Advertisement
ಫೋರ್ಟ್ ಪರಿಸರ ಕಾಂಜಿಕೇತ್ಸಿ ಸಭಾಗೃಹದಲ್ಲಿ ನಡೆದ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ 74ನೇ ವಾರ್ಷಿಕ ಶನಿ ಮಹಾಪೂಜೆ ನೆರವೇರಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಿತಿಯ ಅಮೃತ ಮಹೋತ್ಸವಕ್ಕೆ ಚಾಲನೆಯನ್ನಿತ್ತು ಮಾತನಾಡಿದ ಅವರು, ಸಮಿತಿಯ ಅಮೃತ ಮಹೋತ್ಸವವು ಅರ್ಥಪೂರ್ಣವಾಗಿ ನೆರವೇರಲಿ ಎಂದು ಹಾರೈಸಿದರು.
ವಾಸ್ತು ಪಂಡಿತ ಅಶೋಕ್ ಪುರೋಹಿತ್ ಅವರು ಸ್ಮರಣ ಸಂಚಿಕೆಯ ಮನವಿಪತ್ರ ಬಿಡುಗಡೆ ಗೊಳಿಸಿ ಮಾತನಾಡಿ, ಶನಿದೇವರ ಸ್ಮರಣೆಯ ಅಮೃತ ಕಾಲದಲ್ಲಿ ಈ ಸಮಿತಿಯಲ್ಲಿ ಶ್ರಮಿಸಿ ಉಪಸ್ಥಿತ 95ರ ಹಿರಿಯ ಚೇತನಕ್ಕೆ ಮಾಡಿದ ಸಮ್ಮಾನದಿಂದಲೇ ನಾವು ದೇವರನ್ನು ಕಾಣಬಹುದು. ಇಂತಹ ಗೌರವ ಬಹುಶಃ ಮಹಾನಗರದಲ್ಲಿ ಇತಿಹಾಸ ವಾಗಿದ್ದು ಶ್ಲಾಘನೀಯವೂ ಹೌದು. ಶನಿ ದೇವರಿಗೆ ಎಲ್ಲರೂ ಹೆದರುವುದು ಸರ್ವೇ ಸಾಮಾನ್ಯ. ಆದರೆ ಮನುಷ್ಯನನ್ನು ಮನುಷ್ಯನಾಗಿಸಿ ಒಳಿತಿನ ಮಾರ್ಗಕ್ಕೆ ತರುವುದೇ ಶನಿದೇವರು. ಶನಿ ಹಿಡಿದ ಕಾಲದಲ್ಲಿ ನಮ್ಮೊಂದಿಗೆ ಯಾರ್ಯಾರು ಇರ್ತಾರೆ ಎಂದು ತಿಳಿಯಬಹುದು ಎಂದು ನುಡಿದು ಆದರ್ಶ ಬದುಕಿಗೆ ಸಲಹೆ ಸೂಚನೆಗಳನ್ನು ನೀಡಿದರು.
Related Articles
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿದ ಅತಿಥಿಗಳು ಉಪಸ್ಥಿತ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಪ್ರತಿನಿಧಿಗಳನ್ನು ಮತ್ತು ಸಮಿತಿಗೆ ಹೆಚ್ಚಿನ ದೇಣಿಗೆ ಸಂಗ್ರಹಿಸಿದ ಸದಸ್ಯರನ್ನು ಗೌರವಿಸಿ ಶುಭಹಾರೈಸಿದರು.
Advertisement
ಕರ್ಮದ ಫಲಕಿರಿಯನಾದ ನನಗೆ ಇಂತಹ 75 ರ ಹೊಸ್ತಿಲಲ್ಲಿರುವ ಸಾಧನಾಶೀಲ ಧಾರ್ಮಿಕ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಭಾಗ್ಯ ದೊರೆತಿರುವುದು ಕರ್ಮದ ಫಲವಾಗಿದೆ. ನಾವೆಲ್ಲರೂ ಜತೆಯಾಗಿ ಈ ಸಂಸ್ಥೆಯನ್ನು ಪೋಸಿ ಬೆಳೆಸಿ ಶತಮಾನದತ್ತ ಒಯ್ಯೋಣ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಹರೀಶ್ ಜಿ. ಅಮೀನ್ ಅವರು ನುಡಿದರು.
