Advertisement

ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿ: ಮಹಾಪೂಜೆ

12:11 PM Dec 18, 2017 | |

ಮುಂಬಯಿ: ಫೋರ್ಟ್‌ ಪರಿಸರ ದಲ್ಲಿ ಕಳೆದ ಏಳು ದಶಕಗಳ ಹಿಂದೆ ದಿ| ಕೆ. ಕೆ. ಕೋಟ್ಯಾನ್‌ ಅವರ ಮುಂದಾಳತ್ವದಲ್ಲಿ ದಿ| ನಾರಾಯಣ ಬಿ. ಸಾಲ್ಯಾನ್‌ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಗೊಂಡ ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿಯ 73ನೇ ವಾರ್ಷಿಕೋತ್ಸವ ಸಂಭ್ರಮವು ಡಿ. 16ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಫೋರ್ಟ್‌ ಪರಿಸರದ ಮಿಂಟ್‌ರೋಡ್‌ನ‌ಲ್ಲಿರುವ ಕಾಂಜೀ ಕೇತ್ಸಿ ಸಭಾಗೃಹದಲ್ಲಿ ಜರಗಿದ ಕಾರ್ಯಕ್ರಮದಲ್ಲಿ  ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ  ಗಣಹೋಮ ಮತ್ತು ಶ್ರೀ ಸತ್ಯನಾರಾಯಣ  ಪೂಜೆ  ಹರೀಶ್‌ ಶಾಂತಿ  ಪೌರೋಹಿತ್ಯದಲ್ಲಿ ನಡೆಯಿತು. ಶ್ರೀ ವೆಸ್ಟರ್ನ್ ಇಂಡಿಯಾ ಸೇವಾ ಸಮಿತಿ ಮತ್ತು ಶೇಖರ್‌ ಸಸಿಹಿತ್ಲು ಇವರಿಂದ ಭಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪೂರ್ವಾಹ್ನ 11.30 ರಿಂದ ಶ್ರೀ ಶನಿದೇವರ ಕಲಶ ಪ್ರತಿಷ್ಠೆಯು ಮಂದಿರದ ಪ್ರಧಾನ ಅರ್ಚಕ ಸತೀಶ್‌ ಕೋಟ್ಯಾನ್‌ ಅವರಿಂದ ನೆರವೇರಿತು. ಆನಂತರ ಯಕ್ಷಗಾನ ತಾಳ ಮದ್ದಳೆಯ ರೂಪದಲ್ಲಿ ಶ್ರೀ ಶನಿಗ್ರಂಥ ಪಾರಾಯಣ ನಡೆಯಿತು. ಮಧ್ಯಾಹ್ನ  ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.  

ಸಂಜೆ ಆಸ್ಟ್ರೋಲಜರ್‌ ರಾಜೇಂದ್ರ ದುಭೆ ಇವರಿಂದ ಡಿಸ್‌ಕೋರ್ಸ್‌ ಆನ್‌ ಶನಿ ಪ್ರಭಾವ್‌ ಎಂಬ ವಿಷಯದ ಮೇಲೆ ಹಿಂದಿಯಲ್ಲಿ ಪ್ರವಚನ ನೀಡಿದರು. ಸಂಜೆ 6 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 8.5 ರಿಂದ ಮಹಾಮಂಗಳಾರತಿ, ಪ್ರಸಾದ ವಿತರಣೆ, ರಾತ್ರಿ 9 ರಿಂದ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.

ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿಯ ಅಧ್ಯಕ್ಷ ಜೆ. ಜೆ. ಕೋಟ್ಯಾನ್‌, ಉಪಾಧ್ಯಕ್ಷರುಗಳಾದ ರವಿ ಬಂಗೇರ ಮತ್ತು ಜನಾರ್ಧನ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಭಂಡಾರಿ, ಕೋಶಾಧಿಕಾರಿ ಶರತ್‌ ಜಿ. ಪೂಜಾರಿ, ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರುಗಳ ನೇತೃತ್ವದಲ್ಲಿ ನಡೆದ ಈ ಧಾರ್ಮಿಕ  ಕಾರ್ಯಕ್ರಮದಲ್ಲಿ ತುಳು-ಕನ್ನಡಿಗ ಭಕ್ತಾದಿಗಳು, ಹಿತೈಷಿಗಳು, ಸ್ಥಳೀಯ ಹೊಟೇಲ್‌ ಉದ್ಯಮಿಗಳು, ವಿವಿಧ ಕ್ಷೇತ್ರದ ಗಣ್ಯರು, ರಾಜಕೀಯ ನೇತಾರರು, ಸಮಾಜ ಸೇವಕರು, ದಾನಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. 

Advertisement

ಚಿತ್ರ-ವರದಿ: ಸುಭಾಷ್‌  ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next