ಹೊಸದಿಲ್ಲಿ: ಹೆಚ್ಚಿನ ಮತದಾನ ನಡೆಸಲು ಮನವಿ ಮಾಡಿ ಕೆಲ ವಿಪಕ್ಷಗಳ ನಾಯಕರನ್ನು ಟ್ಯಾಗ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಟ್ವೀಟ್‌ಗೆ ಎಐಸಿಸಿ ಸಾಮಾಜಿಕ ತಾಣಗಳ ಮುಖ್ಯಸ್ಥೆ, ನಟಿ ರಮ್ಯಾ ತಿರುಗೇಟು ನೀಡಿದ್ದಾರೆ.
ಹೆಚ್ಚು ಮತದಾನ ವಾದಲ್ಲಿ ನಮ್ಮ ಪ್ರಜಾಸತ್ತೆಯ ಉನ್ನತಿಗೆ ಒಳಿತು, ಎಂದು ಪ್ರಧಾನಿ ಅವರು ಮನವಿ ಮಾಡಿ ರಾಹುಲ್‌ಗಾಂಧಿ, ಮಮತಾ ಬ್ಯಾನರ್ಜಿ, ಶರದ್ ಪವಾರ್,ಮಾಯಾವತಿ, ಅಖೀಲೇಶ್ ಯಾದವ್, ತೇಜಸ್ವಿ ಯಾದವ್ ಮತ್ತು ಎಂ.ಕೆ.ಸ್ಟಾಲಿನ್ ಅವರನ್ನು ಟ್ಯಾಗ್ ಮಾಡಿದ್ದರು.
ಈ ಟ್ವೀಟ್‌ಗೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ರಮ್ಯಾ, ನಾವು ಈಗಾಗಲೇ ಅದನ್ನು ಮಾಡಿದ್ದೇವೆ ಮೋದಿ ಜಿ, ನಾವದನ್ನು ಚುನಾವಣಾ ದಿನಾಂಕ ಘೋಷಣೆಯಾದ ದಿನವೇ ಮಾಡಿದ್ದೇವೆ. ದಯವಿಟ್ಟು ಒಮ್ಮೆ ನೋಡಿ, ನಿಮಗೆ ಮನವಿ ಮಾಡಲೂ ಇದೇನು ಅತೀ ವಿಳಂಬ ಕಾಲವಲ್ಲ. ರಾಹುಲ್ ಗಾಂಧಿ ಅವರ ಸ್ಟೆಲ್ಲಾ ಮಾರೀಸ್ ವಿದ್ಯಾರ್ಥಿಗಳೊಂದಿಗಿನ ಸಂವಾದ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ, ಎಂದು ಬರೆದಿದ್ದಾರೆ.