Advertisement

ನುಡಿದಂತೆ ನಡೆಯದ ಮೋದಿ ಸಾಧನೆ ಏನು?

07:50 AM Mar 13, 2019 | |

ತಿ.ನರಸೀಪುರ: ಲೋಕಸಭಾ ಚುನಾವಣೆ ಪೂರ್ವದಲ್ಲಿ ಬಿಜೆಪಿ ನೀಡಿದ್ದ ಭರವಸೆಗಳನ್ನು ಪರಿಪೂರ್ಣವಾಗಿ ಈಡೇರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫ‌ಲರಾಗಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ, ಮೈಸೂರು ಜಿಲ್ಲಾ ಉಸ್ತುವಾರಿ ವಿಷ್ಣುನಾಥನ್‌ ಟೀಕಿಸಿದರು.

Advertisement

ಪಟ್ಟಣದ ಚಿಕ್ಕಮ್ಮತಾಯಿ ಯಾತ್ರಿ ಭವನದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ, ತಿ.ನರಸೀಪುರ, ಬನ್ನೂರು ಹಾಗೂ ವರುಣಾ ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳ ವತಿಯಿಂದ ಏರ್ಪಡಿಸಿದ್ದ ಜನ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಾಗೂ ಈಗಿನ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರು ಹೋಲಿಕೆ ಮಾಡಿದಾಗ ಸಿದ್ದರಾಮಯ್ಯ ಅವರು ನುಡಿದಂತೆ ನಡೆದು ಚುನಾವಣೆಯಲ್ಲಿ ನೀಡಿದ್ದ 165 ಆಶ್ವಾಸನೆಯನ್ನು ಈಡೇರಿಸಿದ್ದರು.

ಆದರೆ, 5 ವರ್ಷ ಆಡಳಿತ ನಡೆಸಿದ ಮೋದಿಯವರು ವಿದೇಶದಲ್ಲಿರುವ ಕಪ್ಪು ಹಣವನ್ನು ತರಲಿಲ್ಲ. ಚುನಾವಣಾ ಪೂರ್ವದಲ್ಲಿ ನುಡಿದಂತೆ ನಡೆದಿಲ್ಲ. ಜನಧನ ಖಾತೆಗೆ  15 ಲಕ್ಷ ರೂ. ಹಾಕಲಿಲ್ಲ.  2 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ. ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಸಲಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಮೊದಲ ಹಾಗೂ ದೇಶದಲ್ಲಿಯೇ ನಾಲ್ಕನೆ ಉನ್ನತ ಸ್ಥಾನದಲ್ಲಿರುವ ಸಂಸದ ಆರ್‌.ಧ್ರುವನಾರಾಯಣ ಜನಪರ ಕೆಲಸ ಮಾಡುತ್ತಿದ್ದಾರೆ. 10 ವರ್ಷಗಳ ತಮ್ಮ ಅವಧಿಯಲ್ಲಿ ಕ್ಷೇತ್ರಕ್ಕೆ 1 ಸಾವಿರ ಕೋಟಿ ರೂ. ಅನುದಾನ ದೊರಕಿಸಿಕೊಟ್ಟಿದ್ದಾರೆ.  ಜನಪರ ಕಾಳಜಿಯ ಸೇವೆಯಿಂದಾಗಿ ಪಕ್ಷ  ಧ್ರುವನಾರಾಯಣ ಅವರ‌ ಆಯ್ಕೆ  ಸ್ಕ್ರೀನಿಂಗ್‌ ಕಮಿಟಿಯಲ್ಲಿ ಯಾವುದೇ ಚರ್ಚೆ ಇಲ್ಲದೆ ನಡೆದಿದೆ ಎಂದರು.

Advertisement

ಪೊಳ್ಳು ಭರವಸೆ: ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಮಾತನಾಡಿ, ಸುಳ್ಳು ಆಶ್ವಾಸನೆ, ಪೊಳ್ಳು ಭರವಸೆಗಳನ್ನು ನೀಡಿ ಮೋದಿ ಅಧಿಕಾರ ನಡೆಸಿದ್ದಾರೆ.  ಎನ್‌ಡಿಎ ಸರ್ಕಾರ ಯಾವುದೇ ಆಶ್ವಾಸನೆಗಳನ್ನು ಈಡೇರಿಸಲಿಲ. ನೂರು ದಿನ ಅಧಿಕಾರ ಕೊಟ್ಟರೆ ಸ್ವರ್ಗವನ್ನೇ ಜನತೆಯ ಮುಂದೆ ತಂದಿಡುತ್ತೇವೆ ಎಂದು ಹೇಳಿದ್ದ ಮೋದಿ ಅವರು ಆಡಳಿತದಲ್ಲಿ ಸಂಪೂರ್ಣ ವಿಫ‌ಲರಾಗಿದ್ದಾರೆ ಎಂದು ಟೀಕಿಸಿದರು. 

