Advertisement

WFI: ಬಜರಂಗ್‌ ಪೂನಿಯ ಪದ್ಮಶ್ರೀ ಪ್ರಶಸ್ತಿ ವಾಪಸ್‌?

11:29 PM Dec 22, 2023 | Team Udayavani |

ಹೊಸದಿಲ್ಲಿ: ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷರಾಗಿ ಬೃಜ್‌ಭೂಷಣ್‌ ಸಿಂಗ್‌ ಅವರ ಪರಮಾಪ್ತ ಸಂಜಯ್‌ ಸಿಂಗ್‌ ಆಯ್ಕೆಯಾದ ಬೆನ್ನಲ್ಲೇ ಕುಸ್ತಿಪಟುಗಳ ಆಕ್ರೋಶ, ಅಸಮಾಧಾನ ತೀವ್ರಗೊಂಡಿದೆ. ಗುರುವಾರ ಸಾಕ್ಷಿ ಮಲಿಕ್‌ ನಿವೃತ್ತಿ ಘೋಷಿಸಿದ್ದರು. ಇದೀಗ ಮತ್ತೋರ್ವ ಕುಸ್ತಿಪಟು ಬಜರಂಗ್‌ ಪೂನಿಯ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿಗೆ ಮರಳಿಸುವ ನಿರ್ಧಾರಕ್ಕೆ ಬಂದಿದ್ದಾರೆ.

Advertisement

ಇದಕ್ಕೆ ಪ್ರತಿಕ್ರಿಯಿಸಿರುವ ಸರಕಾರ, “ಇದು ಅವರ ವೈಯಕ್ತಿಕ ನಿರ್ಧಾರ. ಬಜರಂಗ್‌ ಅವರ ಮನ ಒಲಿಸಲು ಪ್ರಯತ್ನಿಸುತ್ತೇವೆ” ಎಂದಿದೆ.

“ನಾನು ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನ ಮಂತ್ರಿಯವರಿಗೆ ಹಿಂದಿರುಗಿಸುತ್ತೇನೆ. ಇದನ್ನು ಈ ಮೂಲಕ ಘೋಷಿಸುತ್ತಿದ್ದೇನೆ” ಎಂಬುದಾಗಿ ಬಜರಂಗ್‌ “ಎಕ್ಸ್‌”ನಲ್ಲಿ ಬರೆದುಕೊಂಡಿದ್ದಾರೆ. ಬಜರಂಗ್‌ ಪೂನಿಯ 2019ರಲ್ಲಿ ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next