Advertisement

ನನ್ನ ವಯಸ್ಸು ಮತ್ತು ಪತ್ನಿಯ ವೇತನ ಕೇಳಬೇಡಿ!

04:40 AM Jul 12, 2017 | Team Udayavani |

ಹೊಸದಿಲ್ಲಿ: ಭಾರತೀಯರು ಬೇರೆ  ದೇಶದಲ್ಲಿ ಸಮಸ್ಯೆಗೆ ಸಿಲುಕಿದರೆ ಅವರನ್ನು ಸುರಕ್ಷಿತವಾಗಿ ಕರೆಸಿಕೊಳ್ಳುವಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಸದಾ ಮುಂದಿರುತ್ತಾರೆ. ಹಾಗೇ ಸಾಮಾಜಿಕ ಜಾಲತಾಣದಲ್ಲೂ ಅವರು ತುಂಬಾ ಆಕ್ಟಿವ್‌. ಟ್ವಿಟರ್‌ನಲ್ಲಿ ಅವರ ಕಾಲೆಳೆಯಲು ಬಂದವರು ಒಂದೇ ಪ್ರತಿಕ್ರಿಯೆಗೆ ತಣ್ಣಗಾದ ಉದಾಹರಣೆಗಳಿವೆ.

Advertisement

ಸುಷ್ಮಾ ಅವರು ಹೀಗಾದರೆ, ಅವರ ಪತಿ, ಮಿಜೋರಾಂ ರಾಜ್ಯಪಾಲ ಸ್ವರಾಜ್‌ ಕೌಶಲ್‌ ಕೂಡ ಈ ವಿಚಾರದಲ್ಲಿ ಪತ್ನಿಯನ್ನು ಮೀರಿಸುವಂತಿದ್ದಾರೆ. ಸ್ವರಾಜ್‌ ಅವರ ಟ್ವಿಟರ್‌ ಖಾತೆಗೆ ಆಗಾಗ ಸುಷ್ಮಾಗೆ ಸಂಬಂಧಿಸಿದ ಪ್ರಶ್ನೆಗಳು ಬರುತ್ತಿರುತ್ತವೆ. ಈ ಬಾರಿ ಬಂದ ಪ್ರಶ್ನೆಯೊಂದು ಹೀಗಿತ್ತು; ‘ಸಾರ್‌, ಸುಷ್ಮಾ ಮೇಡಂ ಸ್ಯಾಲರಿ ಎಷ್ಟಿರಬಹುದು?’ ಕ್ರಿಮಿನಲ್‌ ಲಾಯರ್‌ ಆಗಿರುವ ಸ್ವರಾಜ್‌ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿ, ‘ಸುಷ್ಮಾ ಅವರ ವೇತನ ಮತ್ತು ನನ್ನ ವಯಸ್ಸು ಎರಡನ್ನೂ ಕೇಳಬಾರದು. ಹಾಗೆ ಕೇಳುವುದು ಬ್ಯಾಡ್‌ ಮ್ಯಾನರ್ಸ್‌’ ಎಂದು ಟ್ವೀಟಿಸಿದ್ದಾರೆ. ಅನಂತರ ಮತ್ತೂಂದು ಟ್ವೀಟ್‌ ಮಾಡಿ, ‘ಚಂದಾ ಕೇಳುವುದಿದ್ದರೆ ನೇರವಾಗಿ ಕೇಳು, ವೇತನ ಏಕೆ ಕೇಳ್ತೀಯ’ ಎಂದು ಕಾಲೆಳೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next