Advertisement

ಬಿಡದಿ ಅಭಿವೃದ್ಧಿಗೆ ಜೆಡಿಎಸ್‌ ಕೊಡುಗೆ ಏನು?

05:29 PM Aug 13, 2021 | Team Udayavani |

ರಾಮನಗರ: ವ್ಯಾಮೋಹಕ್ಕೆ ಒಳಗಾಗಿ ವೋಟು ಕೊಟ್ಟು5 ವರ್ಷಗಳ ಕಾಲ ನೋವು ಅನುಭವಿಸಿ , ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್‌ ವಿರುದ್ಧ ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಟೀಕಾ ಪ್ರಹಾರ ನಡೆಸಿದರು.

Advertisement

ತಾಲೂಕಿನ ಬಿಡದಿ ಪುರಸಭಾ ವ್ಯಾಪ್ತಿಯ ಛತ್ರ-ಬಾರೆದೊಡ್ಡಿ ವಾರ್ಡ್‌ನಲ್ಲಿ ನಡೆದ ಬಡ ಕುಟುಂಬಗಳಿಗೆ ದಿನಸಿ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯ ನಾಯಕರೊಬ್ಬರು ಸಿಎಂ ಆಗುತ್ತಾರೆ ಎಂಬ ವ್ಯಾಮೋಹಕ್ಕೆ ಒಳಗಾಗಿಆಪಕ್ಷವನ್ನು ಬೆಂಬಲಿಸಿದ್ದೀರಿ,ಆದರೆ, ಬಿಡದಿಯ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಜೆಡಿಎಸ್‌ -ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ 14 ತಿಂಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು. ಬಿಡದಿಗಾಗಿ ಅವರು ನೀಡಿದ ವಿಶೇಷ ಕೊಡುಗೆ ಏನು ಎಂದರು.

ಕೆಲಸ ಮಾಡುವವರಿಗೆ ಬೆಂಬಲ ನೀಡಿ: ಚುನಾವಣೆಗಳ ವೇಳೆ ಮತದಾರರು ಯಾವುದೋ ವ್ಯಾಮೋಹಕ್ಕೆ ಒಳಗಾಗಬಾರದು, ವ್ಯಾಮೋಹಕ್ಕೆ ಒಳಗಾಗಿ ಮತ ನೀಡಿ ನಂತರ ಪಶ್ಚಾತ್ತಾಪ ಪಡುವ ಬದಲಿಗೆ ಕೆಲಸ ಮಾಡುವವರಿಗೆ ಜನರು ಬೆಂಬಲವಾಗಿ ನಿಲ್ಲಬೇಕು ಎಂದರು.

ತಾವು ಶಾಸಕರಾಗಿದ್ದ ಅವಧಿಯಲ್ಲಿ ತಾವಿದ್ದ ಪಕ್ಷ ಅಧಿಕಾರದಲ್ಲಿ ಇರಲಿಲ್ಲ. ನಂತರ ತಾವು ಆಡಳಿತ ಪಕ್ಷದ ಸಹಕಾರದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಮೂಲಕ ಬಿಡದಿಗೆ ಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರಿನ ಯೋಜನೆ ಹಾಗೂ ಯುಜಿಡಿ ಕಾಮಗಾರಿಗೆ ಅನುಮೋದನೆ ದೊರಕಲು ಶ್ರಮಿಸಿದ್ದೇವೆ. ಇದಾದ ನಂತರಯಾವ ಯೋಜನೆಗಳು
ಜಾರಿಯಾಗಿಲ್ಲ ಎಂದರು.

Advertisement

ಕೈಗಾರಿಕಾ ಪ್ರದೇಶವಾಗಿರುವ ಬಿಡದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಹೀಗಾಗಿ ವಿಶೇಷವಾಗಿ ಗಮನ ಹರಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು.ಆ ಕೆಲಸವನ್ನು ಕಾಂಗ್ರೆಸ್‌ ಹೊರತುಪಡಿಸಿ ಮತ್ಯಾವ ಪಕ್ಷದಿಂದಲೂ ಸಾಧ್ಯವಿಲ್ಲ ಎಂದರು.

