Advertisement

ಯೋಗ ಮಾಡಲು ಯಾವ ಸಮಯ ಬೆಸ್ಟ್‌?

11:23 AM Dec 03, 2020 | Nagendra Trasi |

ಬೆಳಗ್ಗೆದ್ದು ಕಚೇರಿಗೆ ಓಡುವ ಧಾವಂತ, ರಾತ್ರಿ ಬಂದು ಸುಸ್ತಾಗಿ ಮಲಗುವ ಆತುರ ಹೀಗಾಗಿ ವಾಕಿಂಗ್‌, ಜಾಗಿಂಗ್‌ ಗೆ ಸಮಯವಿಲ್ಲ. ಇರುವ ಸಮಯದಲ್ಲೇ ಹೊಂದಿಕೊಂಡು ಒಂದಷ್ಟು ಹೊತ್ತು ಯೋಗ ಮಾಡೋಣ ಎಂದು ಮನಸ್ಸು ನೂರು ಬಾರಿ ಹೇಳಿದ ಮೇಲೆ ಕಾರ್ಯಸಾಧನೆಗೆ ಇಳಿಯುತ್ತೇವೆ.

Advertisement

ಯೋಗ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಯಾವ ಸಮಯದಲ್ಲಿ ಮಾಡಿದರೆ ಉತ್ತಮ ಎಂಬ ಪ್ರಶ್ನೆ ಇದ್ದೇ ಇದೆ. ಬೆಳಗ್ಗೆ ಹಾಗೂ ಸಂಜೆ ಯೋಗ ಮಾಡುವುದರಿಂದ ಬೇರೆ-ಬೇರೆ ರೀತಿಯ ಅನುಕೂಲಗಳಿವೆ.

ಹೀಗಾಗಿ ಇದನ್ನು ತಿಳಿದು ನಮ್ಮ ಅನುಕೂಲಕ್ಕೆ ತಕ್ಕಂತೆ ಯೋಗ ಮಾಡಿದರೆ ಉತ್ತಮ. ಯೋಗ ಪರಿಣಿತರು ಸೂರ್ಯ ಉದಯಿಸುವ ಸಮಯದಲ್ಲಿ ಯೋಗ ಮಾಡಿದರೆ ಒಳ್ಳೆಯದು ಎನ್ನುತ್ತಾರೆ. ಆದರೆ ಬೆಳಗಿನ ಶಿಫ್ಟ್ ಕೆಲಸಕ್ಕೆ ಹೋಗುವವರೆಗೆ, ಬೆಳಗ್ಗೆ ಗಂಡ- ಮಕ್ಕಳನ್ನು ಆಸ್‌- ಶಾಲೆಗೆ ಕಳುಹಿಸುವ ಗೃಹಿಣಿಯರಿಗೆ ಬೆಳಗ್ಗೆಯ ಸಮಯ ಸಾಕಾಗದು. ಅಂತಹವರು ಸಂಜೆ ಯೋಗ ಅಭ್ಯಾಸ ಮಾಡಬಹುದು. ಇನ್ನು ಬೆಳಗ್ಗೆ ಸಮಯವಿದ್ದರೆ ಸಮಸ್ಯೆ ಇಲ್ಲ.

ಬೆಳಗ್ಗಿನ ಯೋಗದ ಪ್ರಯೋಜನಗಳು
*ಬೆಳಗ್ಗೆದ್ದು ಯೋಗ ಮಾಡುವುದರಿಂದ ಶರೀರಕ್ಕೆ ಉಲ್ಲಾಸ ದೊರೆಯುವುದು, ಯಾವುದೇ ದೈಹಿಕ, ಮಾನಸಿಕ ನೋವಿದ್ದರೆ ದೂರವಾಗುವುದು. ಕಚೇರಿ, ಮನೆ ಕೆಲಸದಲ್ಲಿ ದಿನಪೂರ್ತಿ ಲವಲವಿಕೆಯಿಂದ ಇರಬಹುದು.

*ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡಿ ನಿಮ್ಮ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಬೆಳಗ್ಗೆದ್ದು ಯೋಗ ಮಾಡುವುದು ಸಹಕಾರಿ.

Advertisement

*ಬೆಳಗ್ಗೆ ಯೋಗ ಮಾಡುವುದರಿಂದ ಪಾಸಿಟಿವ್‌ ಎನರ್ಜಿ ದೊರೆಯುವುದು, ಆದ್ದರಿಂದ ಖುಷಿ ಖುಷಿಯಾಗಿ ದಿನವನ್ನು ಕಳೆಯಲು ಸಾಧ್ಯವಿದೆ.

ಸಂಜೆ ಯೋಗದ ಅನುಕೂಲಗಳು
*ಆಫೀಸ್‌, ಮನೆ ಕೆಲಸ ಅಂತ ಯಾವುದೇ ಒತ್ತಡವಿಲ್ಲದೆ ಆರಾಮದಾಯಕವಾಗಿ ಯೋಗ ಮಾಡಬಹುದು.

*ಬೆಳಗ್ಗೆಯಿಂದ ಸಂಜೆ ವರೆಗೆ ಕೆಲಸ ಮಾಡಿ ಬಂದ ಸುಸ್ತು ಯೋಗ ಅಭ್ಯಾಸ ಮಾಡುವುದರಿಂದ ಮಾಯವಾಗುವುದು.

*ದಿನಪೂರ್ತಿ ತಿಂದಿದ್ದು ಸಂಜೆ ಯೋಗ ಮಾಡುವುದರಿಂದ ಅರಗಿಸಿಕೊಳ್ಳಬಹುದು.

*ಸಂಜೆ ಯೋಗ ಮಾಡುವುದರಿಂದ ಮಾನಸಿಕ ಒತ್ತಡಗಳು ದೂರವಾಗುವುದು, ಜತೆಗೆ ರಾತ್ರಿ ನಿದ್ದೆಯೂ ಚೆನ್ನಾಗಿ ಬರುವಂತೆ ಮಾಡುವುದು.

Advertisement

Udayavani is now on Telegram. Click here to join our channel and stay updated with the latest news.

Next