ಸೇವಾ ಸಮಿತಿಯ 74 ವರ್ಷಗಳ ನಡೆ ಮತ್ತು ಸೇವೆಯನ್ನು ಸಾಕ್ಷÂಚಿತ್ರ ಮೂಲಕ ತಿಳಿಸಲಾಯಿತು. ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ್ ಜೆ. ಕೋಟ್ಯಾನ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕೋಶಾಧಿಕಾರಿ ಶರತ್ ಜಿ. ಪೂಜಾರಿ ಪ್ರತಿಭಾನ್ವಿತರ ಪಟ್ಟಿ ವಾಚಿಸಿದರು. ತಾರಾನಾಥ ಶೆಟ್ಟಿ ಸಮ್ಮಾನಿತರನ್ನು ಪರಿಚಯಿಸಿದರು. ಸೇವಾ ಸಮಿತಿಯ ಉಪಾಧ್ಯಕ್ಷ ರಾದ ರವಿ ಎಲ್. ಬಂಗೇರ ಮತ್ತು ಜನಾರ್ದನ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ರಾಜೇಶ್ ಸುವರ್ಣ, ಜೊತೆ ಕೋಶಾಧಿಕಾರಿಗಳಾದ ಪ್ರಶಾಂತ ಕರ್ಕೇರ ಮತ್ತು ಅಕ್ಷಯ್ ಸುವರ್ಣ, ಸಲಹೆಗಾರರಾದ ಭೋಜ ಬಿ. ಕೋಟ್ಯಾನ್, ಸದಾನಂದ ಸುವರ್ಣ, ಮಾಜಿ ಅಧ್ಯಕ್ಷ ವಿಶ್ವನಾಥ ಕೋಟ್ಯಾನ್, ಭುವಾಜಿ ವಾಸು ಸಾಲಿಯಾನ್, ವಜ್ರಮಹೋತ್ಸವ ಸಮಿತಿಯ ಕಾರ್ಯದರ್ಶಿ ಮೋಹನ್ ಪೂಜಾರಿ, ಆಂತರಿಕ ಲೆಕ್ಕಪರಿಶೋಧಕ ನಾಗೇಶ್ ಎ. ಸುವರ್ಣ, ಮತ್ತಿತರ ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ವಸಂತ್ ಎನ್. ಸುವರ್ಣ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಭಂಡಾರಿ ವಂದಿಸಿದರು. ಸಮಿತಿಯ ಸದಸ್ಯರು, ಭಕ್ತರು, ದಾನಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ಶನಿದೇವರ ಕೃಪೆಗೆ ಪಾತ್ರರಾದರು. ಮನುಕುಲಕ್ಕೆ ಬುದ್ಧಿಸಿದ್ಧಿ ನೀಡುವ ಪರಮ ಶಕ್ತಿಯೇ ಶನೈಶ್ವರ. ಶನಿಯು ಎಂದಿಗೂ ದುಷ್ಟಶಕ್ತಿ ಆಗದೆ ಕರುಣಾಶೀಲ ಶಕ್ತಿ ಆಗಿಯೇ ಮನುಷ್ಯನಿಗೆ ಒಲಿಯುವನು. ಧರ್ಮಕ್ಕೆ ಫಲನೀಡುವ ಶನಿ ದೇವರು ಮಾನವ ಬದುಕನ್ನು ಬದಲಾಯಿಸಬಲ್ಲ ಭಗವಂತನು ಎನ್ನುವುದರಲ್ಲಿ ಸಂಶಯ ಬೇಡ .
– ರಾಹುಲ್ ಸುವರ್ಣ, ಶ್ರೀ ಮಹಾಶೇಷ ರುಂಡಮಾಲಿನಿ ಮಂದಿರ ಪೊವಾಯಿ ಅಮೃತ ಮಹೋತ್ಸವ ಸ್ಮರಣ ಸಂಚಿಕೆ ಸಮಿತಿಯ ಮುಖ್ಯಸ್ಥ ಪಟ್ಟವನ್ನು ನನಗೆ ನೀಡಿ ಈ ಸಂಸ್ಥೆ ನನ್ನ ಜವಾಬ್ದಾರಿ ಹೆಚ್ಚಿಸಿದೆ. ಎಲ್ಲರೂ ತಮ್ಮಿಂದಾದ ಸಹಯೋಗವಿತ್ತರೆ ಸ್ಮರಣ ಸಂಚಿಕೆಯನ್ನು ಸೌಂದರ್ಯಯುತವಾಗಿಸಿ ಸಮಿತಿಗೂ ಆದಾಯಕರ ಆಗುವಲ್ಲಿ ಹೊರತರಲು ಸಾಧ್ಯ .
– ಪುರುಷೋತ್ತಮ ಕೋಟ್ಯಾನ್ , ನಿರ್ದೇಶಕರು, ಭಾರತ್ ಬ್ಯಾಂಕ್ 90 ರ ದಶಕದ ಕಾಲಕ್ಕೆ ಮುಂಬಯಿಗೆ ಬಂದ ತುಳು ಕನ್ನಡಿಗರು ಹಸಿವು ನೀಗಿಸುವುದರ ಜೊತೆಗೆ ತಮ್ಮತನವನ್ನು ರೂಪಿಸಿದ್ದರು. ಎಂದಿಗೂ ಸುಮ್ಮನಾಗಿರದೆ ತಮ್ಮ ತಮ್ಮ ಧರ್ಮ, ಸಂಸ್ಕೃತಿ, ಕಲಾರಾಧನೆಗೈದು ಸಹೋದರತ್ವದಿಂದ ಬದುಕು ರೂಪಿಸಿದ್ದರು. ಇಂತಹ ಒಗ್ಗಟ್ಟು ನಮ್ಮಲ್ಲೂ ನೆಲೆಯಾಗಬೇಕು .
– ನ್ಯಾಯವಾದಿ ಎಸ್. ಬಿ. ಅಮೀನ್, ನಿರ್ದೇಶಕರು, ಭಾರತ್ ಬ್ಯಾಂಕ್ ಚಿತ್ರ -ವರದಿ: ರೋನ್ಸ್ ಬಂಟ್ವಾಳ್