ಇಂದು ಪ್ರತಿಯೊಬ್ಬರೂ ಹೊಸ ಸ್ಮಾರ್ಟ್ ಫೋನ್ ಖರೀದಿಸುವಾಗ ಅದರ ಬ್ಯಾಟರಿ ಸಾಮರ್ಥ್ಯದ ಕಡೆಗೆ ಹೆಚ್ಚಿನ ಗಮನ ಕೊಡುತ್ತಾರೆ. ಇಂದಿನ ಸುಧಾರಿತ ತಂತ್ರಜ್ಞಾನವನ್ನು ಗಮನಿಸುವುದಾದರೇ ಪ್ರತಿಯೊಂದು ಮೊಬೈಲ್ ಕಂಪೆನಿಗಳು ಗ್ರಾಹಕರಿಗೆ ಇತ್ತೀಚಿನ ಸ್ಮಾರ್ಟ್ ಪೋನ್ ಗಳಲ್ಲಿ ಹೆಚ್ಚಿನ ಬ್ಯಾಟರಿ ಶಕ್ತಿಯನ್ನು ನೀಡುತ್ತಿದೆ. ಜೊತೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡುತ್ತಿವೆ. ಅದಾಗ್ಯೂ ಕೆಲವೊಮ್ಮೆ ಬ್ಯಾಟರಿ ಬಾಳಿಕೆಯಲ್ಲಿ ವ್ಯತ್ಯಾಸ ಕಂಡುಬರುತ್ತಿರುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಎಂಬಂತಾಗಿದೆ.
ಸ್ಮಾರ್ಟ್ ಫೋನ್ ಗಳ ಬ್ಯಾಟರಿ ಸಾಮರ್ಥ್ಯ ಯಾವಾಗ ಕಡಿಮೆಯಾಗುತ್ತದೆ ? ನಮ್ಮ ಫೋನ್ ಗಳ ಬ್ಯಾಟರಿಯ ಶಕ್ತಿ ಕುಂದಿದೆ ಎಂದು ಹೇಗೆ ತಿಳಿಯುವುದು ? ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಇಂದು ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾಗಿದ್ದು, ಬ್ಯಾಟರಿ ಬಾಳಿಕೆ ಒಂದು ದಿನ ಬಂದರೆ ಹೆಚ್ಚು. ಹಾಗಾದರೇ ಸ್ಮಾರ್ಟ್ ಫೋನ್ ಗಳ ಬ್ಯಾಟರಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯಾವೆಲ್ಲಾ ತಂತ್ರಗಳನ್ನು ಅನುಸರಿಸಬಹುದು.
1) ದಿನಕ್ಕೆ ಎರಡು ಮೂರು ಬಾರಿ ಫೋನ್ ಚಾರ್ಜ್ ಮಾಡುವುದರಿಂದ ಬ್ಯಾಟರಿಯ ಆರೋಗ್ಯ ಶೀಘ್ರವಾಗಿ ನಶಿಸುತ್ತದೆ. ಅಗತ್ಯವಿಲ್ಲದಿದ್ದಾಗ ಜಿಪಿಎಸ್, ಬ್ಲೂಟೂತ್, ವೈಫೈ ಆಫ್ ಮಾಡಿಬಿಡಿ. ಯಾಕೆಂದರೇ ಜಿಪಿಎಸ್ ಅತೀ ಹೆಚ್ಚು ಬ್ಯಾಟರಿ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತದೆ.
2) ಓವರ್ ಚಾರ್ಜಿಂಗ್ ಅಂದರೆ ಎರಡು ಮೂರು ಬಾರಿ ಫೋನ್ ಚಾರ್ಜ್ ಮಾಡುವುದು ಅಪಾಯಕಾರಿ. ಸಂಪೂರ್ಣವಾಗಿ ಬ್ಯಾಟರಿ ಶಕ್ತಿ ಕುಂದಿದ್ದಾಗ ಮಾತ್ರ ಚಾರ್ಜ್ ಗಿಡಿ.
