Advertisement

ಫೇಸ್‌ ಟು ಫೇಸ್‌ ಆದಾಗ ಏನಂತ ಮಾತಾಡಿಸ್ಲಿ?

06:00 AM Jul 24, 2018 | |

ಇಡೀ ದಿನವನ್ನ ಅಂದರೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಮಾತ್ರ- ನಿನ್ನೊಂದಿಗೆ ಕಳೆಯಬೇಕು ಅನ್ನೋದು ನನ್ನಾಸೆ. ಪಾರ್ಕೊಂದರ ಕಲ್ಲು ಬೆಂಚಿನ ಮೇಲೆ, ಮಾಲ್‌ ಹೊರಗಿನ ಸಿಮೆಂಟ್‌ ಕಟ್ಟೆಯ ಮೇಲೆ ನಿನಗೆ ಅಂಟಿಕೊಂಡು ಕುಳಿತು ಮನದ ಮಾತುಗಳನ್ನೆಲ್ಲ ಹೇಳ್ಕೊಬೇಕು ಅಂತ ಆಸೆ ನನಗೆ…

Advertisement

ಡಿಯರ್‌ ಕಿರಣ್‌, 
ನಮ್ಮ ಮುಂದಿನ ಬದುಕಿನ ಬಗ್ಗೆ ನಿನ್‌ ಜೊತೆ ಮಾತಾಡ್ಬೇಕಾಗಿದೆ. ನಾಡಿದ್ದು ಸಿಕ್ಕಾಗ ಖುಲ್ಲಂಖುಲ್ಲಾ ಈ ವಿಷಯವನ್ನು ಡೀಟೇಲ್‌ ಆಗಿಯೇ ಮಾತಾಡೋಣ. ಸ್ವಲ್ಪ ಜಾಸ್ತೀನೇ ಟೈಮ್‌ ಅಡ್ಜಸ್ಟ್‌ ಮಾಡಿಕೊಂಡು ಬಾ. ನಿಂಗೆ ಸೀರಿಯಸ್ನೆಸ್‌ ಬರುತ್ತೆ ಅಂತ ಇಷ್ಟು ದಿನ ಕಾದು ಕಾದು ಸುಸ್ತಾಯ್ತು. ನಿನಗೆ ಈ ಬಗ್ಗೆ ಗ್ಯಾನ ಇದೆ ಅಂತಾನೇ ಅನ್ನಿಸ್ತಾ ಇಲ್ಲ. ನೀನು ಫೋನ್‌ ನಲ್ಲಿ ಬರೀ ಕಾಗೆ ಹಾರಿಸ್ತೀಯ. ಏನ್‌ ಕೇಳಿದ್ರೂ- “ಮಾಡೋಣ ಬಿಡೂ, ಆಗುತ್ತೆ ಬಿಡೂ, ಎಲ್ಲ ಸರಿ ಹೋಗುತ್ತೆ ಬಿಡು… ‘, ಇಂಥ ಮಾತುಗಳನ್ನ ನಾಲ್ಕು ವರ್ಷಗಳಿಂದ ಕೇಳಿ ಕೇಳಿ ಹುಚ್ಚು ಹಿಡಿದಿದೆ. ಮನೆಯಲ್ಲಿ ಮದುವೆಗೆ ತಯಾರಿ ನಡೆಸಿದ್ದಾರೆ ಕಣೋ. ಆಗಲೇ ಹುಡುಗನ ಬೇಟೆ ಶುರುವಾಗಿದೆ.ಅಕಸ್ಮಾತ್‌ ತುಂಬಾ ಚೆನ್ನಾಗಿರೋ ಹುಡುಗ ಬಂದುಬಿಟ್ರೆ… ಒಂದೇ ಒಂದು ಕ್ಷಣದ ಮಟ್ಟಿಗೆ ನೀನು ಮರೆತುಹೋಗಿ ನಾನು ಆ ಹೊಸ ಸಂಬಂಧವನ್ನು ಒಪ್ಪಿಕೊಂಡುಬಿಟ್ರೆ …

