ಉಡುಪಿ: ಡೆಂಗ್ಯೂ ಉಲ್ಬಣಕ್ಕೆ ಸೊಳ್ಳೆ ಕಡಿತವೇ ಕಾರಣ. ಕಡಿಯುವ ಸೊಳ್ಳೆ ಯಾವುದು ಎಂದು ಕಾಯಿಲೆ ಬಂದ ಮೇಲಷ್ಟೇ ತಿಳಿಯುತ್ತದೆ. ಹೀಗಾ ಗಿ ಸೊಳ್ಳೆ ಕಡಿಯದಂತೆ ನಾವು ಯಾವ ರೀತಿಯ ಮುನ್ನೆಚ್ಚರಿಕೆ ಕೈಗೊಳ್ಳಬಹುದೆಂಬು ದರ ವಿವರ ಇಲ್ಲಿದೆ.
ಮನೆಯ ಆಸುಪಾಸು ಸಹಿತ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವ ಮುನ್ನ ದೇಹಕ್ಕೆ ನೀಲಗಿರಿ ಅಥವಾ ಬೇವಿನ ಎಣ್ಣೆ ಹಚ್ಚಿಕೊಳ್ಳುವುದು ಸೂಕ್ತ. ಇವುಗಳ ವಾಸನೆಗೆ ಸೊಳ್ಳೆ ಸಮೀಪಕ್ಕೆ ಸುಳಿಯದಂತೆ ತಡೆಯ ಬಹುದು.
ಮಾರುಕಟ್ಟೆಯಲ್ಲಿ ದೊರೆ ಯುವ ಅಲೋವೆರಾ ಮತ್ತು ಬೇವು ಮಿಶ್ರಿತ ಕ್ರೀಂಗಳನ್ನು ಕೂಡ ಬಳಸುವುದರಿಂದ ಸೊಳ್ಳೆ ಕಡಿತದಿಂದ ಪಾರಾಗಬಹುದು.
ಡೆಂಗ್ಯೂ ಸೊಳ್ಳೆಗಳು ಬೆಳಗ್ಗೆ ಹಾಗೂ ಸಂಜೆಯ ಬಳಿಕ ಕಚ್ಚುವ ಸಾಧ್ಯತೆ ಹೆಚ್ಚು. ಈ ಸಮಯದಲ್ಲಿ ವಾಯು ವಿಹಾರಕ್ಕೆ ಕ್ಕೆ ಹೋಗುವವರು ಪೂರ್ಣ ಪ್ರಮಾಣದ ದಿರಿಸು ಧರಿಸುವುದು ಹೆಚ್ಚು ಆರೋಗ್ಯಕರ.
ಹಲವು ದಿನಗಳಿಂದ ನೀರು ನಿಂತಿರುವ ಜಾಗದ ಬಳಿ ಹೆಚ್ಚು ಹೊತ್ತು ನಿಲ್ಲಬೇಡಿ. ಜತೆಗೆ ಸಂಬಂಧಪಟ್ಟ ಸ್ಥಳೀಯಾಡಳಿತಕ್ಕೆ ಈ ಸೊಳ್ಳೆ ಉತ್ಪತ್ತಿ ತಾಣದ ಬಗ್ಗೆ ಮಾಹಿತಿ ನೀಡಿ.
ಮುಖ್ಯವಾಗಿ ಬಸ್ ತಂಗುದಾಣಗಳ ಬದಿ, ಸಾರ್ವಜನಿಕ ಶೌಚಾಲಯಗಳಲ್ಲಿ ನೀರು ನಿಂತು ಸೊಳ್ಳೆಗಳ ಕಾಟವಿರುವ ಸಾಧ್ಯತೆ ಇರುವುದರಿಂದ ಇವುಗಳ ಬಳಕೆ ಸಂದರ್ಭದಲ್ಲಿ ಸದಾ ಹೆಚ್ಚು ಮುಂಜಾಗ್ರತೆ ವಹಿಸಿ.