Advertisement
ಇದೇ ಸಂದರ್ಭದಲ್ಲಿ ತಂತ್ರಜ್ಞಾನ ದೈತ್ಯ ಗೂಗಲ್ ಮತ್ತು ಯೂಟ್ಯೂಬ್, ಲಾಕ್ಡೌನ್ ಸಮಯದಲ್ಲಿ ಭಾರತೀಯರು ಅತೀ ಹೆಚ್ಚು ಸರ್ಜ್ ಮಾಡಿರುವ ಸಂಗತಿ ಯಾವುದು ಎಂಬ ಕೂತೂಹಲಕಾರಿ ವಿಚಾರವನ್ನು ಬಹಿರಂಗ ಮಾಡಿದೆ. ಆ ಮಾಹಿತಿ ಈ ಕೆಳಗಿನಂತಿದೆ.
Related Articles
Advertisement
ದಿನಸಿ ಮತ್ತು ಇತರೆ: ಶೇ. 300ರಷ್ಟು ಜನರು ಗೂಗಲ್ನಲ್ಲಿ ‘ಹತ್ತಿರದ ರೇಷನ್ ಅಂಗಡಿ, ಔಷಧ ಅಂಗಡಿ, ಪ್ರಾಣಿ ವೈದ್ಯರು, ಕಿರಾಣಿ ವಿತರಕರು ಎಂದು ಸರ್ಚ್ ಮಾಡಿದ್ದಾರೆ. ಇದರ ಜೊತೆಗೆ ಹೆಡ್ಸೆಟ್, ಮ್ಯಾಟ್ರೆಸ್ ಯ್ಯೂಟೂಬ್ನಲ್ಲಿ ಸಿಗುವ ಸಿನಿಮಾಗಳ ಬಗ್ಗೆ ಹುಡುಕಾಡಿದ್ದಾರೆ.
ಇನ್ನು ‘ಜಿಮ್ ಎಟ್ ಹೋಮ್, ಲರ್ನ್ ಆನ್ಲೈನ್, ಟೀಚ್ ಆನ್ಲೈನ್ ಎಟ್ ಹೋಮ್ ಬಗ್ಗೆಯೂ ಹುಡುಕಾಡಿದ್ದಾರೆ. ‘ವಿಟಮಿನ್ ಸಿ‘ ಎಂಬ ಪದವನ್ನು ಶೇ. 150ರಷ್ಟು ಜನರು ಹುಡುಕಾಡಿದರೆ. ಶೇ. 60ರಷ್ಟು ಜನರು ‘ಕನ್ಸಲ್ಟ್ ಡಾಕ್ಟರ್ ಆನ್ಲೈನ್‘ ಎಂಬ ಪದವನ್ನು ಹುಡುಕಾಡಿದ್ದಾರೆ. ಇದಲ್ಲದೆ ವರ್ಕ್ ಫ್ರಂಮ್ ಹೋಮ್, ಸಾಫ್ಟ್ವೇರ್, ಫ್ರೀ ವಿಡಿಯೋ ಡೇಟಿಂಗ್ ಎಂದು ಹುಡುಕಾಟ ನಡೆಸಿದ್ದಾರೆ
ಹೌ–ಟು : ಆಸಕ್ತಿಕರ ವಿಚಾರವೆಂದರೇ ಇಂಟರ್ ನೆಟ್ ಬಳಸುವ ಶೇ 180% ಜನರು ಇಲೆಕ್ಟ್ರಿಕ್ ಬಿಲ್ ಪಾವತಿಸುವುದು ಹೇಗೆ ? ಶೇ. 200ರಷ್ಟು ಜನರು ಯುಪಿಐ ಪಿನ್ ಬದಲಿಸುವು ಹೇಗೆ ? ಎಂಬುದನ್ನು ಸರ್ಚ್ ಮಾಡಿದ್ದಾರೆ. ಮಾತ್ರವಲ್ಲದೆ Near me ಸರ್ಚ್ ಗಳು ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ದ್ವಿಗುಣಗೊಂಡಿವೆ. ತೂಕ ಇಳಿಸುವುದು ಹೇಗೆ ? ಕೇಕ್ ತಯಾರಿಸುವುದು ಹೇಗೆ, ಬಿಯರ್ ತಯಾರಿಸುವುದು ಹೇಗೆ ? ಸ್ಯಾನಿಟೈಸರ್ ತಯಾರಿಸುವ ಬಗೆಯನ್ನು ಕೂಡ ಗೂಗಲ್ ನಲ್ಲಿ ಹುಡುಕಾಡಿದ್ದಾರೆ. ಕೆಲವರು ಇನ್ನು ಸ್ವಲ್ಪ ಮುಂದೆ ಹೋಗಿ ವೈರಸ್ ಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗೆ ಹೇಗೆ ಎಂಬುದನ್ನು ಜಾಲಾಡಿದ್ದಾರೆ.
