Advertisement

ಏನಿದು ಸಾಂಕ್ರಾಮಿಕ ಪಿಡುಗು?

10:10 AM Mar 14, 2020 | mahesh |

ಕೊರೊನಾ ವೈರಸ್‌ ಒಂದು ಸಾಂಕ್ರಾಮಿಕ ಪಿಡುಗು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಘೋಷಿಸಿದೆ. ಇದರ ಬೆನ್ನಲ್ಲೇ ಬಹುತೇಕ ದೇಶಗಳು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿವೆ. ಅಸಲಿಗೆ ಸಾಂಕ್ರಾಮಿಕ ಪಿಡುಗು ಹಾಗೂ ಸಾಂಕ್ರಾಮಿಕ ರೋಗ ವಿಭಿನ್ನ ಅರ್ಥ ಹೊಂದಿದ್ದು, ರೋಗ ಮತ್ತು ಪಿಡು ಗಿಗೆ ಸಾಕಷ್ಟು ವ್ಯತ್ಯಾಸವಿದೆ. ಈ ಹಿನ್ನೆಲೆ ಸಾಂಕ್ರಾಮಿಕ ಪಿಡುಗು ಎಂದರೇನು ? ಈ ಹಿಂದೆ ಯಾವಾಗ ಇಂತಹ ಘಟನೆ ನಡೆದಿತ್ತು ಮೊದಲಾದ ಮಾಹಿತಿ ಇಲ್ಲಿದೆ.

Advertisement

ಸಾಂಕ್ರಾಮಿಕ ಪಿಡುಗು ಎಂದರೇನು ?
ವಿಶ್ವವ್ಯಾಪಿ ಆವರಿಸಿದ ಮಾರಕ ಸೋಂಕುಗಳನ್ನು ಸಾಂಕ್ರಾಮಿಕ ಪಿಡುಗು ಎಂದು ಗುರುತಿಸಲಾಗುತ್ತದೆ. ಇದಕ್ಕೆ ನಿರ್ದಿಷ್ಟ ಪ್ರದೇಶದ ವ್ಯಾಪ್ತಿ ಇಲ್ಲ. ಚೀನದ ಮಟ್ಟಿಗೆ ಸೋಂಕು ಹರಡಿದ್ದಲ್ಲಿ ಇದೊಂದು ಸಾಂಕ್ರಾಮಿಕ ರೋಗ ಎಂದು ಕರೆಸಿಕೊಳ್ಳುತ್ತಿತ್ತು. ಆದರೆ ಮೂರು ತಿಂಗಳಿನಲ್ಲೇ ವಿಶ್ವದ 114 ರಾಷ್ಟ್ರಗಳಲ್ಲಿ ಹರಡಿರುವ ಕೊರೊನಾ ವೈರಸ್‌ ಒಂದು ಸಾಂಕ್ರಾಮಿಕ ಪಿಡುಗು ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಸಾಂಕ್ರಾಮಿಕ ಪಿಡುಗು ಒಂದು ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ.

ಒಂದು ದೇಶಕ್ಕೆ ಮಾತ್ರ ಸೀಮಿತ
ಕೊರೊನಾ ಸಾಂಕ್ರಾಮಿಕ ರೋಗವಲ್ಲ. ಏಕೆಂದರೆ ಸಾಂಕ್ರಾಮಿಕ ರೋಗ (Epidemic) ಒಂದು ನಿರ್ದಿಷ್ಟ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ನಿರ್ದಿಷ್ಟ ದೇಶದ ವ್ಯಾಪ್ತಿಯಲ್ಲಿ ಒಬ್ಬ ವ್ಯಕ್ತಿಯಿಂದ ಮತ್ತೂಬ್ಬನಿಗೆ ಸೋಂಕು ಹರಡಿದರೆ ಅದನ್ನು ಸಾಂಕ್ರಾಮಿಕ ರೋಗ ಎನ್ನಲಾಗುತ್ತದೆ. ಒಂದು ಪ್ರದೇಶದಲ್ಲಿರುವ 10 ಸಾವಿರ ಜನರ ಪೈಕಿ ಎರಡು ವಾರಗಳಲ್ಲಿ 15 ಜನರಿಗೆ ಸೋಂಕು ತಗುಲಿದರೆ ಅದನ್ನು ಸಾಂಕ್ರಾಮಿಕ ರೋಗ ಎಂದು ಗುರುತಿಸಲಾಗುತ್ತದೆ.

