Advertisement

ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಭಾರತ ಸಾಧಿಸಿದ್ದೇನು?ಎಥೆನಾಲ್‌ ಮಿಶ್ರಣ ಪೆಟ್ರೋಲ್‌ ಎಂದರೇನು

04:20 PM Jun 07, 2022 | Team Udayavani |
ಈ ಹಿಂದಿನ ವಿಶ್ವ ಪರಿಸರ ದಿನದ ಭಾಷಣದಲ್ಲಿ ಎಥೆನಾಲ್‌ ಮಿಶ್ರಣದ ಬಗ್ಗೆ ಘೋಷಣೆ ಮಾಡಿದ್ದ ಮೋದಿ ಅವರು, 2014ರ ವರೆಗೆ ಭಾರತದಲ್ಲಿ ಸರಾಸರಿ ಶೇ.1.5ರಷ್ಟು ಎಥೆನಾಲ್‌ ಅನ್ನು ಮಾತ್ರ ಪೆಟ್ರೋಲ್‌ ನೊಂದಿಗೆ ಮಿಶ್ರಣ ಮಾಡಲಾಗುತ್ತಿತ್ತು. ಈಗ ಈ ಪ್ರಮಾಣವು ಸುಮಾರು ಶೇ.8.5ರಷ್ಟು ತಲುಪಿದೆ ಎಂದಿದ್ದರು. ಆದ್ದರಿಂದ 2013-14 ರಲ್ಲಿ ದೇಶದಲ್ಲಿ ಸುಮಾರು 38 ಕೋಟಿ ಲೀಟರ್‌ ಎಥೆನಾಲ್‌ ಅನ್ನು ಸ್ಥಳೀಯರಿಂದಲೇ ಖರೀದಿಸಲಾಗಿತ್ತು, ಆದರೆ ಈ ಸಂಖ್ಯೆ ಈಗ 320 ಕೋಟಿ ಲೀಟರ್‌ಗಿಂತ ಹೆಚ್ಚಾಗಿದೆ ಎಂದಿದ್ದಾರೆ. ಅಲ್ಲದೆ ಸಕ್ಕರೆ ಉತ್ಪಾದನೆ ಹೆಚ್ಚಿರುವ 4ರಿಂದ 5 ರಾಜ್ಯಗಳಲ್ಲಿ ಹೆಚ್ಚಿನ ಎಥೆನಾಲ್‌ ಘಟಕಗಳು ಕೇಂದ್ರೀಕೃತವಾಗಿವೆ ಎಂದು ಉಲ್ಲೇಖಿಸಿದ್ದ ಪ್ರಧಾನಿಗಳು, ಕೃಷಿ ತ್ಯಾಜ್ಯದಿಂದ ಎಥೆನಾಲ್‌ ತಯಾರಿಸಲು ಆಧುನಿಕ ತಂತ್ರಜ್ಞಾನ ಆಧಾರಿತ ಸ್ಥಾವರಗಳೊಂದಿಗೆ ಆಹಾರ ಧಾನ್ಯ ಆಧಾರಿತ ಡಿಸ್ಟಿಲರಿಗಳನ್ನು ಭಾರತದಾದ್ಯಂತ...
Now pay only for what you want!
This is Premium Content
Click to unlock
Pay with