ಕಿತ್ತಾಟದಲ್ಲೇ ಕಾಲ ಕಳೆಯುತ್ತಿದೆ ಬಿಜೆಪಿ: ಎರಡು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಬಿಜೆಪಿ ಆಡಳಿತದ ದುರಾಡಳಿತ ದಿಂದ ಜನರು‌ ಬೇಸೆತ್ತಿದ್ದಾರೆ. ಬಿಜೆಪಿ ಪಕ್ಷದ ಮುಖಂಡರು, ಅಧಿಕಾರಕ್ಕಾಗಿ ಕಿತ್ತಾಟದಲ್ಲಿ ತೊಡಗಿದ್ದಾರೆ. ಜೆಡಿಎಸ್‌ ಪಕ್ಷಕ್ಕೆ ಸ್ವತಂತ್ರ ವಾಗಿ ಅಧಿಕಾರಕ್ಕೆ ಬರುವ ಶಕ್ತಿ ಇಲ್ಲ. ಕಾಂಗ್ರೆಸ್‌ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಾತಾವರಣ ಸ್ಪಷ್ಟವಾಗಿದೆ. ಜನತೆ ಕಾಂಗ್ರೆಸ್‌ಗೆ ಶಕ್ತಿ ತುಂಬಬೇಕು, ಅಧಿಕಾರಕ್ಕೆ ಬಂದರೆ ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡುವುದಾಗಿ ತಿಳಿಸಿದರು.

ರೋಟಿ, ಕಪಡಾ ಔರ್‌ ಮಕಾನ್‌!: ಕೋವಿಡ್‌ ಸಂಕಷ್ಟದ ವೇಳೆಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಜನರಿಗೆ ಸ್ಪಂದಿಸಿರುವುದಾಗಿ ತಿಳಿಸಿದ ಅವರು,ಕಾಂಗ್ರೆಸ್‌ ನಾಯಕಿಯಾಗಿದ್ದ ಇಂದಿರಾ ಗಾಂಧಿಯವರು ರೋಟಿ, ಕಪಡಾ ಔರ್‌ ಮಕಾನ್‌ ಎಂಬ ಘೋಷ ವಾಕ್ಯಮೊಳಗಿಸಿದ್ದರು.ಕಾಂಗ್ರೆಸ್‌ ಪಕ್ಷ ಈ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದೆ ಎಂದರು.

ಈ ವೇಳೆ ವೃಷಭಾವತಿ ಜಗದೀಶ್‌ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾದರು. ಬಿಡದಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಾಣಕಲ್‌ ನಟರಾಜು, ಪುರ ಸಭೆ ಮಾಜಿ ಸದಸ್ಯರಾದ ಸಿ.ಉಮೇಶ್‌, ಮಹಿಪತಿ, ರಮೇಶ್‌, ಹರೀಶ್‌ (ಬೋರೇಗೌಡ), ಮುಖಂಡರಾದ ರಾಜಣ್ಣ, ನಾಗೇಶ್‌, ಶಶಿ, ಸುರೇಶ್‌, ಜಯರಾಮು, ದೇಶರಾಜ ಅರಸು, ಕೆಂಪರಾಜು, ಮಹಿಳಾ ನಾಯಕಿರಾದ ಬಿಂದಿಯಾ,ಕಾವ್ಯ,ನಾಗಮ್ಮ ಪೊಲೀಸ್‌ ಇಲಾಖೆಯ ಮಂಜುನಾಥ್‌ ಉಪಸ್ಥಿತರಿದ್ದರು.

ಕೋವಿಡ್‌ 3ನೇ ಅಲೆ ಬಗ್ಗೆ ಎಚ್ಚರ ವಹಿಸಿ
ಕೋವಿಡ್‌ ಸೋಂಕು ಸಮಾಜವನ್ನು ಸಂಕಷ್ಟಕ್ಕೆ ದೂಡಿದೆ. ಎರಡನೇ ಅಲೆಯ ಭೀಕರತೆ ನಿಮಗೆ ಗೊತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸವಲತ್ತು ಕೊರತೆ ಇತ್ತು. ಸರ್ಕಾರ ಹೇಗೆ ಸ್ಪಂದಿಸಿತು ಎಂಬುದು ಗೊತ್ತಿದೆ. ಈಗ ಮೂರನೇ ಅಲೆ ಭೀತಿಯೂ ಆವರಿಸುತ್ತಿದ್ದು, ಎಚ್ಚರ ವಹಿಸಿ ಎಂದು ಮಾಜಿ ಶಾಸಕ ಎಚ್‌ ಸಿ.ಬಾಲಕೃಷ್ಣ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next