Advertisement
ಚನ್ನರಾಯಪಟ್ಟಣ ತಾಲೂಕು ದಂಡಿಗನಹಳ್ಳಿ ಹಾಗೂ ಹೊಳೆನರಸೀಪುರ ತಾಲೂಕಿನ ಹಳೆಕೋಟೆ ಹೋಬಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಮೊದಲ ಹಂತ 2015 ರ ಏಪ್ರಿಲ್‌ನಲ್ಲಿ ಉದ್ಘಾಟನೆಯಾಗಿತ್ತು. ಯೋಜನೆಯನ್ನು ಉದ್ಘಾ ಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2ನೇ ಹಂತದ ಯೋಜನೆ ಯನ್ನು ಇನ್ನು 3 ತಿಂಗಳೊಳಗೆ ಪೂರ್ಣ ಗೊಳಿಸುವುದಾಗಿ ಪ್ರಕಟಿಸಿದ್ದರು. ಆದರೆ ಅದು ಆಗಿರಲಿಲ್ಲ. ಒಂದು ತಿಂಗಳಿಂದೀಚೆಗೆ ಯೋಜನೆಯ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. 2ನೇ ಹಂತದ ಯೋಜನೆಯು ಇನ್ನು ಎರಡು- ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, 6,610 ಎಕರೆ ನೀರಾವರಿಗೆ ಒಳಪಡಲಿದೆ.
Related Articles
Advertisement
2 ನೇ ಹಂತದಲ್ಲಿ 9 ವಿತರಣಾ ನಾಲೆಗಳಿಂದ ದಂಡಿಗನಹಳ್ಳಿ ಹೋಬಳಿಯ 5385 ಎಕರೆ ಬಿಜುಮಾರನಹಳ್ಳಿಯ 5 ವಿತರಣಾ ನಾಲೆಗಳಿಂದ 1225 ಎಕರೆಗೆ ನೀರಾವರಿಯಾಗುತ್ತಿದ್ದು, ಈ ಹಂತದ 6,610 ಎಕರೆಯ ಪೈಕಿ ಈಗ 1790 ಎಕರೆ ನೀರಾವರಿಯಾಗುತ್ತಿದೆ. ದಂಡಿಗನಹಳ್ಳಿ ಮುಖ್ಯ ನಾಲೆಯ ಒಟ್ಟು 22.5 ಕಿ.ಮೀ.ನಾಲೆಯ ಪೈಕಿ 21 ಕಿ.ಮೀ. ನಾಲೆ ನಿರ್ಮಾಣ ಪೂರ್ಣಗೊಂಡಿದೆ. 1.3 ಕಿ. ಮೀ. ನಾಲೆ ನಿರ್ಮಾಣಕ್ಕೆ ಭೂ ಸ್ವಾಧೀನದ ಸಮಸ್ಯೆ ಎದುರಾಗಿದ್ದು, ಆ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆದಿದೆ. ಇನ್ನು ಬಿಜುಮಾರವನಹಳ್ಳಿ ಭಾಗದ ನಾಲೆಯ 8.7 ಕಿ.ಮೀ. ನಾಲೆ ನಿರ್ಮಾಣ ಪೂರ್ಣಗೊಂಡಿದೆ ಎಂದು ಇಂಜಿನಿಯರ್ ಮಾಹಿತಿ ನೀಡಿದ್ದಾರೆ.
ಒಟ್ಟು 3 ಹಂತಗಳಿಗೂ ಒಟ್ಟು 0.73 ಟಿಎಂಸಿ ನೀರು ಬಳಸಿಕೊಳ್ಳಲು ಜಲಸಂಪನ್ಮೂಲ ಇಲಾಖೆ ಅನುಮೋದನೆ ನೀಡಿದ್ದು, ಮೊದಲ ಹಂತಕ್ಕೆ 11.88 ಕ್ಯೂಸೆಕ್, 2 ನೇ ಹಂತಕ್ಕೆ 56.87 ಕ್ಯೂಸೆಕ್, 3 ನೇ ಹಂತಕ್ಕೆ 40.55 ಕ್ಯೂಸೆಕ್ ನಿಗದಿಯಾಗಿದೆ.