ಸಭೆಗೆ ಮಾಜಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಗೈರಾಗಿದ್ದರು. ಶಾಸಕ ಆರ್‌. ಧರ್ಮಸೇನ, ಮಾಜಿ ಶಾಸಕ ಎಸ್‌. ಕೃಷ್ಣಪ್ಪ, ಡಿಸಿಸಿ ಅಧ್ಯಕ್ಷ ಡಾ. ಬಿ.ಜೆ ವಿಜಯಕುಮಾರ್‌, ಜಿಪಂ ಮಾಜಿ ಅಧ್ಯಕ್ಷ ಕೆ.ಸಿ.ಬಲರಾಂ, ಬ್ಲಾಕ್‌ ಅಧ್ಯಕ್ಷರಾದ ಟಿ.ಎಚ್‌. ಮಂಜುನಾಥ್‌, ರವೀಂದ್ರಕುಮಾರ್‌, ರಮೇಶ್‌ ಮುದ್ದೇಗೌಡ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಶಿವಮೂರ್ತಿ,

ಮಾಜಿ ಅಧ್ಯಕ್ಷ ವಜ್ರೆàಗೌಡ, ಹುಣಸೂರು ಬಸವಣ್ಣ, ವೈ. ಎನ್‌. ಶಂಕರೇಗೌಡ, ಶ್ರೀನಿವಾಸ್‌, ಎಂ.ಡಿ.ಬಸವರಾಜು, ಉಸ್ತುವಾರಿ ಶಿವನಾಗಪ್ಪ, ವೀಕ್ಷಕ ಶ್ರೀನಿವಾಸ್‌, ಮೊಸಿನ್‌ ಖಾನ್‌, ತಾಪಂ ಅಧ್ಯಕ್ಷ ಚೆಲುವರಾಜು, ಸದಸ್ಯ ಕೆ.ಎಸ್‌. ಗಣೇಶ್‌, ಟಿ.ಎಸ್‌.ಲೋಕೇಶ್‌, ಕೊತ್ತೇಗಾಲ ಬಸವರಾಜು, ಹಸ್ತಿಕೇರಿ ನಾಗರಾಜು, ಸುಧಾಮಣಿ, ಮೇದನಿ ಸಿದ್ದರಾಜು ಇತರರಿದ್ದರು.

ಸರ್ಜಿಕಲ್‌ ಸ್ಟ್ರೈಕ್‌ ರಾಜಕೀಯ ದಾಳ: ಈಗಿನ ಎನ್‌ಡಿಎ ಸರ್ಕಾರವನ್ನು ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಸರ್ಜಿಕಲ್‌ ಸ್ಟ್ರೈಕ್‌ ಮೂರು ಪಟ್ಟು ಹೆಚ್ಚಾಗಿ ನಡೆದಿತ್ತು. ಆದರೆ, ಇದನ್ನು ಯುಪಿಎ ಸರ್ಕಾರ ಬಹಿರಂಗಪಡಿಸಲಿಲ್ಲ. ಪ್ರಧಾನಿ ಮೋದಿಯವರು ಮಾತಿನಲ್ಲಿ ತೋರಿದ ದಕ್ಷತೆಯನ್ನು ಆಂತರಿಕ ಭದ್ರತೆಯಲ್ಲಿ ತೋರಿದ್ದರೆ ಅವರ ನಾಯಕತ್ವವನ್ನು ಒಪ್ಪಬಹುದಿತ್ತು.  

ಆದರೆ, ಈಗ ಸರ್ಜಿಕಲ್‌ ದಾಳಿಯನ್ನು ದಾಳ ವಾಗಿಸಿಕೊಂಡು ರಾಜಕೀಯ ಮಾಡಿ ಮತ ಕೇಳಲು ಮುಂದಾಗಿರುವುದು ಸರಿಯಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೇ ಪುಲ್ವಾಮ ದಾಳಿಯ ಮಾಸ್ಟರ್‌ ಮೈಂಡ್‌ ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಮೊಹಮ್ಮದ್‌ ಅಜರ್‌ನನ್ನು ಸೆರೆ ಹಿಡಿಯಲಾಗಿತ್ತು. ಬಿಜೆಪಿ ಅವಧಿಯಲ್ಲಿ ಕಂದಹಾರ್‌ ವಿಮಾನ ಅಪಹರಣ ಆದಾಗ ಆತನನ್ನು ಬಿಡುಗಡೆ ಮಾಡಲಾಯಿತು ಎಂದು ಸಂಸದ, ಕಾಂಗ್ರೆಸ್‌ ಅಭ್ಯರ್ಥಿ ಧ್ರುವನಾರಾಯಣ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next