Advertisement

ಪಶ್ಚಿಮಘಟ್ಟ ಸೂಕ್ಷ್ಮ ವಲಯ:ಕೇಂದ್ರಕ್ಕೆ ರಾಜ್ಯದ ಆಕ್ಷೇಪಣೆ

08:18 AM Mar 08, 2017 | Team Udayavani |

ಬೆಂಗಳೂರು: ಡಾ.ಕಸ್ತೂರಿ ರಂಗನ್‌ ವರದಿ ಪ್ರಕಾರ ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿರುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸುವುದರ ಜತೆಗೆ, ರಾಜ್ಯದ ಜನರ ಹಿತಾಸಕ್ತಿ
ಕಾಪಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಬಳಿ ಸರ್ವಪಕ್ಷ ನಿಯೋಗ ಸೇರಿ ಎಲ್ಲ ರೀತಿಯ ಹೋರಾಟಗಳಿಗೂ ಸಿದ್ಧ ಎಂದು ಅರಣ್ಯ ಸಚಿವ ರಮನಾಥ್‌ ರೈ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ 3 ಬಾರಿ ಆಕ್ಷೇಪಣೆ ಸಲ್ಲಿಸಿದ್ದರೂ ಅದನ್ನು ಲೆಕ್ಕಿಸದೆ ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. ತಕ್ಷಣ ಇದಕ್ಕೆ ಮತ್ತೂಮ್ಮೆ ಆಕ್ಷೇಪಣೆ ಸಲ್ಲಿಸುತ್ತೇವೆ ಎಂದರು. ಪಶ್ಚಿಮಘಟ್ಟ ಸೂಕ್ಷ್ಮ ವಲಯದ ಬಗ್ಗೆ ಕೇಂದ್ರ ಸರ್ಕಾರ ಕರೆದ ಸಂಸದರ ಸಭೆಗೆ ಹಾಜರಾಗದ ಬಿ.ಎಸ್‌.ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಪ್ರತಾಪ್‌ಸಿಂಹ ರಾಜ್ಯ
ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಇವರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು. 

ಕಾಡ್ಗಿಚ್ಚು ಪ್ರಕರಣಗಳ ಹಿಂದೆ ಬೇರೆಯದೇ ಷಡ್ಯಂತ್ರ ಇದೆ ಎಂಬ ಗುಮಾನಿ ಇದೆ. ಇದೇ ಕಾರಣಕ್ಕೆ ಸಿಐಡಿಗೆ ಪ್ರಕರಣದ ತನಿಖೆ ವಹಿಸಲಾಗಿದೆ. ನಮ್ಮಲ್ಲಿರುವ ವರದಿ ಪ್ರಕಾರ 100 ಹೆಕ್ಟೇರ್‌ ಪ್ರದೇಶ ಮಾತ್ರ ಬೆಂಕಿಗೆ ಆಹುತಿಯಾಗಿದೆ. ಬಂಡೀಪುರದಲ್ಲಿ 40,
ಕಪ್ಪತ್ತಗುಡ್ಡದಲ್ಲಿ 32 ಹೆಕ್ಟೇರ್‌ ಹಾಗೂ ಇತರೆ ಭಾಗದಲ್ಲಿ 28 ಹೆಕ್ಟೇರ್‌ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾಡ್ಗಿಚ್ಚು ನಿಯಂತ್ರಣಕ್ಕೆ ಪ್ರತಿವರ್ಷದಂತೆ ಎಲ್ಲ ಅಗತ್ಯ ಕ್ರಮ (ಫೈರ್‌ಲೈನ್‌) ಕೈಗೊಳ್ಳಲಾಗಿತ್ತು.
ರಮಾನಾಥ ರೈ, ಅರಣ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next