ಯಾವ ಯಾವ ಕೆರೆಗಳಿಗೆ ನೀರು? ಬಿಜುಮಾರನಹಳ್ಳಿ ನಾಲೆಯ ವ್ಯಾಪ್ತಿಯಲ್ಲಿ ಮನಾಥನಹಳ್ಳಿ ಕೆರೆ ಮತ್ತು ಶೆಟ್ಟಿಗೌಡನಹಳ್ಳಿ ಕೆರೆ, ಕತ್ತರಿಘಟ್ಟ, ಬಳದರೆ, ಮುದ್ದನಹಳ್ಳಿ, ಬಿ,ಹೊಸಹಳ್ಳಿ,ಬಿಜುಮಾರನಹಳ್ಳಿ, ಶಿವಪುರ, ಬನಕುಪ್ಪೆ, ಶೆಟ್ಟಿಗೌಡನಹಳ್ಳಿ, ಬಿ.ಸಮುದ್ರವಳ್ಳಿ, ಡಿ.ಸಮುದ್ರವಳ್ಳಿ,ಕಟ್ಟೆ, ಒಗ್ಗರಹಳ್ಳಿ, ಕೆ.ಹಿರಿಹಳ್ಳಿ, ಶಾಂತಿಗ್ರಾಮ ಬಿಜುಮಾರನಹಳ್ಳಿ, ಹೊಸಹಳ್ಳಿ ಸೇರಿದಂತೆ ಹಲವು ಕೆರೆಗಳಿಗೆ ನೀರು ಬರಲಿದೆ. ದಂಡಿಗನಹಳ್ಳಿ ಹೋಬಳಿಯ ನಾಲೆಯ ವ್ಯಾಪ್ತಿಯಲ್ಲಿ ಡಿ.ಸಮುದ್ರವಳ್ಳಿ, ನಾರಾಯಣಪುರ, ಸಣ್ಣೇನಹಳ್ಳಿ, ಶೆಟ್ಟಿಗೌಡನಹಳ್ಳಿ, ಸೋಮನಾಥನಹಳ್ಳಿ, ಕೋಡಿಹಳ್ಳಿ, ಊಪಿನಹಳ್ಳಿ, ಚೌಡನೇಹಳ್ಳಿ, ಮುದ್ದನಹಳ್ಳಿ, ಬಳದರೆ, ಒಗ್ಗರಹಳ್ಳಿ, ರೇಹಳ್ಳಿ, ತೆಂಕನಹಳ್ಳಿ, ದಂಡಿಗನಹಳ್ಳಿ, ಮುರಾರನಹಳ್ಳಿ, ಧೂತನೂರ ಕಾವಲು, ಅಣ್ಣೇನಹಳ್ಳಿ ಅಪ್ಪೇನಹಳ್ಳಿ ಕೆರೆಗಳು ಹಾಗೂ ತಮ್ಮಲಾಪುರ ಕೆರೆಗೂ ನೀರು ಹರಿಯಲಿದೆ. ಕಾಚೇನಹಳ್ಳಿ ಏತ ನೀರಾವರಿ ಯೋಜನೆ 20 ವರ್ಷದಿಂದ ನೆನಗುದಿಗೆ ಬಿದ್ದಿತ್ತು. ಚುನಾವಣೆ ಸಂದರ್ಭದಲ್ಲಿ ಎಚ್.ಡಿ.ರೇವಣ್ಣ ಅವರು ಅಧಿಕಾರಕ್ಕೆ ಬಂದ 3 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದರು. ಅದರಂತೆ ಅವರು ನಡೆದುಕೊಂಡು ಯೋಜನೆ ಪೂರ್ಣಗೊಳಿಸಿ ನೀರು ಹರಿಸಿದರೆ ದಂಡಿಗನಹಳ್ಳಿ ಹೋಬಳಿ ರೈತರು ಎಚ್.ಡಿ.ರೇವಣ್ಣ ಅವರನ್ನು ಸದಾಕಾಲ ಸ್ಮರಿಸಿಕೊಳ್ಳುವರು.
ಸಿ.ಜಿ.ರವಿ, ಅಧ್ಯಕ್ಷ ಚನ್ನರಾಯಪಟ್ಟಣ ತಾಲೂಕು ರೈತ ಸಂಘ ದಂಡಿಗನಹಳ್ಳಿ ಹೋಬಳಿಯಲ್ಲಿ ಅಂತರ್ಜಲದ ಮಟ್ಟ 1500 ಅಡಿಗೆ ಕುಸಿದಿದೆ. ಕುಡಿಯುವ ನೀರಿಗೂ ಪರದಾಡುತ್ತಿದ್ದೇವೆ. ತೆಂಗಿನ ಮರಗಳಂತೂ ನಾಶವಾಗಿವೆ. ಏತನೀರಾವರಿ ಯೋಜನೆಯಿಂದ ಕೆರೆಗಳನ್ನು ತುಂಬಿಸಿದರೆ ರೈತರು ನೆಮ್ಮದಿ ಕಂಡುಕೊಳ್ಳಲಿದ್ದಾರೆ.
ಅಣ್ಣೇನಹಳ್ಳಿ ನಾಗಣ್ಣ, ರೈತ ಚುನಾವಣೆ ವೇಳೆ ಎಚ್.ಡಿ.ರೇವಣ್ಣ 6 ತಿಂಗಳೊಳಗೆ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ 2 ನೇ ಹಂತವನ್ನು 6 ತಿಂಗಳೊಳಗೆ ಪೂರ್ಣಗೊಳಿಸದಿದ್ದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುವುದಾಗಿ ಹೇಳಿದ್ದರು.
ಗುರುಪ್ರಸಾದ್, ಯಲಿಯೂರು, ಏತ ನೀರಾವರಿ ಹೋರಾಟ ಸಮಿತಿ ಮುಖಂಡ.