ಘೋಷಣೆ ಹಿಂದಿನ ಕಾರಣ
ಈ ಪರಿಸ್ಥಿತಿಯನ್ನು ನಿಯಂತ್ರಿಸು ವುದು ಅನಿವಾರ್ಯ ವಾಗಿದೆ. ವಿಶ್ವಸಂಸ್ಥೆಯ ಈ ಘೋಷಣೆ ಯಿಂದಾಗಿ ದೇಶಗಳಿಗೆ ಈ ವಿಶೇ ಷ ಅಧಿಕಾರ ಲಭ್ಯವಾಗುತ್ತವೆ.
  ಸೋಂಕು ಪೀಡಿತ ರಾಷ್ಟ್ರಗಳ ವಿಮಾನಗಳಿಗೆ ತಡೆ.
  ಶಂಕಿತ ಸೋಂಕು ಪೀಡಿತನ ಮೇಲೆ ಅನುಮಾನ ಬಂದರೆ ಅಂತಹ ಸಂದರ್ಭ ಅವನು ಚಿಕಿತ್ಸೆಗೆ ಒಪ್ಪದಿದ್ದರೂ ಆಸ್ಪತ್ರೆಗೆ ಸೇರಿಸಬಹುದು.
  ಶಂಕಿತನ ಮನೆಯವರನ್ನು ತೀವ್ರ ನಿಗಾದಲ್ಲಿ ಇರಿಸಿ ಅಗತ್ಯಬಿದ್ದರೆ ಚಿಕಿತ್ಸೆ ನೀಡಲಾಗುತ್ತದೆ.

ತೆಗೆದುಕೊಳ್ಳಬಹುದಾದ ಪ್ರಮುಖ ಕ್ರಮಗಳು
  ಸೋಂಕು ಪತ್ತೆಯಾದ ಭೌಗೋಳಿಕ ಪ್ರದೇಶಗಳ ಮೊಹರು.
  ಸೋಂಕಿತ ಪ್ರದೇಶದಲ್ಲಿ ಜನಸಂಚಾರ, ವಾಹನ ಸಂಚಾರ ನಿಷೇಧ.
  ಶಾಲೆಗಳು, ಕಚೇರಿಗಳಿಗೆ ರಜೆ ಮತ್ತು ಸಾರ್ವಜನಿಕ ಸಭೆ ನಿಷೇಧ.
  ನಿಯಮ ಉಲ್ಲಂ ಸಿದ ವ್ಯಕ್ತಿ, ಸಂಸ್ಥೆಗಳ ಮೇಲೆ ಸೆಕ್ಷನ್‌ 188ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ.

Advertisement

ಈ ಹಿಂದಿನ ಪಿಡುಗುಗಳು
1346ರಲ್ಲಿ
ಕಾಣಸಿಕೊಂಡ ಪ್ಲೇಗ್‌ ರೋಗವನ್ನು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಲಾಗಿತ್ತು. ಈ ರೋಗಕ್ಕೆ ಸುಮಾರು 7.5 ಕೋಟಿಯಿಂದ 20 ಕೋಟಿ ಜನರು ಬಲಿಯಾಗಿದ್ದರು.

1910-11ರಲ್ಲಿ
1888-89ರಲ್ಲಿ ಕಾಲರಾವನ್ನು ಮೊದಲಿಗೆ ಸಾಂಕ್ರಾಮಿಕ ರೋಗ ಎಂದು ಪರಿಗಣಿಸಲಾಗಿತ್ತು. ಆದರೆ ಸತತವಾಗಿ 6 ಬಾರಿ ಈ ರೋಗ ವಿಶ್ವವನ್ನು ಕಾಡಿದ್ದು, ಮೊದಲು 5 ಬಾರಿ ಕೂಡ ಅಮೆರಿಕಾದಲ್ಲಿ ಮತ್ತು 6ನೇ ಬಾರಿ 1911ರಲ್ಲಿ ಭಾರತದಲ್ಲಿಯೂ ಕಾಣಿಸಿಕೊಂಡಿತು.ಅದೇ ವರ್ಷ ಸಾಂಕ್ರಾಮಿಕ ಪಿಡುಗು ಎಂದು ಘೊಷಿಸಲಾಯಿತು.