ವಿಶ್ವ ಪರಿಸರ ದಿನಾಚರಣೆ ದಿನದಂದು ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಥೆನಾಲ್‌ ಮತ್ತು ಪೆಟ್ರೋಲ್‌ ಮಿಶ್ರಣದ ಬಗ್ಗೆ ಮಾತನಾಡಿದ್ದಾರೆ. ಭಾರತ ಇರಿಸಿಕೊಂಡಿದ್ದ ಗುರಿಯನ್ನು ಐದು ತಿಂಗಳು ಮುನ್ನವೇ ಮುಟ್ಟಿದೆ ಎಂದು ಹೇಳಿ, ಪರಿಸರ ಸಂರಕ್ಷಣೆಗೆ ಭಾರತ ನೀಡುತ್ತಿರುವ ಕೊಡುಗೆ ಬಗ್ಗೆ ಉಲ್ಲೇಖಿಸಿದ್ದಾರೆ. ಹಾಗಾದರೆ ಈ ಎಥೆನಾಲ್‌ ಮಿಶ್ರಣ ಪೆಟ್ರೋಲ್‌ ಅಂದರೇನು? ಇದರಿಂದ ಆಗುವ ಲಾಭವೇನು? ಪರಿಸರಕ್ಕೂ ನಿಜಕ್ಕೂ ಲಾಭವಾಗಲಿದೆಯೇ ಈ ಕುರಿತಾದ ಒಂದು ಸಮಗ್ರ ನೋಟ ಇಲ್ಲಿದೆ.

Advertisement

ಎಥೆನಾಲ್‌ ಮಿಶ್ರಣ ಪೆಟ್ರೋಲ್‌ ಎಂದರೇನು?
ಮೊದಲೇ ಹೇಳಿದ ಹಾಗೆ ಎಥೆನಾಲ್‌ ಒಂದು ಜೈವಿಕ ಇಂಧನವಾಗಿದೆ. ಅಂದರೆ ಸಾವಯವ ವಸ್ತುಗಳನ್ನು ಸಂಸ್ಕರಿಸುವ ಮೂಲಕ ಉತ್ಪಾದಿಸುವ ಇಂಧನವಾಗಿದೆ. ನಾವು ಸಾಮಾನ್ಯವಾಗಿ ಬಳಸುವ ಆಟೋ ಇಂಧನಗಳು ಮುಖ್ಯವಾಗಿ ಪಳೆಯುಳಿಕೆಯ ನಿಧಾನಗತಿಯ ಭೌಗೋಳಿಕ ಪ್ರಕ್ರಿಯೆಯಿಂದ ಉತ್ಪತ್ತಿಯಾಗುತ್ತವೆ. ಅದಕ್ಕಾಗಿಯೇ ಅವುಗಳನ್ನು ಪಳೆಯುಳಿಕೆ ಇಂಧನಗಳು ಎಂದೂ ಕರೆಯಲಾಗುತ್ತದೆ. ಭಾರತದಲ್ಲಿ ಎಥೆನಾಲ್‌ ಅನ್ನು ಪ್ರಾಥಮಿಕವಾಗಿ ಹುದುಗುವಿಕೆ ಪ್ರಕ್ರಿಯೆಯ ಮೂಲಕ ಕಬ್ಬಿನಿಂದ ಪಡೆಯಲಾಗುತ್ತದೆ. ಎಥೆನಾಲ್‌ನಲ್ಲಿ ಆಮ್ಲಜನಕದ ಅಂಶವು ಅಧಿಕವಾಗಿದ್ದು, ವಾಹನಗಳ ಎಂಜಿನ್‌ಗೆ ಸಂಪೂರ್ಣವಾಗಿ ಇಂಧನವನ್ನು ಸಂಯೋಜಿಸಲು ಅನುವು ಮಾಡಿಕೊಡುತ್ತದೆ. ಇದನ್ನು ವಿವಿಧ ಪ್ರಮಾಣದಲ್ಲಿ ಇಂಧನದೊಂದಿಗೆ ಬೆರೆಸಬಹುದು ಮತ್ತು ವಾಹನ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಸಸ್ಯ ಆಧಾರಿತವಾಗಿರುವುದರಿಂದ, ಇದನ್ನು ನವೀಕರಿಸಬಹುದಾದ ಇಂಧನವೆಂದು ಪರಿಗಣಿಸಲಾಗುತ್ತದೆ.

ಇದರಿಂದ ಆಗುವ ಉಪಯೋಗಗಳೇನು?
2025ರ ವೇಳೆಗೆ ಭಾರತದಲ್ಲಿ ಪೆಟ್ರೋಲ್‌ ನೊಂದಿಗೆ ಶೇ.20ರಷ್ಟು ಎಥೆನಾಲ್‌ ಮಿಶ್ರಣ ಮಾಡುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಾಕಿಕೊಂಡಿದ್ದಾರೆ. ಅಲ್ಲದೆ, ಇದು 21ನೇ ಶತಮಾನದ ಭಾರತದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.

ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್‌ ಅನ್ನು ಬೆರೆಸುವುದು ಭಾರತಕ್ಕೆ ಅನೇಕ ಉಪಯೋಗಗಳನ್ನು ಮಾಡಿಕೊಡುತ್ತದೆ. ಮೊದಲನೆಯದಾಗಿ, ಇದು ವಾಹನ ಇಂಧನ ಆಮದು ಬಿಲ್‌ ಅನ್ನು ವಾರ್ಷಿಕ 4 ಬಿಲಿಯನ್‌ ಡಾಲರ್‌ ಅಥವಾ 30,000 ಕೋಟಿ ರೂ.ಗಳಷ್ಟು ಕಡಿಮೆ ಮಾಡಬಹುದು. ಎರಡನೆಯದಾಗಿ, ರೈತರು ಎಥೆನಾಲ್‌ ಉತ್ಪಾದನೆಗೆ ಸಹಾಯ ಮಾಡುವ ಉತ್ಪನ್ನಗಳನ್ನು ಬೆಳೆದರೆ ಹೆಚ್ಚುವರಿ ಆದಾಯವನ್ನು ಗಳಿಸಲು ಅವಕಾಶ ನೀಡುತ್ತದೆ. ಮೂರನೆಯದು, ಎಥೆನಾಲ್‌ ಇತರ ಇಂಧನಗಳಿಗಿಂತ ಕಡಿಮೆ ಮಾಲಿನ್ಯಕಾರಕವಾಗಿದೆ. ನೀತಿ ಆಯೋಗದ ಪ್ರಕಾರ, ಪೆಟ್ರೋಲ್‌ಗಿಂತ ಕಡಿಮೆ ವೆಚ್ಚದಲ್ಲಿ ಅಷ್ಟೇ ಇಂಧನ ದಕ್ಷತೆಯನ್ನು ನೀಡುತ್ತದೆ. ಎಥೆನಾಲ್‌ ಅನ್ನು ಅಳವಡಿಸಿಕೊಳ್ಳಲು ಭಾರತಕ್ಕೆ ಇರುವ ಅವಕಾಶದ ಬಗ್ಗೆ ವಿವರಣೆ ನೀಡಿರುವ ನೀತಿ ಆಯೋಗ, ದೊಡ್ಡ ಕೃಷಿಯೋಗ್ಯ ಭೂಮಿಯ ಲಭ್ಯತೆ, ಆಹಾರ ಧಾನ್ಯಗಳು ಮತ್ತು ಕಬ್ಬಿನ ಉತ್ಪಾದನೆ ಹೆಚ್ಚಳ, ಸಸ್ಯ ಆಧಾರಿತ ಮೂಲಗಳಿಂದ ಎಥೆನಾಲ್‌ ಅನ್ನು ಉತ್ಪಾದಿಸಲು ತಂತ್ರಜ್ಞಾನದ ಲಭ್ಯತೆ ಮತ್ತು ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ಗೆ ಅನುಗುಣವಾಗಿ ವಾಹನಗಳನ್ನು ತಯಾರಿಸುವ ಕಾರ್ಯಸಾಧ್ಯತೆಯು ಸರಕಾರದ ಪ್ರಮುಖ ಕಾರ್ಯತಂತ್ರವನ್ನಾಗಿ ಮಾಡುತ್ತದೆ ಎಂದಿದೆ.

