ಹೊಸದಿಲ್ಲಿ: ಹಣದ ವಹಿವಾಟಿಗಾಗಿ ಬ್ಯಾಂಕ್ ಖಾತೆ ಕಡ್ಡಾಯವಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆ ಆರಂಭಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಜನರು ಖಾತೆ ಆರಂಭಿಸಲು ಒಂದು ನಿರ್ದಿಷ್ಟ ಬ್ಯಾಂಕನ್ನು ಯಾಕೆ ಆಯ್ಕೆ ಮಾಡುತ್ತಾರೆ ಎಂಬ ಬಗ್ಗೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸಾಮಾಜಿಕ ಜಾಲತಾಣ ಕೂ ವೇದಿಕೆಯಲ್ಲಿ ಒಂದು ಪೋಲ್ ಆರಂಭಿಸಿತ್ತು.
ಇದಕ್ಕೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದು, ಹೆಚ್ಚು ಜನರು ಬ್ಯಾಂಕ್ ಖಾತೆ ತೆರೆಯುವುದು ಆ ಬ್ಯಾಂಕ್ ಮೇಲಿನ ನಂಬಿಕೆಯನ್ನು ಆಧರಿಸಿರುತ್ತದೆ ಎಂಬ ಉತ್ತರವನ್ನು ನೀಡಿದ್ದಾರೆ.
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಪೋಲ್ ನಲ್ಲಿ ಹೊಸ ಬ್ಯಾಂಕ್ ಖಾತೆಯನ್ನು ತೆರೆಯುವಾಗ ನೀವು ಯಾವ ಅಂಶದ ಮೇಲೆ ಹೆಚ್ಚು ಗಮನ ಹರಿಸುತ್ತೀರಿ? ಎಂಬ ಪ್ರಶ್ನೆಯೊಂದಿಗೆ Customer service quality, accessibility, affordability, Trust ಎಂಬ ನಾಲ್ಕು ಆಯ್ಕೆಯನ್ನು ನೀಡಿತ್ತು.
ಇದನ್ನೂ ಓದಿ:ಗುಮಾಸ್ತನ ಮನೆಯಲ್ಲಿ ಕಂತೆ ಕಂತೆ ಹಣ: ಅಧಿಕಾರಿಗಳ ದಾಳಿ ವೇಳೆ ಫಿನಾಯಿಲ್ ಕುಡಿದ ಸರ್ಕಾರಿ ನೌಕರ
ಇದರಲ್ಲಿ ನಂಬಿಕೆ (Trust) ಎನ್ನುವ ಆಯ್ಕೆಗೆ ಶೇ 53ರಷ್ಟು ಮಂದಿ ಮತ ನೀಡಿದ್ದಾರೆ. ಈ ಮೂಲಕ ಜನರು ಸೇವೆಗಿಂತ ಮುಖ್ಯವಾಗಿ ನಂಬಿಕೆ ಹೆಚ್ಚು ಒತ್ತು ನೀಡುತ್ತಾರೆಂಬ ಅಂಶ ಬಹಿರಂಗಪಡಿಸಿದೆ. ತದನಂತರ ಸೇವಾ ಗುಣಮಟ್ಟಕ್ಕೆ ಶೇ 31ರಷ್ಟು ಮಂದಿ ವೋಟು ಒತ್ತಿದ್ದು, ಅದು ಎರಡನೇ ಸ್ಥಾನದಲ್ಲಿದೆ. ನಂಬಿಕೆಯ ನಂತರ ಗುಣಮಟ್ಟಕ್ಕೆ ಪ್ರಾಧಾನ್ಯತೆ ನೀಡಿದ್ದಾರೆ.