Advertisement

ಲೂಟಿಕೋರರ ಜತೆ ಎಂಥಾ ಚರ್ಚೆ ನಡೆಸೋದು? 

08:15 AM Mar 07, 2018 | |

ಮೈಸೂರು: ಇಡೀ ರಾಜ್ಯವನ್ನು ಲೂಟಿ ಮಾಡಿ, ಭ್ರಷ್ಟಾಚಾರ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಎಂಥಾ ಬಹಿರಂಗ ಚರ್ಚೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿ, ರಾಜ್ಯವನ್ನು ಲೂಟಿ ಮಾಡಿದವರ ಜತೆ ಏನು ಬಹಿರಂಗ ಚರ್ಚೆ ಮಾಡಲಿ?. ಸಿಎಂ ಜತೆ ಬಹಿರಂಗ ಚರ್ಚೆಗೆ ಬರುವುದಿಲ್ಲ ಎಂದು ಬಿಜೆಪಿಯವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ ಸಿಎಂ ಹೇಳಿಕೆಗೆ ತಿರುಗೇಟು ನೀಡಿದರು. “ನಿನ್ನ ಸಮಯ ಮುಗಿದಿದ್ದು, ನಿನ್ನ ಪಾಪದ ಕೊಡ ತುಂಬಿದೆ. ಜನರೇ ಇವನಿಗೆ ಬುದಿಟಛಿ ಕಲಿಸುತ್ತಾರೆ’ ಎಂದು ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ಧಾಳಿ ನಡೆಸಿದರು.

Advertisement

ಸಿದ್ದರಾಮಯ್ಯ ಅವರ ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆಯಲ್ಲಿ ಸಾಬೀತು ಮಾಡೋದು ಇನ್ನೇನಿದೆ. ಅವರ ಬಗ್ಗೆ ಈಗಾಗಲೇ ಚಾರ್ಜ್‌ ಶೀಟ್‌ ಬಿಡುಗಡೆ ಮಾಡಲಾಗಿದೆ. ಇನ್ನೂ ಒಂದು ಚಾರ್ಜ್‌ಶೀಟ್‌ ಪ್ರಿಂಟ್‌ ಮಾಡಿ ಬಿಡುಗಡೆ ಮಾಡಲಿದ್ದು, ನಿಮ್ಮಂತಹ ಭ್ರಷ್ಟರ ಬಗ್ಗೆ ಸಾಬೀತು ಮಾಡೋದು ಏನಿದೆ? ಎಂದು ಪ್ರಶ್ನಿಸಿದರು.  ಸಿದ್ದರಾಮಯ್ಯ ಇನ್ನು 60 ದಿನ ಮಾತ್ರ ಮಾತನಾಡಲಿದ್ದು, ಬಳಿಕ ಮಾತನಾಡುವುದಕ್ಕೆ ಅವರಿಗೆ ಅಧಿಕಾರವೇ ಇರುವುದಿಲ್ಲ ಎಂದರು. 

ತಾಕತ್ತಿದ್ದರೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದು ಬರಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಬಹಿರಂಗ ಸವಾಲು ಹಾಕಿದ್ದಾರೆ. ರಾಹುಲ್‌ ಗಾಂಧಿ ಹೋದ ಕಡೆಯಲ್ಲೆಲ್ಲಾ ಬಿಜೆಪಿ ಗೆದ್ದಿದೆ. ಹೀಗಾಗಿ, ರಾಹುಲ್‌ ಗಾಂಧಿಯನ್ನು ದಯವಿಟ್ಟು ಮೈಸೂರಿಗೂ ಕರೆದುಕೊಂಡು ಬನ್ನಿ.
ನೀವೂ ಕೂಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ. ತಾಕತ್ತಿದ್ದರೆ ಅಲ್ಲಿಂದ ಗೆದ್ದು ಬನ್ನಿ ಎಂದು ಸವಾಲು ಹಾಕಿದರು.

ರಾಜಕಾರಣದಲ್ಲಿ ಬೆಳೆಸಿದ ದೇವೆಗೌಡರಿಗೇ ಮೋಸ ಮಾಡಿರುವ ಸಿದ್ದರಾಮಯ್ಯ ಅವರಿಗೆ ಸೋಲಿನ ರುಚಿ ತೋರಿಸುತ್ತೇವೆ. ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಹಾಕುತ್ತೇವೆ. ಮುಂದಿನ ದಿನಗಳಲ್ಲಿ ಈ ಮೋಸದಾಟಕ್ಕೆ ಜನತೆ ತಕ್ಕ ಉತ್ತರ ನೀಡುತ್ತಾರೆ. 
● ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.

ಈ ಹಿಂದೆ, ಖೇಣಿ ಜೈಲಿಗೆ ಹೋಗಬೇಕೆಂದು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದರು. ಈಗ, ಅವರನ್ನೇ ಕಾಂಗ್ರೆಸ್ಸಿಗೆ
ಆಹ್ವಾನಿಸಿದ್ದಾರೆ. ಇದು ಐತಿಹಾಸಿಕ ಪಕ್ಷವೆಂಬ ಹಣೆಪಟ್ಟಿ ಹಾಕಿಕೊಂಡಿರುವ ಕಾಂಗ್ರೆಸ್ಸಿನ “ಭ್ರಷ್ಟಗುಣ’ವನ್ನು ಸಾಬೀತುಪಡಿಸಿದೆ.

● ಪ್ರಕಾಶ್‌ ಜಾವಡೇಕರ್‌, ಬಿಜೆಪಿ ರಾಜ್ಯ ಉಸ್ತುವಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next