Advertisement

ಟೇಬಲ್‌ ಟಾಪ್‌ ರನ್‌ವೇ ಎಂದರೇನು?

11:08 PM Aug 07, 2020 | Karthik A |

ಮಣಿಪಾಲ: ಒಂದು ಗುಡ್ಡದಂತಹ ಸಂರಚನೆಯ ಮೇಲೆ ಮಾಡಲಾದ ರನ್‌ವೇ.

Advertisement

ಇದರ ಎರಡೂ ಬದಿ ಇಳಿಜಾರು ಅಥವಾ ಕಂದಕ ರೀತಿ ಇರಬಹುದು. ಇಂತಹ ವಿಮಾನ ನಿಲ್ದಾಣಗಳಲ್ಲಿ ಕಲ್ಲಿಕೋಟೆ ವಿಮಾನ ನಿಲ್ದಾಣ, ಮಂಗಳೂರು ವಿಮಾನ ನಿಲ್ದಾಣ, ಮಿಜೋರಾಂನ ಲೆಂಗ್‌ಪುಯಿ ವಿಮಾನ ನಿಲ್ದಾಣಗಳಿವೆ.

ಪೈಲಟ್‌ ಕೌಶಲ ಅತಿ ಅಗತ್ಯ
ಇಂತಹ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳನ್ನು ಇಳಿಸಲು ಪೈಲಟ್‌ ಕೌಶಲ್ಯ ಅತಿ ಅಗತ್ಯ ತುಸು ಹೆಚ್ಚು ಕಡಿಮೆಯಾದರೂ ಅಪಘಾತ ಕಟ್ಟಿಟ್ಟದ್ದು. ನಿರ್ದಿಷ್ಟ ಪ್ರದೇಶದಲ್ಲೇ ವಿಮಾನದ ಚಕ್ರ ಭೂಮಿಗೆ ತಾಗಬೇಕು. ಇಷ್ಟೇ ದೂರಕ್ಕೆ ಹೋಗಿ ವಿಮಾನ ನಿಂತುಕೊಳ್ಳಬೇಕು ಎಂಬ ಲೆಕ್ಕಾಚಾರ ಪೈಲಟ್‌ಗೆ ಇರಬೇಕಾಗುತ್ತದೆ. ವಿಮಾನ ಕೆಳಕ್ಕಿಳಿಯುತ್ತಿದ್ದಂತೆ, ರನ್‌ವೇ ಉದ್ದವನ್ನು ಮನಸ್ಸಿನಲ್ಲೇ ಅಂದಾಜಿಸಿ ನಿರ್ದಿಷ್ಟ ಸ್ಥಳದಲ್ಲಿ ನೆಲ ತಾಗಬೇಕಾಗುತ್ತದೆ.

ಆದ್ದರಿಂದ ಟೇಬಲ್‌ಟಾಪ್‌ನಂತಹ ವಿಮಾನ ನಿಲ್ದಾಣಗಳಲ್ಲಿ ಎಲ್ಲ ವಿಮಾನಗಳನ್ನು ಇಳಿಯಲು ಅನುಮತಿಸುವುದಿಲ್ಲ. ನಿರ್ದಿಷ್ಟ ಮಾದರಿಯ ವಿಮಾನಗಳಿಗೆ ಮಾತ್ರ ಇಳಿಯಲು ಅವಕಾಶವಿರುತ್ತದೆ. ಪೈಲಟ್‌ ಅವರ ಸ್ವಂತ ಲೆಕ್ಕಾಚಾರ ಮತ್ತು ಕಂಟ್ರೋಲ್‌ ರೂಂನ ಸೂಚನೆಗಳನ್ನು ಆಧರಿಸಿಯೇ ಇಳಿಸಬೇಕಾಗಿರುತ್ತದೆ. ಇದರಿಂದಾಗಿ ಜಗತ್ತಿನಲ್ಲಿ ಇಂತಹ ವಿಮಾನ ನಿಲ್ದಾಣಗಳು ಹೆಚ್ಚು ಅಪಾಯಕಾರಿ ಎಂದು ಪರಿಗಣಿತವಾಗುತ್ತದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next