Advertisement

ಸರಕಾರಿ ನೌಕರರು ಬಿಪಿಎಲ್ ಕಾರ್ಡ್ ಹಿಂತಿರುಗಿಸಿ ಎಂಬ ಆದೇಶದ ಕುರಿತು ಅಭಿಪ್ರಾಯವೇನು?

03:54 PM Jun 13, 2020 | keerthan |

ಮಣಿಪಾಲ: ಸರಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ತಕ್ಷಣ ಹಿಂತಿರುಗಿಸಿ ಎಂದು ರಾಜ್ಯ ಸರಕಾರ ಕಠಿಣ ಆದೇಶ ನೀಡಿರುವುದರ ಕುರಿತು ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ರಮೇಶ್ ಭಟ್ ನಕ್ರೆ: ಸರ್ಕಾರದ ಎಲ್ಲಾ ಸೌಲಭ್ಯ ಸಿಗುವಾಗ ಬಿಪಿಎಲ್ ಪ್ರಶ್ನೆಯೇ ಬರುವುದಿಲ್ಲ .ಬಿಪಿಎಲ್ ಸೌಲಭ್ಯ ಬೇಕೇ ಎನ್ನುವವರು ನೌಕರಿ ತೊರೆಯಲಿ.

ಶ್ರೀನಿವಾಸ್ ಎಂ. ಎ: ಸರಕಾರಿ ನೌಕರರಿಗೆ ಅಷ್ಟೇ ಅಲ್ಲ 50000 ಸಂಬಳ ತೆಗೆದುಕೊಳ್ಳುವ ಖಾಸಗಿ ನೌಕರರಿಗೂ ಅನ್ವಯಿಸುವಂತೆ ಕಠಿಣ ಕಾನೂನು ಕ್ರಮ ತರಬೇಕು ನಾನು ಕಂಡಂತೆ ಪ್ರತಿಷ್ಠಿತ ಕಂಪನಿಯಲ್ಲಿ ರುವ ನೌಕರರು ಸಹ ತಮ್ಮ ಹಳ್ಳಿಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ

ಗಂಗಾಧರ ರಾವ್ ಕೊಕ್ಕಡ: ಅಯ್ಯೋ ಅಯ್ಯೋ ಬಿಡಿ ಹದಿಮೂರು ಹದಿನೈದು ಮಕ್ಕಳು ಓಡಾಲು ಕಾರು ಬ್ಯೆಕ್ ಮೂರು ನಾಲ್ಕು ಅಂತಸ್ತಿನ ಮನೆ ಇದ್ದವರಿಗೆ ಬಿ. ಪಿ. ಎಲ್ ಕಾರ್ಡ್ ಇದೆ . ಹ್ಞಾಂ ಕಾರಣ ಅವರು ಕಡು ಬಡವರು ಸ್ವಾಮಿ

ರಾಜು ಕೆ ಉದ್ದಮನಹಳ್ಳಿ: ಒಳ್ಳೆಯದು, ಆದರೆ ಅರೆ ಸರ್ಕಾರಿ ನೌಕರರನ್ನು ಈ ಆದೇಶದಿಂದ ಹೊರಗಿಡಬೇಕು, ಕಾರಣ ಇವರಿಗೆ ಐದು ಅಥವಾ ಆರು ತಿಂಗಳಿಗೊಮ್ಮೆ ವೇತನ ಸಿಗೋದು ಅದೂ ಕೂಡಾ ಒಂದೋ ಎರಡೋ ತಿಂಗಳ ವೇತನ ಮಾತ್ರ.

Advertisement

ಸಚೀನ ಕುಲಕರ್ಣಿ:  ಜನಸೇವೆಯೆ ಜನಾರ್ಧನನ ಸೇವೆ ಅಂತಾ ಜನರಿಂದ ಆಯ್ಕೆಗೊಂಡ ಶಾಸಕರಿಗೆ ಅನುದಾನ ಯಾಕೆ ವೇತನ ಯಾಕೆ? ಇವರಿಗೆ ಇದೆಲ್ಲ ಸೌಲಭ್ಯ ಬೇಕು ಆದರೆ ಎಲ್ಲರಿಗೂ ಬಿಪಿಎಲ್ಲ್ ಕಾರ್ಡ್ ಇರೋದು ತಪ್ಪಾ

ಕಿರುಗುಂದ ನಜೀರ್:  ಸರ್ಕಾರಿ ನೌಕರರು ಮಾತ್ರ ಅಲ್ಲ ಅರ್ಥಿಕವಾಗಿ ಅನುಕೂಲ ಇರುವವರ ಬಿಪಿಎಲ್ ಕಾರ್ಡಗಳನ್ನು ರದ್ದು ಪಡಿಸಬೇಕು, ಜೊತೆಗೆ ಇವರು ಬಡವರೆಂದು ವರಮಾನ ಪತ್ರ ಕೊಟ್ಟ ಕಂದಾಯ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.

ರಾಘವೇಂದ್ರ ಶೇಟ್: ಒಳ್ಳೆಯ ನಿರ್ಧಾರ ಅಧಿಕಾರಿಗಳು ಹಣದಾಸೆಗಾಗಿ ಮನೆ ಮನೆಗೆ ಕಾರ್ಡ್ ಮಾಡಿಕೊಟ್ಟಿದ್ದಾರೆ ನಿಜವಾದ ಬಡವರಿಗೆ ಇನ್ನೂ ಕಾರ್ಡ್ ಸಿಗಲಿಲ್ಲ ಸರಿಯಾಗಿ ತನಿಖೆ ನಡೆಸಿ

Advertisement

Udayavani is now on Telegram. Click here to join our channel and stay updated with the latest news.

Next