Advertisement

ಪೂನಮ್‌ ಯಾದವ್‌ ಫಿಟ್‌ ಇಲ್ಲದಿದ್ದರೂ ಸ್ಪರ್ಧೆ: ಐಡಬ್ಲ್ಯುಎಫ್

10:57 PM Aug 02, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಪೂನಮ್‌ ಯಾದವ್‌ ಅವರು ಪೂರ್ಣ ಫಿಟ್‌ ಇಲ್ಲದ ಹೊರತಾಗಿಯೂ ಸ್ಪರ್ಧಿಸಿದ್ದಾರೆ ಎಂದು ಭಾರತೀಯ ವೇಟ್‌ಲಿಫ್ಟಿಂಗ್‌ ಫೆಡರೇಶನ್‌ (ಐಡಬ್ಲ್ಯುಎಫ್) ನ ಅಧ್ಯಕ್ಷ ಸಹದೇವ್‌ ಯಾದವ್‌ ಹೇಳಿದ್ದಾರೆ.

Advertisement

ಮಹಿಳೆಯರ 76 ಕೆ.ಜಿ. ವಿಭಾಗದಲ್ಲಿ ಪೂನಮ್‌ ಕ್ಲೀನ್‌ ಅಂಡ್ ಜರ್ಕ್‌ನ ಮೂರು ಪ್ರಯತ್ನಗಳಲ್ಲಿ ವಿಫಲವಾದ ಅನಂತರ ಅನರ್ಹಗೊಂಡಿದ್ದರು. 69 ಕೆ.ಜಿ. ವಿಭಾಗದಲ್ಲಿ ಹಾಲಿ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಆಗಿದ್ದ ಪೂನಮ್‌ ಸ್ನ್ಯಾಚ್‌ನ 3ನೇ ಪ್ರಯತ್ನದಲ್ಲಿ 98 ಕೆ.ಜಿ. ಗೆಲ್ಲುವ ಮೂಲಕ ಬೆಳ್ಳಿ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ ಅನರ್ಹಗೊಂಡ ಕಾರಣ ಪದಕ ಗೆಲ್ಲಲು ವಿಫ‌ಲರಾದರು.

ಪೂನಮ್‌ ಅವರ ಪ್ರದರ್ಶನದಿಂದ ತೀವ್ರ ನಿರಾಶೆಗೊಳಗಾದ ಸಹದೇವ್‌ ಯಾದವ್‌ ಅವರು ಲಿಫ್ಟರ್‌ ತನ್ನ ಮೊಣಕಾಲಿನ ಗಾಯ ಇದ್ದರೂ ಸ್ಪರ್ಧಿಸಿದ್ದಾರೆ ಎಂದು ದೂರಿದರು. ಅವರಿಂದಾಗಿ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ನಮಗೆ ಒಂದು ಪದಕ ತಪ್ಪಿಹೋಯಿತು ಎಂದರು.

ಗಾಯದ ಸಮಸ್ಯೆಯಿಂದಾಗಿ ನಾವು ಆರಂಭದಲ್ಲಿ ಆಕೆಯ ಹೆಸರನ್ನು ತಡೆಹಿಡಿದಿದ್ದೆವು. ಆದರೆ ಲಿಫ್ಟರ್‌ ಫಿಟ್‌ ಆಗಿದ್ದಾರೆ ಎಂದು ಹೇಳಿ ಕೊಂಡರಲ್ಲದೇ ವೈದ್ಯರು ನೀಡಿದ ಫಿಟ್‌ನೆಸ್‌ ಪ್ರಮಾಣಪತ್ರವನ್ನು ತೋರಿಸಿದರು. ಅವರು ತಡವಾಗಿ ತಂಡಕ್ಕೆ ಸೇರಿದ್ದರು ಎಂದು ಯಾದವ್‌ ಹೇಳಿದರು.