3) ಬ್ಯಾಟರಿ ಸೇವರ್ ಮೋಡ್ ಆನ್ ಮಾಡುವುದು ಮರೆಯಬೇಡಿ- ಕೆಲವೊಂದು ಅಪ್ಲಿಕೇಶನ್ ಗಳು ನಮ್ಮ ಮೊಬೈಲ್ ನಲ್ಲಿ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತಿರುತ್ತದೆ. ಮಾತ್ರವಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಟರಿ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಬಹುತೇಕ ಬಳಕೆದಾರರು ಆ್ಯಪ್ ಗಳನ್ನು ಓಪನ್ ಮಾಡಿ ಬಳಿಕ ಅದನ್ನು ಕ್ಲೋಸ್ ಮಾಡುವುದೇ ಇಲ್ಲ. ಹಾಗಾಗಿ ಬ್ಯಾಕ್ ಗ್ರೌಂಡ್‌ನಲ್ಲಿ ಆ ಆ್ಯಪ್ಸ್‌ಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಜೊತೆಗೆ ಬ್ಯಾಟರಿಯನ್ನು ಕಬಳಿಸುತ್ತಿರುತ್ತವೆ. ಅದಕ್ಕಾಗಿ ಬ್ಯಾಕ್ ಗ್ರೌಂಡ್ ಆ್ಯಪ್ಸ್ ಕ್ಲಿಯರ್ ಮಾಡುವುದು ಉತ್ತಮ.
4) ಸ್ಮಾರ್ಟ್ ಫೋನ್ ನಲ್ಲಿ ಅತೀಯಾದ ಬ್ರೈಟ್ನೆಸ್ ಇಡುವುದು ಬೇಡ. ಯಾಕೆಂದರೇ ಹೆಚ್ಚಿನ ಬ್ರೈಟ್ನೆಸ್ ಬಳಸಿಕೊಳ್ಳುವ ಸ್ಮಾರ್ಟ್ ಫೋನ್ ಗಳು ಬ್ಯಾಟರಿ ಸಾಮರ್ಥ್ಯವನ್ನು ಕಡಿತಗೊಳಿಸುತ್ತದೆ. ಸ್ಕ್ರೀನ್ ಬ್ರೈಟ್ನೆಸ್ ಲೆವಲ್ ಅನ್ನು ಆಟೋಮ್ಯಾಟಿಕ್ ಮೋಡ್‌ನಲ್ಲಿ ಇರಿಸಿ. ಇದರಿಂದ ಬ್ಯಾಟರಿ ಉಳಿಕೆ ಆಗುವುದರಲ್ಲಿ ಸಂಶಯವಿಲ್ಲ.
5) ಸ್ಲೀಪ್ ಮೋಡ್ ಗಳ ಬಳಕೆ: ಸ್ಮಾರ್ಟ್ ಫೋನ್ ನಲ್ಲಿ 1ನಿಮಿಷ, 30 ಸೆಕೆಂಡ್ ಮತ್ತು 15 ಸೆಕೆಂಡ್ ಎಂಬ ಸ್ಲೀಪ್ ಮೋಡ್ ಆಯ್ಕೆಗಳು ಕಾಣಸಿಗುತ್ತವೆ. ಸ್ಲಿಪ್ ಟೈಮ್ ಅನ್ನು ಆದಷ್ಟು ಕಡಿಮೆ ಮಾಡುವುದರಿಂದ ಫೋನ್ ಬ್ಯಾಟರಿ ಉಳಿಸಲು ನೆರವಾಗಲಿದೆ.
6) ಸ್ಮಾರ್ಟ್‌ಫೋನ್ ಬಳಕೆದಾರರು ವೈಬ್ರೈಟ್ ಮೋಡ್ ಬಳಸುವುದನ್ನು ಕಾಣಬಹುದು. ವೈಬ್ರೈಟ್‌ನಿಂದ ಫೋನ್ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ. ಆದಕ್ಕಾಗಿ ಫೋನ್ ರಿಂಗಿಂಗ್ ಆಯ್ಕೆಯಲ್ಲಿ ವೈಬ್ರೈಟ್ ಮೋಡ್ ಆಯ್ಕೆ ಬಳಸುವುದನ್ನು ನಿಲ್ಲಿಸುವುದು ಉತ್ತಮ.
7) ಫೇಸ್ ಬುಕ್ ಸೇರಿದಂತೆ ಕೆಲವು ಅಪ್ಲಿಕೇಶನ್ ಗಳು ಹೆಚ್ಚಿನ ಬ್ಯಾಟರಿ ಸಾಮಾರ್ಥ್ಯವನ್ನು ಬಳಸಿಕೊಳ್ಳುತ್ತದೆ. ಅದ್ದರಿಂದ ಅಂತಹ ಆ್ಯಪ್ ಗಳ ಲೈಟ್ ವರ್ಷನ್ ಗಳನ್ನು ಬಳಸಿ.