Advertisement

ನನ್ನ ಬಗ್ಗೆ ನಿನಗೆ ಏನನ್ನಿಸುತ್ತದೆ?

10:37 PM Mar 02, 2020 | mahesh |

ಪ್ರಿಯ ಗೆಳತೀ ,
ಹೊಸವರ್ಷದ ಹೊಸದಿನಗಳಲಿ ಹುಟ್ಟುಹಬ್ಬದ ಸಂಭ್ರಮದೊಂದಿಗೆ ನಿರೀಕ್ಷೆಗಳ ಮೂಟೆ ಹೊತ್ತು , ಕನಸುಗಳ ಬೆನ್ನು ಹತ್ತಿ ಹೊರಟವಳಿಗೆ ನನ್ನ ಹಾರೈಕೆಗಳು ಜೊತೆಗಿರಲಿ .

Advertisement

ಹಾ .ಹಾ .. “ನನಗೆ ಕನಸುಗಳೇ ಇಲ್ಲ’ವೆಂದುಕೊಳ್ಳಬೇಡ ಹುಡುಗಿ! ಒಂದೊಮ್ಮೆ ಕನಸುಗಳ ಮಹಲು ಹತ್ತಿದರೆ ಎಲ್ಲಿ ಬಿದ್ದುಬಿಡುತ್ತೀವೋ ಎಂದು ಭಯಪಟ್ಟರೆ , ಮೇಲೆ ನಿಂತು ಚಂದಿರನನ್ನು ನೋಡುವ ಸೌಭಾಗ್ಯ ತಪ್ಪಿಹೋದಿತಲ್ಲ !? ಅದಕ್ಕೇ ಮೇಲಕ್ಕೆ ನನಗೆ ಕನಸುಗಳೇ ಇಲ್ಲವೆಂದು ಅನಿಸಿದರೂ, ಸುಪ್ತವಾಗಿ ಅದೆಲ್ಲೋ ಕನಸಿನ ಗಂಟು ಇರಬಹುದು ಎಂದುಕೊಳ್ಳುತ್ತೇನೆ. ಹಾಗೊಂದು ಭ್ರಮೆ ಇದೆ..! ಹಾಂ! ಭ್ರಮೆ ಎನ್ನುವಾಗ ನೆನಪಾಯಿತು ನೋಡು, ಪ್ರತಿ ಕ್ಷಣ ,ಪ್ರತಿ ದಿನ ,ಪ್ರತಿ ವಸ್ತು, ಪ್ರಕೃತಿಯನ್ನು ವಿಸ್ಮಯದಿಂದ ನೋಡುತ್ತೇನೆ!ಆ ವಿಸ್ಮಯ ಎಲ್ಲಿತನಕ ಅಂದ್ರೆ, ಛೇ! ಇದೆಲ್ಲ ಆ ಭ್ರಮೆ ಅನ್ನಿಸುವವರೆಗೆ. ಈ ಪ್ರಕೃತಿ, ಈ ಹಸಿರು ಒಂದು ಭ್ರಮೆ. ಈ ಪ್ರಾಣ ,ಈ ಉಸಿರು ಕೂಡ .ಈ ಉಲ್ಲಾಸ ,ಈ ಚೈತನ್ಯ ಎಂಬುದು ಎಲ್ಲ ಭ್ರಮೆ ಈ ಭಾವನೆ , ಕನಸುಗಳೂ ಕೂಡ. ಆದರೆ, ನನ್ನೊಳಗಿನ ನಿರಾಶಾವಾದವನ್ನು ಹೊಡೆದೋಡಿಸಿ ಆಶಾವಾದವನ್ನು ತುಂಬಿಕೊಳ್ಳಬೇಕು ಎಂದು ಪ್ರಯತ್ನಿಸುತ್ತೇನೆ.

ನನ್ನ ಮನಸ್ಸು ಈಗ ಮೇಲಿನ ಆಕಾಶ , ಸುತ್ತಲಿನ ಮರ ಹೂವುಗಳನ್ನು ಪ್ರತಿಬಿಂಬಿಸುವ ತಿಳಿಕೊಳದ ಹಾಗಿದೆ . ಯಾವುದಾದರೂ ಪುಟ್ಟ “ಕಲ್ಲೂ’ ಬಿದ್ದು, ಬಿಂಬವೆಲ್ಲ ಮೇಲೆ ಕೆಳಗೆ ,ಹತ್ತಿರ ದೂರ ಆಗುವ ಮುನ್ನ ಬದುಕು ನಿಂತುಬಿಟ್ಟರೆ..! ಆದರೆ……ಚಿಂತೆ ಎಂಬ ಪರಿಚಯವೇ ಇಲ್ಲದೆ ಖುಷಿಯಲ್ಲಿ ಕಳೆದ ದಿನಗಳು , ಆ ನೆನಪಿನಂಗಳದ ಹಾಸುಗಲ್ಲುಗಳ ಮೇಲೆ ಕುಳಿತಾಗ ಕೆಲವೊಮ್ಮೆ ಬದುಕು ಅರ್ಥವುಳ್ಳದ್ದಾಗಿ ಕಾಣುತ್ತದೆ. “ಏನಿದು ವಿರೋಧಾಭಾಸ !’ ಅನ್ನಿಸ್ತಿದೆಯಾ?ಪಾಸಿಟಿವಿಟಿ ಅಂಡ್‌ ನೆಗೆಟಿವಿಟಿ! ಅಮ್ಮ ಈಗ ತುಂಬಾ ಬ್ಯುಸಿಯಾಗಿಬಿಟ್ಟಿರಬಹುದಲ್ಲ ? ಅಕ್ಕ, ಕುಚ್‌ ಹೋಶ್‌ ನಹೀ ರಹತಾ, ಕುಚ್‌ ಧ್ಯಾನ್‌ ನಹೀ ರಹತಾ, ಶಾದಿ ಕೆ ಸಪೋಮೇ. ಅನ್ನುವ ಸ್ಥಿತಿಯಲ್ಲಿದ್ದರೋ? ಅಥವಾ ಈ ಹುಚ್ಚು ಹುಡುಗಿಯ ನೆನಪುಗಳನ್ನು ಸ್ವೀಕರಿಸುವಷ್ಟಿದ್ದಾರೋ ? ನಿನ್ನ ತುಂಟ ತಮ್ಮನಿಗೆ ಈ ಅಕ್ಕನ ನೆನಪು ತಿಳಿಸು.

ಏಯ…! ಈಗ ನಿಜ ಹೇಳು, ನನ್ನ ಬಗ್ಗೆ ನಿನಗೇನಸ್ತಿದೆ ?
ಹಾಂ! ಒಂದ್ನಿಮಿಷ ..ನಾನೇ ಹೇಳ್ಳೋಕೆ ಟ್ರೈ ಮಾಡ್ತೀನೀರು..
ಒಳ್ಳೇ ಹುಚ್ಚಿಯ ಸ್ನೇಹ ಆಯ್ತಪ್ಪ….!

ನಿನ್ನ,

Advertisement

ಅರುಣ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next