ನಿಗದಿತ ಗುರಿ ತಲುಪಲು ಏನು ಮಾಡಬೇಕು?
ಈ ಹಿಂದಿನ ವಿಶ್ವ ಪರಿಸರ ದಿನದ ಭಾಷಣದಲ್ಲಿ ಎಥೆನಾಲ್‌ ಮಿಶ್ರಣದ ಬಗ್ಗೆ ಘೋಷಣೆ ಮಾಡಿದ್ದ ಮೋದಿ ಅವರು, 2014ರ ವರೆಗೆ ಭಾರತದಲ್ಲಿ ಸರಾಸರಿ ಶೇ.1.5ರಷ್ಟು ಎಥೆನಾಲ್‌ ಅನ್ನು ಮಾತ್ರ ಪೆಟ್ರೋಲ್‌ ನೊಂದಿಗೆ ಮಿಶ್ರಣ ಮಾಡಲಾಗುತ್ತಿತ್ತು. ಈಗ ಈ ಪ್ರಮಾಣವು ಸುಮಾರು ಶೇ.8.5ರಷ್ಟು ತಲುಪಿದೆ ಎಂದಿದ್ದರು. ಆದ್ದರಿಂದ 2013-14 ರಲ್ಲಿ ದೇಶದಲ್ಲಿ ಸುಮಾರು 38 ಕೋಟಿ ಲೀಟರ್‌ ಎಥೆನಾಲ್‌ ಅನ್ನು ಸ್ಥಳೀಯರಿಂದಲೇ ಖರೀದಿಸಲಾಗಿತ್ತು, ಆದರೆ ಈ ಸಂಖ್ಯೆ ಈಗ 320 ಕೋಟಿ ಲೀಟರ್‌ಗಿಂತ ಹೆಚ್ಚಾಗಿದೆ ಎಂದಿದ್ದಾರೆ. ಅಲ್ಲದೆ ಸಕ್ಕರೆ ಉತ್ಪಾದನೆ ಹೆಚ್ಚಿರುವ 4ರಿಂದ 5 ರಾಜ್ಯಗಳಲ್ಲಿ ಹೆಚ್ಚಿನ ಎಥೆನಾಲ್‌ ಘಟಕಗಳು ಕೇಂದ್ರೀಕೃತವಾಗಿವೆ ಎಂದು ಉಲ್ಲೇಖಿಸಿದ್ದ ಪ್ರಧಾನಿಗಳು, ಕೃಷಿ ತ್ಯಾಜ್ಯದಿಂದ ಎಥೆನಾಲ್‌ ತಯಾರಿಸಲು ಆಧುನಿಕ ತಂತ್ರಜ್ಞಾನ ಆಧಾರಿತ ಸ್ಥಾವರಗಳೊಂದಿಗೆ ಆಹಾರ ಧಾನ್ಯ ಆಧಾರಿತ ಡಿಸ್ಟಿಲರಿಗಳನ್ನು ಭಾರತದಾದ್ಯಂತ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದ್ದರು.

Advertisement

ಎಥೆನಾಲ್‌ ಎಂದರೇನು?
ಇದು ಜೈವಿಕ ಸಂಯುಕ್ತ ಇಥೈಲ್‌ ಆಲ್ಕೋಹಾಲ್‌ ಆಗಿದ್ದು, ಇದು ಬಯೋಮಾಸ್‌ ನಿಂದ ಉತ್ಪತ್ತಿಯಾಗುತ್ತದೆ. ಆಲ್ಕೋಹಾಲ್‌ ಪಾನೀಯಗಳಲ್ಲಿಯೂ ಒಂದು ಘಟಕಾಂಶವಾಗಿದೆ. ಇದು ಗ್ಯಾಸೋಲಿನ್‌ಗಿಂತ ಹೆಚ್ಚಿನ ಆಕ್ಟೇನ್‌ ಸಂಖ್ಯೆಯನ್ನು ಹೊಂದಿದ್ದು, ಪೆಟ್ರೋಲ್‌ನಲ್ಲಿನ ಆಕ್ಟೇನ್‌ ಸಂಖ್ಯೆಯನ್ನು ಸುಧಾರಿಸುತ್ತದೆ.

