Advertisement

ಫೈಲ್ ಟ್ರಾನ್ಸ್ ಫರ್: ಏನಿದು Google Files? ಇತರ ಆ್ಯಪ್ ಗಳಿಗಿಂತ ಹೇಗೆ ಭಿನ್ನ…

08:27 PM Oct 13, 2020 | Mithun PG |

ಗೂಗಲ್ ತನ್ನ ಬಳಕೆದಾರರ ಹಿತದೃಷ್ಟಿಯಿಂದ ಪ್ರತಿನಿತ್ಯ ಹೊಸತನ್ನು ಸೃಷ್ಟಿಸುತ್ತಿದೆ. ತಂತ್ರಜ್ಞಾನದಲ್ಲಿ ಕಂಡುಕೇಳರಿಯದ ರೀತಿಯ ಅವಿಷ್ಕಾರಗಳನ್ನು ಮಾಡಿ ಅದನ್ನು ಜನರ ಮುಂದಿಡುತ್ತಿದೆ.

Advertisement

ಇಂದು ಗೂಗಲ್ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿದೆ ಎನ್ನುವುದು ಕೂಡ ಅತಿಶಯೋಕ್ತಿಯಲ್ಲ. ಬ್ರೌಸರ್, ಪ್ಲೇಸ್ಟೋರ್, ಡ್ರೈವ್, ಮೇಲ್, ಕ್ಲೌಡ್ ಸ್ಟೋರೇಜ್, ಆ್ಯಡ್, ಆ್ಯನಾಲಿಟಿಕ್ಸ್, ಮ್ಯಾಪ್, ಯೂಟ್ಯೂಬ್, ಗೂಗಲ್ ಪೇ, ಡಾಕ್ಸ್, ಟ್ರಾನ್ಸ್ ಲೇಟ್, ಫೋಟೋ ಸೇರಿದಂತೆ ಲೆಕ್ಕಕ್ಕೇ ಸಿಗದ ಮಾದರಿಯಲ್ಲಿ ಸೇವೆಯನ್ನು ನೀಡುತ್ತಿದೆ. ಗೂಗಲ್ ಈ ರೀತಿ ಪ್ರಚಲಿತಕ್ಕೆ ಬರಲು ಕಾರಣ ಅದು ಒದಗಿಸುವ ಭದ್ರತೆ. ಬಳಕೆದಾರರ ಯಾವುದೇ ಮಾಹಿತಿ ಸೋರಿಕೆಯಾಗದಂತೆ ಗೂಗಲ್ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ ಅನುಸರಿಸುತ್ತಿದೆ.

ಸ್ಮಾರ್ಟ್‌ಫೋನ್ ಮೆಮೊರಿ ನಿರ್ವಹಣೆಗಾಗಿ ಗೂಗಲ್ ಹೊರತಂದ Google Files ಆ್ಯಪ್ ಇಂದು ಬಹಳ ಜನಪ್ರಿಯವಾಗುತ್ತಿದೆ. ಏನಿದು Google Files? ಇತರ ಆ್ಯಪ್ ಗಳಿಗಿಂತ ಹೇಗೆ ಭಿನ್ನ ? ಕಾರ್ಯನಿರ್ವಹಣೆ ಹೇಗೆ ? ಮುಂತಾದ ವಿಚಾರಗಳು ಇಲ್ಲಿವೆ.

Google Files ಎಂಬುದು ಸ್ಮಾರ್ಟ್ ಫೋನ್ ಡೇಟಾ ಸ್ಟೋರೇಜ್ ಮಾಡಲು ಹೊರತಂದ ಅಪ್ಲಿಕೇಶನ್. ಆ್ಯಂಡ್ರಾಯ್ಡ್ ಬಳಕೆದಾರರಿಗೆ ಇತ್ತೀಚಿನ ದಿನಗಳಲ್ಲಿ ಬಹಳ ನೆರವಾಗುತ್ತಿದೆ. ಇದರ ಮೊದಲ ಹೆಸರು ‘Files Go’ ಎಂಬುದಾಗಿತ್ತು. ಇದರ ಪ್ರಾಥಮಿಕ ಕೆಲಸ ನಿಮ್ಮ ಮೊಬೈಲ್ ನಲ್ಲಿರುವ ಜಂಕ್ ಫೈಲ್ ಗಳನ್ನು ಕ್ಲಿಯರ್ ಮಾಡುವುದು. ಮಾತ್ರವಲ್ಲದೆ ಸ್ಪ್ಯಾಮ್ ಅಥವಾ ನಕಲಿ ಫೈಲ್‌ಗಳನ್ನು ಹುಡುಕಿ ಡಿಲೀಟ್ ಮಾಡಲು ಕೂಡ ಇದು ನೆರವಾಗುತ್ತದೆ.

