Advertisement
ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಮಾಡಲು ನಿರ್ದೇಶಿಸಬೇಕು ಎಂದು ಕೋರಿ, ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಹಾಗೂ ಇತರ ಮೂವರು ಸಲ್ಲಿಸಿರುವ ರಿಟ್ ಅರ್ಜಿಯು ಏಕಸದಸ್ಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.ಈ ವೇಳೆ ಮಂಡಳಿಯ ಪರ ವಕೀಲರು, ಹಣದ ಉಪಯೋಗ ನಿಯಮಾನುಸಾರವೇ ಆಗಿದೆ. ಅರ್ಜಿದಾರರು ನ್ಯಾಯಾಲಯದ ಅನುಕಂಪ ಗಿಟ್ಟಿಸಿಕೊಳ್ಳಲು ಸತ್ಯವಲ್ಲದ ಮಾಹಿತಿಗಳನ್ನು ನೀಡುತ್ತಿದ್ದಾರೆ ಎಂದರು. ಅದರಿಂದ ಸಿಟ್ಟಿಗೆದ್ದ ನ್ಯಾಯಪೀಠ, ಇದರಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವುದು ಏನಿದೆ? ಕಾಯ್ದೆಗೆ ವಿರುದ್ಧವಾಗಿ, ಸಿಎಜಿ ಅಭಿಪ್ರಾಯಗಳಿಗೆ ವ್ಯತಿರಿಕ್ತವಾಗಿ ಮಂಡಳಿಯ ಹಣವನ್ನು ಬೇರೆ ಉದ್ದೇಶಗಳಿಗೆ ಬಳಿಸಿಕೊಂಡಿರುವುದ್ಯಾಕೆ, ಮಂಡಳಿಯ ಹಣ ನರೇಗಾ ಯೋಜನೆಗೆ, ಇಂದಿರಾ ಕ್ಯಾಂಟೀನ್‌ಗೆ ವೆಚ್ಚ ಮಾಡಿದ್ಯಾಕೆ, ಅಧಿಕಾರಿಗಳಿಗೆ ಕಾರುಗಳನ್ನು ಈ ಹಣದಲ್ಲಿ ಏಕೆ ಖರೀದಿ ಮಾಡಿದ್ದೀರಿ ಎಂದು ಪ್ರಶ್ನಿಸಿತು.