1956-58ರಲ್ಲಿ
ಚೀನದಲ್ಲಿ ಮೊದಲಿಗೆ ಕಾಣಿಸಿಕೊಂಡ ಶೀತಜ್ವರವನ್ನು ಎಚ್‌1ಎನ್‌1 ಎಂದು ಗುರುತಿಸಲಾಗಿತ್ತು.ಬಳಿಕ ಶೀತಜ್ವರ ಸಿಂಗಾಪುರ, ಹಾಂಗ್‌ಕಾಂಗ್‌, ಅಮೆರಿಕಕ್ಕೆ ಹರಡಿತು. ಕ್ಷಿಪ್ರಗತಿಯಲ್ಲಿ ಹರಡಿದ ರೋಗಕ್ಕೆ 1956-58ರ ಅವಧಿಯಲ್ಲಿ 20ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದರು.

1968ರಲ್ಲಿ
ಹಾಂಗ್‌ಕಾಂಗ್‌ನಲ್ಲಿ ಕಾಣಿಸಿಕೊಂಡ ಫ್ಲ್ಯೂ ಅನ್ನು ಸಾಂಕ್ರಾಮಿಕ ಪಿಡುಗು ಎಂದು ಘೋಷಿಸಲಾಗಿತ್ತು. ಮೊದಲಿಗೆ ಹಾಂಗ್‌ಕಾಂಗ್‌ನಲ್ಲಿ ಕಾಣಿಸಿಕೊಂಡು ಬಳಿಕ ಈ ಸೋಂಕು ಸಿಂಗಾಪುರ, ವಿಯೆಟ್ನಾಂ, ಫಿಲಿಪ್ಪೀನ್ಸ್‌, ಆಸ್ಟ್ರೇಲಿಯಾ, ಮತ್ತು ಅಮೆರಿಕಕ್ಕೆ ಹರಡಿತ್ತು. ಇದಕ್ಕೆ 10ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.

1976ರಲ್ಲಿ
1976ರಿಂದ 1981ರ ಅವಧಿಯಲ್ಲಿ ಹರಡಿದ ಏಡ್ಸ್ ರೋಗವನ್ನು ಸಾಂಕ್ರಾಮಿಕ ಪಿಡುಗು ಎಂದು ಗುರುತಿಸಲಾಗಿತ್ತು.

2009ರಲ್ಲಿ
ಸಾವಿರಾರು ಜನರ ಪ್ರಾಣ ತೆಗೆದ ಎಚ್‌1ಎನ್‌1 ಅನ್ನೂ ವಿಶ್ವ ಆರೋಗ್ಯ ಸಂಸ್ಥೆಯು ಸಾಂಕ್ರಾಮಿಕ ಪಿಡುಗು ಎಂದು ಘೋಷಿಸಿತ್ತು.

ನಮ್ಮ ರಾಜ್ಯದ ಕಾನೂನು ಏನು ಹೇಳುತ್ತದೆ?
ಸಾಂಕ್ರಾಮಿಕ ರೋಗಗಳ ಕಾಯಿದೆ 1897ರ ಸೆಕ್ಷನ್‌ 2, 3 ಮತ್ತು 4ರಡಿ ರಾಜ್ಯ ಸರಕಾರವು ಸಾರ್ವಜನಿಕರಿಗೆ ಸೋಂಕನ್ನು ನಿಯಂತ್ರಿಸಲು ತಾತ್ಕಾಲಿಕ ನಿರ್ದೇಶನಗಳನ್ನು ನೀಡಿದೆ. “ಕರ್ನಾಟಕ ಸಾಂಕ್ರಾಮಿಕ ರೋಗ ಕೋವಿಡ್‌ -19 ನಿಯಂತ್ರಣ 2020′ (Karnataka Epidemic diseases Covid-19 regulations 2020) ಎಂಬ ಹೆಸರಿನಡಿ ನಿಯಂತ್ರಣ ಕ್ರಮಗಳನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ಪ್ರದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡರೆ, ಕೂಡಲೇ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ರಾಜ್ಯದ ಯಾವುದೇ ಪ್ರದೇಶದಲ್ಲಿ ಕೊರೊನಾ ವೈರಸ್‌ ಪತ್ತೆಯಾದರೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಕೈಗೊಳ್ಳಬಹುದಾದ ಅಗತ್ಯ ಕ್ರಮಗಳನ್ನೂ ಕೂಡ ರಾಜ್ಯ ಸರಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next