Advertisement

ನುಡಿದಂತೆ ನಡೆದಿದ್ದೇವೆ ಎಂಬುದು ಸುಳ್ಳು: ನಾಗರಾಜು

01:52 PM Mar 11, 2018 | |

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಹೆಸರಿಗಷ್ಟೇ ನುಡಿದಂತೆ ನಡೆದಿದ್ದೇವೆ ಎಂದು ಸುಳ್ಳು ಹೇಳುತ್ತಾ  ಪ್ರಚಾರಗಿಟ್ಟಿಸಿಕೊಳ್ಳುತ್ತಿದೆ. ವಾಸ್ತವದಲ್ಲಿ ಯಾವುದೂ ಅನುಷ್ಠಾನವಾಗಿಲ್ಲ. ಕ್ಷೇತ್ರದ ಶಾಸಕರು ತಮ್ಮ ಅನುಯಾಯಿಗಳಿಗೆ ಮಾತ್ರ ಎಲ್ಲ ಸೌಲಭ್ಯಗಳನ್ನು ಮಂಜೂರು ಮಾಡಿಸುತ್ತಿದ್ದಾರೆ ಎಂದು ಭಾರತೀಯ ಶೂದ್ರ ಸೇನೆ ರಾಜ್ಯ ಘಟಕದ ಅಧ್ಯಕ್ಷ ವಿ.ನಾಗರಾಜು ಆರೋಪಿಸಿದರು.

Advertisement

ನಗರದಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಮನೆ ಮನೆಗಳಲ್ಲಿ ಅಕ್ರಮವಾಗಿ ಮದ್ಯದ ಅಂಗಡಿ ಪ್ರಾರಂಭಿಸಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕಾರ್ಮಿಕರು ಅಕಾಲಿಕ ಮರಣ ಹೊಂದುತಿದ್ದಾರೆ. ಚುನಾವಣೆ ಬಂದಿದೆ. ಮಹಿಳೆಯರು ಮತ ಹಾಕುವುದಿಲ್ಲ ಎಂಬ ಕಾರಣದಿಂದ ಗ್ರಾಮೀಣ ಪ್ರದೇಶದಲ್ಲಿ ಮದ್ಯಮಾರಾಟ ನಿಲ್ಲಿಸಲು ಸೂಚಿಸಿದ್ದಾರೆ.

ಮದ್ಯವ್ಯಸನಿಗಳನ್ನಾಗಿಸಿ ನಂತರ ಮದ್ಯ ಮಾರಾಟ ನಿಲ್ಲಸಿದರೆ ಏನು ಪ್ರಯೋಜನ. ಈ ಎಲ್ಲಾ ಅಕ್ರಮಗಳ ವಿರುದ್ಧ ಮಾ.13 ರಂದು ರಾಜ್ಯ ಮಟ್ಟದ ಬೃಹತ್‌ ಸ್ವಾಭಿಮಾನಿ ಜನಾಂದೋಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ
ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ ಎಂದರು.

ಶೋದ್ರ ಸೇನೆ ರಾಜ್ಯ ಸಂಘಟನಾ ಸಂಚಾಲಕ ಎಸ್‌.ಸಿದ್ದರಾಜು ಮಾತನಾಡಿ, 40 ವರ್ಷಗಳ ಹಿಂದೆ ನಮೂನೆ 50, 53ರಲ್ಲಿ ಅರ್ಜಿಸಲ್ಲಿಸಿರುವವರಿಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರೇ ಸಕ್ರಮೀಕರಣ ಪತ್ರ ವಿತರಿಸಲು ತಹಶೀಲ್ದಾರರಿಗೆ ಆದೇಶ ಮಾಡಿದ್ದಾರೆ.

ಆದರೆ ಸ್ಥಳೀಯ ಶಾಸಕರು ಸೂಕ್ತ ಕ್ರಮಕ್ಕೆ ಮುಂದಾಗದೇ ಯಾವುದೇ ರೀತಿಯ ಭೂ ಮಂಜೂರಾತಿಯನ್ನು ಮಾಡಿಲ್ಲ. ಆದರೆ ತಮ್ಮ ಪಕ್ಷದವರಿಗೆ ಮಾತ್ರ ಎಲ್ಲ ರೀತಿಯ ಸೌಲಭ್ಯಗಳನ್ನ ನೀಡುತ್ತಿದ್ದಾರೆ. ಇದೇ ರೀತಿ ನಗರಸಭಾ
ವ್ಯಾಪ್ತಿಯಲ್ಲಿನ ವಸತಿ ಯೋಜನೆಯಲ್ಲಿ 15 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ಫ‌ಲಾನುಭವಿಗಳಿಗೆ ವಂಚಿಸುವ ನಿಟ್ಟಿನಲ್ಲಿ ತಮ್ಮ ಅನುಯಾಯಿಗಳಿಗೆ ಮಾತ್ರ ಹಕ್ಕು ಪತ್ರವಿತರಿಸಲು ಮುಂದಾಗಿರುವುದು ಕೂಡ ಇವರ ಸಾಧನೆಯೇ ಎಂದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಶೂದ್ರ ಸೇನೆ ಸಂಸ್ಥಾಪಕ ಕೆ.ಸಿದ್ದರಾಜು, ರಾಜ್ಯ ಜಂಟಿ ಕಾರ್ಯದರ್ಶಿ ಕೆ.ವಿ.ಗೋವಿಂದರಾಜು, ಕೆ.ನಾಗರಾಜು, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ಮುನಿರಾಜು, ತಾಲೂಕು ಅಧ್ಯಕ್ಷ ಕೆ.ಪಿ.ಅಂಜನಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next