“ನೀವು ಅವರ ಭಾರ ಎತ್ತುವ ಪ್ರಯತ್ನವನ್ನು ಹತ್ತಿರದಿಂದ ಗಮನಿಸಿ ದರೆ, ಅವರು ತನ್ನ ಅತ್ಯುತ್ತಮ ಬಲವನ್ನು ನೀಡುತ್ತಿರಲಿಲ್ಲ ಎಂಬುದು ಗೊತ್ತಾಗುತ್ತಿತ್ತು. ಆದರೆ ಇದನ್ನು ಒಪ್ಪಿಕೊಳ್ಳಲು ಪೂನಮ್‌ ಸಿದ್ಧ ಇರ ಲಿಲ್ಲ. ನಾನು ಸಂಪೂರ್ಣ ಫಿಟ್‌ ಆಗಿದ್ದೆ. ಆದರೆ ಇಂದು ನನಗೆ ಅದೃಷ್ಟವಿರಲಿಲ್ಲ ಎಂದು ಪೂನಮ್‌ ಹೇಳಿದರು.

Advertisement

ಕ್ಲೀನ್‌ ಅಂಡ್ ಜರ್ಕ್‌ನ ಮೊದಲ ಎರಡು ಪ್ರಯತ್ನಗಳಲ್ಲಿ 116 ಕೆ.ಜಿ. ಎತ್ತುವಲ್ಲಿ ವಿಫಲವಾದ ವಾರಣಾಸಿ ಲಿಫ್ಟರ್‌ ಅಂತಿಮ ಪ್ರಯತ್ನದಲ್ಲಿ ಉತ್ತಮವಾಗಿ ಲಿಫ್ಟ್ ಮಾಡಿದ್ದರೂ ಮೂವರು ತೀರ್ಪುಗಾರರು ಹಸುರು ಸಿಗ್ನಲ್‌ ನೀಡುವ ಮೊದಲೇ ಬಾರ್‌ ಅನ್ನು ಕೈಬಿಟ್ಟಿದ್ದರು.

ಲಿಫ್ಟರ್‌ ಪೂನಮ್‌ ಯಾದವ್‌ ಅನರ್ಹ
ಬರ್ಮಿಂಗ್‌ಹ್ಯಾಮ್‌: ವೇಟ್‌ಲಿಫ್ಟಿಂಗ್‌ ಸ್ಪರ್ಧೆಯ ಕ್ಲೀನ್‌ ಅಂಡ್ ಜರ್ಕ್‌ನ ಮೂರು ಪ್ರಯತ್ನಗಳಲ್ಲಿ ಭಾರ ಎತ್ತಲು ವಿಫ‌ಲರಾದ ಭಾರತದ ಪದಕ ಭರವಸೆಯ ಲಿಫ್ಟರ್‌ ಪೂನಮ್‌ ಯಾದವ್‌ ಅನರ್ಹಗೊಂಡು ಹೊರಬಿದ್ದರು.

ಈ ಮೊದಲು ಸ್ನ್ಯಾಚ್‌ನಲ್ಲಿ 98 ಕೆ.ಜಿ. ಭಾರ ಎತ್ತುವ ಮೂಲಕ ಅವರು ಪದಕ ಗೆಲ್ಲುವ ಆಸೆ ಮೂಡಿಸಿದ್ದರು.

ಕ್ಲೀನ್‌ ಅಂಡ್ ಜರ್ಕ್‌ನಲ್ಲಿ ಪೂನಮ್‌ ಮೂರು ಪ್ರಯತ್ನಗಳಲ್ಲಿ 116 ಕೆ.ಜಿ. ಭಾರ ಎತ್ತಲು ವಿಫ‌ಲರಾಗಿದ್ದರು. ಅಂತಿಮ ಪ್ರಯತ್ನದ ಬಳಿಕ ಅವರು ಅಂಪಾಯರ್‌ ತೀರ್ಪನ್ನು ಪ್ರಶ್ನಿಸಿದರೂ ಅದನ್ನು ತಿರಸ್ಕರಿಸಲಾಯಿತು. ಇದರಿಂದ ಅವರು ಸ್ಪರ್ಧೆಯಿಂದ ಹೊರಬೀಳುವಂತಾಯಿತು.

ಕೆನಡದ ಮಾಯಾ ಲೇಲರ್‌ ಒಟ್ಟು 228 ಕೆ.ಜಿ. ಎತ್ತಿ ಚಿನ್ನ ಗೆದ್ದರೆ ನೈಜೀರಿಯಾದ ತೈವೊ ಲಿಯಾಡಿ ಬೆಳ್ಳಿ (216 ಕೆ.ಜಿ.) ಮತ್ತು ನರಾವುನ ಮ್ಯಾಕ್ಸಿಮಿನಾ ಯುಪಾ ಕಂಚು (215 ಕೆ.ಜಿ.) ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next