 ನನ್ನ ಆತಂಕಗಳೆಲ್ಲಾ ಇಂಥವೇ. ಇದನ್ನೆಲ್ಲ ನಿನ್‌ ಜೊತೆ ಮಾತಾಡ್ಬೇಕು. ಪ್ಲೀಸ್‌, ಯಾರೂ ಇಲ್ಲದ ಜಾಗಕ್ಕೆ ನನ್ನ ಕರೆದುಕೊಂಡು ಹೋಗು. ದರಿದ್ರ ಮೊಬೈಲು ತರಬೇಡ. ಅದೊಂದು ಇದ್ರೆ ನೀನು ಜೊತೆಗಿದ್ದೂ ಇಲ್ಲದಂತೆ. ಮೆಸೇಜ್‌ ಕುಟ್ಟುತ್ತ ಕುಳಿತುಬಿಡ್ತೀಯಾ. ನಿನ್ನ ಸೋಮಾರಿತನವನ್ನ ನಾನು ಪ್ರಶ್ನಿಸಬೇಕು. ನಾನೆಷ್ಟು ಪ್ರೀತಿಸ್ತೀನಿ ಅಂತ ನಿನ್ನಲ್ಲಿ ಹೇಳ್ಕೊಳ್ಬೇಕು. ನನ್ನ ಮಾತುಗಳು ಅರ್ಥವಾದ್ರೂ ಪೆಕರನಂತೆ ಕೂತಿರಿ¤àಯಲ್ಲ; ಆಗ ನಿನ್ನ ತಲೆ ಮೇಲೆ ಮೊಟಕಬೇಕು. ನಿನ್ನ ಜೊತೆ ಸುತ್ತಬೇಕು . ಬೈಕು ಬೋರಾದರೆ ಕಾಲು ನಡಿಗೆ, ನಿನ್ನೊಂದಿಗೆ ಹೆಜ್ಜೆ ಹಾಕುವುದಕ್ಕಿಂತ ದೊಡ್ಡ ಖುಷಿ ಬೇರೆ ಏನಿದೆ ನನಗೆ?ಬೇಕಾದರೆ  ಒಂದೂ ಮಾತಿಲ್ಲದೆ ಸಂಜೆಯವರೆಗೂ ನಿನ್ನ ಕೈ ಹಿಡಿದುಕೊಂಡು ನಡೆಯಬಲ್ಲೆ. ಅಲ್ಲಿ ನಿನ್ನ ಕಳ್ಳ ನೋಟ, ನನ್ನ ಹುಸಿಮುನಿಸು ಎಲ್ಲವೂ ಅದೆಷ್ಟು ಸೂಪರ್‌ ಅಲ್ವಾ? 

ನಾಡಿದ್ದು ನೀನು ಸಿಕ್ಕಾಗ ಹೇಗೆ ಮಾತಾಡಬೇಕು ಅಂತ ಕನ್ನಡಿ ಮುಂದೆ ಈಗಾಗಲೇ ರಿಹರ್ಸಲ್‌ ಮಾಡಿ ಆಗಿದೆ.ಆದ್ರೆ ನೀನು ಎದುರಾದಾಗ ಏನು ಮಾಡ್ಬೇಕು ಅಂತಾನೇ ತಿಳೀತಿಲ್ಲ. ನಮಸ್ಕಾರ ಅನ್ನಲ? ಹೇಗಿದ್ದೀಯ ಅನ್ನಲ? ಹೇಳಿದ ಸಮಯಕ್ಕಿಂತ ಇಪ್ಪತ್ತು ನಿಮಿಷ ಮೊದಲೇ ಬಂದಿದ್ದರೂ, ಏನು ಇಷ್ಟು ಲೇಟು ಅಂದುಬಿಡಲ?ಬನ್ರಿ, ನಿಮ್ಗೆನೆ ಕಾಯ್ತಿದ್ದೆ ಅನ್ನಲ?ಅಥವಾ ಹಳೇ ಕಾಲದ ಹುಡುಗೀರ ಥರಾ ತಲೆತಗ್ಗಿಸಿ ನಿಂತು ಬಿಡಲಾ?ಅಥವಾ… ಹೋಗು, ನಿಜಕ್ಕೂ ಏನ್‌ ಮಾಡ್ಬೇಕು ಅಂತ ಗೊತ್ತಾಗ್ತಿಲ್ಲ ನನಗೆ… 

ನೋಡೂ, ಈಗಾದ್ರೂ ನೀನು ಪ್ರಾಕ್ಟಿಕಲ್‌ ಆಗಿ ಯೋಚನೆ ಮಾಡು. ಹುಡುಗನಿಗೆ ಕೆಲಸ ಇಲ್ಲ ಅಂತಾದ್ರೆ ಯಾವ ಸಂಬಂಧವೂ ಬೆಳೆಯೋದಿಲ್ಲ. ನಾಳೆ ನೀನು ದೊಡ್‌ ಮನುಷ್ಯ ಆಗಬಹುದು. ಭಾಳಾ ದೊಡ್‌ ಸಾಧನೆ ಮಾಡಬಹುದು. ಆದ್ರೆ ಈಗ ಖಾಲಿ ಕೈಲಿ ಕೂತ್ಕೊಬಾರ್ದು. ನನ್ನ ಕೈ ಹಿಡಿಯೋ ಹುಡುಗ ಕೈ ತುಂಬಾ ಸಂಪಾದನೆ ಮಾಡ್ಲಿ ಅಂತಾನೆ ಎಲ್ಲಾ ಹುಡುಗೀರೂ ಆಸೆಪಡ್ತಾರೆ. ಅಂಥವರ ಪೈಕಿ ನಾನೂ ಒಬ್ಬಳು ಅಂತ ನಿನಗೆ ಬಿಡಿಸಿ ಹೇಳಬೇಕಿಲ್ಲ ತಾನೇ?

Advertisement

ದಿಲ್‌ ಸೆ
ಮಾಧವಿ

Advertisement

Udayavani is now on Telegram. Click here to join our channel and stay updated with the latest news.

Next