Advertisement

ಡಿವೈಸ್ ಗಳನ್ನು ಅಚ್ಚುಕಟ್ಟಾಗಿರಿಸಿಕೊಳ್ಳಲು ಕೂಡ ಈ ಆ್ಯಪ್ ಸಹಕಾರಿಯಾಗಿದೆ.  ಇತ್ತೀಚಿಗೆ ಇಂಟರ್ ನೆಟ್ ಸಹಾಯವಿಲ್ಲದೆ ಒಂದು ಫೋನ್ ನಿಂದ ಮತ್ತೊಂದು ಫೋನ್ ಗೆ ಫೈಲ್ ಟ್ರಾನ್ಸ್ ಫರ್ ಮಾಡುವ ಫೀಚರ್ ಕೂಡ ಹೊರತಂದಿದೆ.

ಪ್ರಮುಖವಾಗಿ Google Files ಅಪ್ಲಿಕೇಶನ್ ಕೇವಲ 10 ಎಂಬಿ ಗಾತ್ರವನ್ನು ಹೊಂದಿದೆ. ಹಲವು ಸ್ಮಾರ್ಟ್ ಫೋನ್ ಗಳಲ್ಲಿ Default ಆಗಿ ಡೌನ್ ಲೋಡ್ ಆಗಿರುವುದನ್ನು ಕಾಣಬಹುದು. ಇತರ ಥರ್ಡ್ ಪಾರ್ಟಿ ಫೈಲ್ ಮ್ಯಾನೇಜರ್ ಆ್ಯಪ್ ಗಳನ್ನು (ಇದು ಅತೀ ಹೆಚ್ಚು ಸ್ಪೇಸ್ ಬಳಸಿಕೊಳ್ಳುತ್ತದೆ) ಉಪಯೋಗಿಸುವುದಕ್ಕಿಂತ Google Files ಬಳಸುವುದು ಉತ್ತಮ.

ಇದರ ಪ್ರಮುಖ ಫೀಚರ್:

1. ಜಂಕ್ ಪೈಲ್ ಗಳ ತೆರವು: ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಅನಗತ್ಯ ಫೈಲ್‌ ಗಳೇನಾದರೂ ಬೀಡುಬಿಟ್ಟಿದ್ದರೆ ಅದರ ಬಗ್ಗೆ ಈ ಆ್ಯಪ್ ಎಚ್ಚರಿಸುತ್ತದೆ. ನೀವು ಕಳೆದ 30 ದಿನಗಳಲ್ಲಿ ಬಳಸದಿರುವ ಅಪ್ಲಿಕೇಷನ್‌ಗಳು, ಆಡಿಯೊ ಫೈಲ್ ಗಳು ಅಥವಾ ನಕಲಿ ಫೈಲ್‌ಗಳ ಬಗ್ಗೆ ಇವು ನೋಟಿಫಿಕೇಷನ್‌ಗಳನ್ನು ನೀಡುತ್ತದೆ. ಜಂಕ್ ಫೈಲ್ ಗಳನ್ನು ಹುಡುಕಿ ಡಿಲೀಟ್ ಮಾಡುವುದು ಬಹಳ ಕಷ್ಟಕರವಾದ ಕೆಲಸ. ಈ ಸಮಸ್ಯೆಗೆ ಗೂಗಲ್ ಫೈಲ್ಸ್ ಪರಿಹಾರ ನೀಡಿದೆ.

ಈ ಆ್ಯಪ್ ತೆರೆದರೆ ಫೈಲ್ಸ್ ಎಂಬ ಆಯ್ಕೆ ಕಾಣಿಸುತ್ತದೆ. ಈ ಆಯ್ಕೆಯಲ್ಲಿ ಸ್ಮಾರ್ಟ್‌ಫೋನಿನ ಪ್ರತಿಯೊಂದು ಫೈಲ್‌ಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಯಾವ ಫೈಲ್ ಎಷ್ಟು ಗಾತ್ರದಲ್ಲಿದೆ ಎಂಬುದನ್ನು ನೋಡಿ ನೇರವಾಗಿ ಅದನ್ನು ಡಿಲೀಟ್ ಮಾಡಬಹುದಾಗಿದೆ.

