertisement
ಹಾಗಾದರೆ ಈ R ನಂಬರ್ ಎಂದರೇನು?R ನಂಬರ್ ಎಂದರೆ reproduction number ಎಂದರ್ಥ. ವೈರಸ್ ಯಾವ ಪ್ರಮಾಣದಲ್ಲಿ ಪುನರುತ್ಪತ್ತಿಯಾಗುತ್ತಿದೆ ಎನ್ನುವುದನ್ನು ತಿಳಿಸುವ ಸಂಖ್ಯೆಯಿದು. ಒಬ್ಬ ಸೋಂಕಿತನಿಂದ ಇನ್ನೊಬ್ಬ ಸೋಂಕಿತನಿಗೆ ಸರಾಸರಿಯಾಗಿ ಎಷ್ಟು ವೈರಸ್ ಹರಡುತ್ತದೆ ಎನ್ನುವುದನ್ನು ಈ ಸಂಖ್ಯೆಯ ಮೂಲಕ ಕಂಡುಕೊಳ್ಳಲಾಗುತ್ತದೆ. ದಡಾರ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಗರಿಷ್ಠ 15 reproduction number ಹೊಂದಿತ್ತು. ಕೋವಿಡ್ ವೈರಸ್ 3 reproduction number ಹೊಂದಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಆದರೆ ಇದಿನ್ನೂ ದೃಢಪಟ್ಟಿಲ್ಲ.
ಮರಣದ ಪ್ರಮಾಣ, ಆಸ್ಪತ್ರೆಗೆ ದಾಖಲಾದವರ ಸಂಖ್ಯೆ, ಪೊಸಿಟಿವ್ ಆದ ಪ್ರಕರಣಗಳ ಸಂಖ್ಯೆ ಈ ಮುಂತಾದ ದತ್ತಾಂಶಗಳನ್ನು ವಿಶ್ಲೇಷಿಸಿ ಈ ಸಂಖ್ಯೆಯನ್ನು ಪಡೆದುಕೊಳ್ಳಲಾಗುತ್ತದೆ. ಈ ಮೂಲಕ ವೈರಸ್ ಹರಡುವ ವೇಗ ಎಷ್ಟು ಎನ್ನುವುದನ್ನು ಲೆಕ್ಕ ಹಾಕುತ್ತಾರೆ. ಇದರ ಆಧಾರದಲ್ಲಿ ಸರಕಾರಗಳು ಅದನ್ನು ನಿಯಂತ್ರಿಸಲು ಕಾರ್ಯ ಯೋಜನೆ ರೂಪಿಸುತ್ತವೆ. reproduction number ಒಂದಕ್ಕಿಂತ ಹೆಚ್ಚು ಇದ್ದರೆ ಅಪಾಯಕಾರಿ ಎಂದು ಲೆಕ್ಕ. ಇಂಥ ಸಂದರ್ಭದಲ್ಲಿ ವೈರಸ್ ಹರಡುವ ವೇಗ ನಿಯಂತ್ರಣಕ್ಕೆ ಸಿಗುವುದು ಕಷ್ಟವಾಗುತ್ತದೆ.