ಎಂಜಿನ್‌ ಬದಲಾವಣೆ ಮಾಡಬೇಕೇ?
ನೀತಿ ಆಯೋಗದ ಪ್ರಕಾರ, ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನು ಶೇ.5ರಷ್ಟು ಎಥೆನಾಲ್‌ ಮಿಶ್ರಣ ಪೆಟ್ರೋಲ್‌ನೊಂದಿಗೆ ಬಳಕೆ ಮಾಡುವ ತಕ್ಕನಾಗಿ ತಯಾರಿಸಲಾಗಿದೆ. ಜತೆಗೆ ರಬ್ಬರ್‌ ಮತ್ತು ಪ್ಲಾಸ್ಟಿಕ್‌ ವಸ್ತುಗಳು ಶೇ.10ರಷ್ಟು ಎಥೆನಾಲ್‌ ಮಿಶ್ರಣದೊಂದಿಗೆ ಕೆಲಸ ಮಾಡುವ ಸಾಮರ್ಥ್ಯ ಹೊಂದಿವೆ. ಆದರೆ ಪೆಟ್ರೋ ಲ್‌ನಲ್ಲಿ ಶೇ.20ರಷ್ಟು ಎಥೆನಾಲ್‌ ಮಿಶ್ರಣ ಮಾಡುವುದಾದರೆ, ವಾಹನ ಗಳಲ್ಲಿನ ರಬ್ಬರ್‌ ಮತ್ತು ಪ್ಲಾಸ್ಟಿಕ್‌ ವಸ್ತುಗಳು ಹಾಗೂ ಎಂಜಿನ್‌ ಗಳನ್ನು ಬದಲಾವಣೆ ಮಾಡಬೇಕಾಗುತ್ತದೆ. ಅಲ್ಲದೆ, ಆಟೋಮೊಬೈಲ್‌ ಇಂಡಸ್ಟ್ರಿ ಪ್ರಕಾರ, ಒಮ್ಮೆ ಸರಕಾರ ಇ20 ರೊಂದಿಗೆ ವಾಹನಗಳನ್ನು ಓಡಿಸುವ ಬಗ್ಗೆ ನಿರ್ಣಯ ಮಾಡಿದರೆ, ನಾವೂ ಕೂಡ ಅದಕ್ಕೆ ತಕ್ಕಂತೆ ವಾಹನಗಳನ್ನು ಸುಧಾರಿಸಿಕೊಳ್ಳಬಹುದು.

ಬೇರೆ ಯಾವ ದೇಶಗಳಲ್ಲಿ ಈ ಸೌಲಭ್ಯವಿದೆ?
2019ರ ವೇಳೆಗೆ ಇಡೀ ಜಗತ್ತಿನಲ್ಲಿ 119 ಬಿಲಿಯನ್‌ ಲೀಟರ್‌ ಎಥೆನಾಲ್‌ ಅನ್ನು ಉತ್ಪಾದಿಸಲಾಗಿತ್ತು. ಅಂದರೆ ಕಳೆದ ದಶಕದಲ್ಲಿ ಪ್ರತೀ ವರ್ಷಶೇ.4ರಷ್ಟು ಬೆಳವಣಿಗೆ ಸಾಧಿಸಿದಂತಾಗಿದೆ. ಅದರಲ್ಲಿ ಅಮೆರಿಕ ಮತ್ತು ಬ್ರೆಜಿಲ್‌ ದೇಶಗಳೇ ಒಟ್ಟಾರೆ ಎಥೆನಾಲ್‌ ಉತ್ಪಾದನೆಯಲ್ಲಿ ಶೇ.84ರಷ್ಟು ಪಾಲು ಹೊಂದಿವೆ. ಉಳಿದ ಶೇ.16ರಷ್ಟು ಪಾಲನ್ನು ಭಾರತ, ಚೀನ, ಐರೋಪ್ಯ ಒಕ್ಕೂಟ, ಕೆನಡಾ, ಥೈಲ್ಯಾಂಡ್‌ ಹೊಂದಿವೆ.

Advertisement

Udayavani is now on Telegram. Click here to join our channel and stay updated with the latest news.