ಝೂಮ್ ಆ್ಯಪ್: ಲಾಕ್ ಡೌನ್ ಸಮಯದಲ್ಲಿ ಝೂಮ್ ಆ್ಯಪ್ ಅತೀ ಹೆಚ್ಚು ಪ್ರಚಾರ ಗಳಿಸಿಕೊಂಡಿತ್ತು. ಒಂದೇ ಸಮಯದಲ್ಲಿ 100 ಮಂದಿ ವಿಡಿಯೋ ಕಾಲ್ ನಲ್ಲಿ ಭಾಗವಹಿಸಬಹುದಾದ್ದರಿಂದ ಹಲವು ಕಂಪೆನಿಗಳು ವರ್ಕ್ ಫ್ರಂ ಹೋಮ್ ಮಾಡುವ ತನ್ನ ನೌಕರರಿಗೆ ಈ ಆ್ಯಪ್ ಮೂಲಕ ಮೀಟಿಂಗ್ ನಡೆಸುತ್ತಿವೆ. ಮಾತ್ರವಲ್ಲದೆ ಶಿಕ್ಷಣ ಸಂಸ್ಥೆಗಳು ಇದರ ಮೂಲಕ ತರಗತಿ ನಡೆಸುತ್ತಿವೆ. ಈ ಸಮಯದಲ್ಲಿ ಗೂಗಲ್ ಮತ್ತು ಯೂಟ್ಯೂಬ್ ನಲ್ಲಿ ಹಲವರು ‘ಹೌ ಟು ಯುಸ್ ಝೂಮ್ ಆ್ಯಪ್’ ಎಂಬುದನ್ನು ಸರ್ಚ್ ಮಾಡಿದ್ದರು.
ಇದಾದ ಕೆಲವೇ ದಿನಗಳಲ್ಲಿ ಈ ಆ‍್ಯಪ್ ನಲ್ಲಿ ಡಾಟಾಗಳು ಸೋರಿಕೆಯಾಗುತ್ತಿವೆ, ಭದ್ರತಾ ಸಮಸ್ಯೆಗಳಿವೆ ಎಂದು ಸರ್ಕಾರವೇ ಎಚ್ಚರಿಕೆ ನೀಡಿದ್ದರಿಂದ ‘ಹೌ ಟು ಡಿಲೀಟ್ ಝೂಮ್ ಆ್ಯಪ್’ ಎಂಬ ಅಂಶಗಳು ಟ್ರೆಂಡಿಂಗ್ ನಲ್ಲಿ ಕಾಣಿಸಿಕೊಂಡವು.
ಆನ್ ಲೈನ್ ಗೇಮ್ಸ್ : ಲೂಡೋ ಆಟವನ್ನು ಆಡದವರುಂಟೇ ? ಲಾಕ್ ಡೌನ್ ನಲ್ಲಿ ಪ್ರಚಲಿತಕ್ಕೆ ಬಂದ ಈ ಆ್ಯಪ್ ಅನ್ನು ಅತೀ ಹೆಚ್ಚು ಜನರು ಹುಡುಕಾಡಿ ಇನ್ ಸ್ಟಾಲ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಚೆಸ್ , ರಮ್ಮಿ ಮುಂತಾದ ಆಟಗಳನ್ನು ಸರ್ಚ್ ಮಾಡಲಾಗಿದೆ.