Advertisement

ಸ್ವದೇಶಿ ಮಹತ್ವ…ಪ್ರೆಸಿಡೆಂಟ್‌ ಫ್ಲೀಟ್‌ ರಿವ್ಯೂ ಏನಿದರ ಮಹತ್ವ?

01:00 PM Feb 22, 2022 | Team Udayavani |

ಭಾರತೀಯ ನೌಕಾ ಪಡೆ ನಡೆಸುವ ಅತ್ಯಂತ ದೊಡ್ಡ ಸಮಾರಂಭವಿದು. ಇದರಲ್ಲಿ ಮುಖ್ಯ ಅತಿಥಿಗಳೇ ರಾಷ್ಟ್ರಪತಿ ರಾಮನಾಥ ಕೋವಿಂದ್‌. ರಾಷ್ಟ್ರಪತಿಗಳು ಮೂರು ಪಡೆಗಳ ಮಹಾದಂಡನಾಯಕನಾಗಿರುವುದರಿಂದ ವರ್ಷಕ್ಕೊಮ್ಮೆ ಈ ದಿನ ನೌಕಾಪಡೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಾರೆ. ಹೀಗಾಗಿಯೇ ಈ ದಿನಕ್ಕೆ ಮಹತ್ವವಿದೆ.

Advertisement

ವಿಶಾಖಪಟ್ಟಣಕ್ಕೆ ಭೇಟಿ
ಸೋಮವಾರ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರು ವಿಶಾಖಪಟ್ಟಣಕ್ಕೆ ಭೇಟಿ ನೀಡಿ ಫ್ಲೀಟ್‌ ಪರಿಶೀಲನೆ ನಡೆಸಿದ್ದಾರೆ. ಫ್ಲೀಟ್‌ ಎಂದರೆ ನೌಕಾಪಡೆಯ ಹಡಗುಗಳ ಒಂದು ಗುಂಪಾಗಿದೆ.

ಪ್ರಸಿಡೆಂಟ್‌ ಫ್ಲೀಟ್‌ ರಿವ್ಯೂ
ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು, ಪ್ರಸಿಡೆನ್ಶಿಯಲ್‌ ಯಾಚ್‌ನಲ್ಲಿ ಕುಳಿತು ಭಾರತೀಯ ನೌಕಾಪಡೆಯ ಹಡಗುಗಳು ಮತ್ತಿತರ ಶಸ್ತ್ರಾಸ್ತ್ರಗಳ ಪರಿಶೀಲನೆ ಮಾಡುತ್ತಾರೆ. ಈ ಫ್ಲೀಟ್‌ನಲ್ಲಿ 60 ಹಡಗುಗಳು ಮತ್ತು ಸಬ್‌ಮೆರಿನ್‌ಗಳು, 55 ಯುದ್ಧ ವಿಮಾನಗಳು ಇವೆ. ಪ್ರತೀ ವರ್ಷವೂ ಒಂದೊಂದು ನೌಕಾದಳದ ನೆಲೆಯಲ್ಲಿ ಈ ಪ್ರಸಿಡೆನ್ಶಿಯಲ್‌ ಫ್ಲೀಟ್‌ ರಿವ್ಯೂ ನಡೆಸಲಾಗುತ್ತದೆ. ಈ ಬಾರಿ ವಿಶಾಖಪಟ್ಟಣಕ್ಕೆ ಒಲಿದಿದೆ.

ಹೊಸ ಶಸ್ತ್ರಾಸ್ತ್ರಗಳ ಪ್ರದರ್ಶನ
ಈ ಫ್ಲೀಟ್‌ ರಿವ್ಯೂ ವೇಳೆ ಮುಂದೆ ನೌಕಾಪಡೆಗೆ ಸೇರಲಿರುವ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಾಗುತ್ತದೆ.

ಸ್ವದೇಶಿ ಮಹತ್ವ
ಈ ಬಾರಿಯ ಫ್ಲೀಟ್‌ನಲ್ಲಿ ಪ್ರದರ್ಶನವಾಗುತ್ತಿರುವ 60 ಸಮರನೌಕೆ ಮತ್ತು ಸಬ್‌ಮೆರಿನ್‌ಗಳಲ್ಲಿ 47 ಅನ್ನು ದೇಶೀಯವಾಗಿ ನಿರ್ಮಿಸಲಾಗಿದೆ ಎಂದು ನೌಕಾಪಡೆ ಹೇಳಿದೆ. ಅಷ್ಟೇ ಅಲ್ಲ, ಪ್ರಸಿಡೆನ್ಶಿಯಲ್‌ ಯಾಚ್‌ ಅನ್ನೂ ದೇಶೀಯವಾಗಿ ನಿರ್ಮಾಣ ಮಾಡಲಾಗಿದೆ ಎಂಬುದು ವಿಶೇಷ.

Advertisement

ಇದುವರೆಗೆ ಎಷ್ಟು ರಿವ್ಯೂ?
ಮೊದಲ ಬಾರಿಗೆ 1953ರಲ್ಲಿ ಪ್ರಸಿಡೆಂಟ್‌ ಫ್ಲೀಟ್‌ ರಿವ್ಯೂ ನಡೆಸಲಾಗಿತ್ತು. ಆಗ ರಾಜೇಂದ್ರ ಪ್ರಸಾದ್‌ ಅವರು ರಾಷ್ಟ್ರಪತಿಯಾಗಿದ್ದರು. ಇದುವರೆಗೆ ಒಟ್ಟು 11 ಫ್ಲೀಟ್‌ ರಿವ್ಯೂ ನಡೆಸಲಾಗಿದೆ. 2001 ಮತ್ತು 2016ರಲ್ಲಿ ವಿದೇಶಿ ನೌಕೆಗಳೂ ಭಾಗಿಯಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next