Advertisement

ಗುರುವಾರ ಮಳೆಗೆ ಗದ್ದೆಗಳು ಜಲಾವೃತ

12:56 PM Sep 22, 2018 | Team Udayavani |

ಹೊನ್ನಾಳಿ: ಗುರುವಾರ ಮಧ್ಯಾಹ್ನ ಒಂದೂವರೆ ಗಂಟೆ ಕಾಲ ಮತ್ತು ರಾತ್ರಿ ನಾಲ್ಕೈದು ತಾಸು ಸುರಿದ ಉತ್ತರ ಮಳೆಯ
ಆರ್ಭಟಕ್ಕೆ ಪಟ್ಟಣಕ್ಕೆ ಸಮೀಪದಲ್ಲಿನ ನೂರಾರು ಹೆಕ್ಟೇರ್‌ಗಳಷ್ಟು ಭತ್ತದ ಗದ್ದೆಗಳು ಜಲಾವೃತವಾಗಿವೆ.

Advertisement

ಇಲ್ಲಿನ ಹಿರೇಕಲ್ಮಠದ ಸುತ್ತಮುತ್ತಲಿನ ಪ್ರದೇಶ ಮತ್ತು ಸುಂಕದಕಟ್ಟೆ ಮಾರ್ಗದಲ್ಲಿನ ಭತ್ತದ ಗದ್ದೆಗಳು ಮಳೆಯಿಂದ
ಜಲಾವೃತವಾಗಿ ಬೆಳೆ ಹಾನಿಯ ಭೀತಿ ಎದುರಾಗಿದೆ. ಈ ಪ್ರದೇಶದ ಜಮೀನುಗಳಿಗೆ ತೆರಳುವ ರಸ್ತೆಗಳಲ್ಲಿಯೂ ನೀರು
ಹರಿಯುತ್ತಿದ್ದು, ಶುಕ್ರವಾರ ಬೆಳಗ್ಗೆಯೂ ನೀರಿನ ಹರಿವು ನಿಂತಿರಲಿಲ್ಲ. ಪರಿಣಾಮವಾಗಿ ಈ ಮಾರ್ಗದಲ್ಲಿ ಸಂಚರಿಸುವರು ಪ್ರಯಾಸಪಡಬೇಕಾಯಿತು. ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ತಕ್ಷಣ ಸಮೀಕ್ಷೆ ನಡೆಸಿ ಮಳೆಯಿಂದ ಹಾನಿಗೊಳಗಾಗಿರುವ ರೈತರಿಗೆ ಸಮರ್ಪಕ ಪರಿಹಾರ ನೀಡಬೇಕು ಎಂದು ನೊಂದ ರೈತರು ಒತ್ತಾಯಿಸಿದ್ದಾರೆ.

ಮಳೆ ವಿವರ: ಹೊನ್ನಾಳಿ-10.4 ಮಿ.ಮೀ., ಸೌಳಂಗ-1ಮಿ.ಮೀ., ಬೆಳಗುತ್ತಿ-5.8 ಮಿ.ಮೀ., ಹರಳಹಳ್ಳಿ-33 ಮಿ.ಮೀ., ಗೋವಿನಕೋವಿ- 48.6ಮಿ.ಮೀ., ಕುಂದೂರು- 17.2 ಮಿ.ಮೀ., ಸಾಸ್ವೆಹಳ್ಳಿ- 21.4 ಮಿ.ಮೀ. ಮಳೆ ದಾಖಲಾಗಿದೆ. 

ಗುಡುಗು ಮಳೆಗೆ ಕುಸಿದ ಮನೆ
ಹರಪನಹಳ್ಳಿ:
ತಾಲೂಕಿನ ಅರಸೀಕೆರೆ ಹೋಬಳಿಯ ಹಿರೇಮೆಗಳಗೆರೆ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಗುರುವಾರ ರಾತ್ರಿ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಮಳೆಯಿಂದ ಹಿರೇಮಗಳಗೆರೆ ಗ್ರಾಮದ ಸಣ್ಣ ಹನುಮಂತಪ್ಪ ಎಂಬುವವರ ಮನೆ ಕುಸಿದು ಬಿದ್ದಿದೆ.

ಏಕಾಏಕಿ ಸುರಿದ ಮಳೆಯಿಂದ ಜಾಗೃತರಾದ ಕುಟುಂಬದ ಸದಸ್ಯರು ಮನೆಯಿಂದ ಹೊರ ಬರುತ್ತಿದ್ದಂತೆ ಚಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಆಗಿಲ್ಲ. ಮನೆಯಲ್ಲಿದ್ದ ದಿನ ಬಳಕೆಯ ವಸ್ತುಗಳು ಹಾನಿಗೊಂಡಿದೆ. ಅರಸೀಕೆರೆ ಹೋಬಳಿಯ ಕಮತ್ತಹಳ್ಳಿ, ನಂದಿ

Advertisement
Advertisement

Udayavani is now on Telegram. Click here to join our channel and stay updated with the latest news.

Next