ನಮ್ಮ ಮೊಬೈಲ್ ನಲ್ಲಿ ನಮಗೆ ತಿಳಿಯದ ಅನೇಕ ಡೂಪ್ಲಿಕೇಟ್ ಫೈಲ್ಸ್ ಗಳಿರುತ್ತವೆ. ಇದರಿಂದ ನೀವು ಏನನ್ನೂ ಡೌನ್ ಲೋಡ್ ಮಾಡದಿದ್ದರೂ ಸ್ಟೋರೇಜ್ ಮಾತ್ರ ಭರ್ತಿಯಾಗುತ್ತದೆ. ಈ ಜಂಕ್ ಫೈಲ್ ಗಳನ್ನು Google Files ಡಿಟೆಕ್ಟ್ ಮಾಡುತ್ತದೆ.

2. ಬೂಸ್ಟ್ ಫೋನ್ ಮೆಮೋರಿ: ಅಟೋಮ್ಯಾಟಿಕ್ ಆಗಿ ಇಮೇಜ್ ಗಳನ್ನು Sort ಮಾಡುವುದರಿಂದ ಮೊಬೈಲ್ ಸಾಮರ್ಥ್ಯ ಹೆಚ್ಚಳಕ್ಕೆ ಕೂಡ ಈ ಅಪ್ಲಿಕೇಶನ್ ಸಹಾಯ ಮಾಡುತ್ತದೆ. ಮುಖ್ಯವಾಗಿ ಜಂಕ್ ಫೈಲ್ ಗಳನ್ನು ತೆರವು ಮಾಡುವುದರಿಂದ ಫೋನಿನ ಕಾರ್ಯನಿರ್ವಹಣೆ ಸುಲಭವಾಗುತ್ತದೆ. ಮೊಬೈಲ್ ಗಳನ್ನು Refresh ಮಾಡಲು ಕೂಡ ಈ ಆ್ಯಪ್ ಪರಿಣಾಮಕಾರಿ.

3. ಫೈಲ್ ಟ್ರಾನ್ಸ್ ಫರ್: ಭಾರತದಲ್ಲಿ ಚೀನಾ ಆ್ಯಪ್ ಗಳನ್ನು ನಿಷೇಧಿಸಿದ ನಂತರ ಫೈಲ್ ಟ್ರಾನ್ಸ್ ಫರ್ ಸೇವೆಗೆ ಉತ್ತಮ ಅಪ್ಲಿಕೇಶನ್ ಗಳಿರಲಿಲ್ಲ. ಈ ಕೊರತೆಯನ್ನು Google Files ನೀಗಿಸಿದೆ. ಈ ಆ್ಯಪ್ ಸಹಾಯದಿಂದ ಒಂದು ಫೋನ್ ನಿಂದ ಮತ್ತೊಂದು ಫೋನ್ ಗೆ ಸುಲಭವಾಗಿ ಫೈಲ್ ಗಳನ್ನು ಶೇರ್ ಮಾಡಬಹುದು. ಇಂಟರ್ ನೆಟ್ ಸಹಾಯವಿಲ್ಲದೆ 480Mbps ಸ್ಪೀಡ್ ನಲ್ಲಿ ಸಿನಿಮಾ, ವಿಡಿಯೋ ಫೋಟೋ, ಆ್ಯಪ್ ಮುಂತಾದವುಗಳನ್ನು ಸೆಂಡ್ ಮಾಡಬಹುದು.

4. ಬ್ರೌಸ್: ನಿಮ್ಮ ಡಿವೈಸ್ ನಲ್ಲಿರುವ ಎಲ್ಲಾ ಮಾದರಿಯ ಫೈಲ್ ಗಳನ್ನು ಒಂದು ವೇದಿಕೆಯಡಿ ಇದು ತರುತ್ತದೆ. ಪ್ರಮುಖವಾಗಿ ಡೌನ್ ಲೋಡ್ಸ್, ರಿಸಿವ್ಡ್ ಫೈಲ್ಸ್, ಇಮೇಜಸ್, ವಿಡಿಯೋ, ಆಡಿಯೋ, ಡಾಕ್ಯುಮೆಂಟ್ಸ್ ಮುಂತಾದವು. ಅದರ ಜೊತೆಗೆ ಡಿಲೀಟ್, ಮೂವ್, ರೀನೇಮ್ ಮತ್ತು ಶೇರ್ ಮಾಡಲು ಕೂಡ ಅವಕಾಶ ಕಲ್ಪಿಸಿದೆ.

ಒಟ್ಟಾರೆಯಾಗಿ ಫೈಲ್ ಮ್ಯಾನೇಜರ್ ರೀತಿಯಲ್ಲಿ Google Files ಕೆಲಸ ಮಾಡುತ್ತದೆ. ಮಾತ್ರವಲ್ಲದೆ ಗೂಗಲ್ ಡ್ರೈವ್ ಗೆ ಇಲ್ಲಿಂದ ಫೈಲ್ ಟ್ರಾನ್ಸ್ ಫರ್ ಮಾಡಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next