Advertisement
ಚುನಾವಣೆ ಘೋಷಣೆಯಾದ ಬೆನ್ನಲ್ಲೇ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಭಾಗದ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ನಕ್ಸಲರ ಚಲನವಲನ ಕಾಣಿಸಿಕೊಂಡಿತ್ತು. ಸುಮಾರು ಆರರಿಂದ ಎಂಟು ಮಂದಿ ಇದ್ದ ಶಂಕಿತ ನಕ್ಸಲರ ತಂಡ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಮಧ್ಯೆ ಹಾಗೂ ಕೇರಳ ಗಡಿಭಾಗದ ದಟ್ಟ ಅರಣ್ಯದಲ್ಲಿ ಓಡಾಡುತ್ತಿರುವ ಅನುಮಾನ ವ್ಯಕ್ತಗೊಂಡಿತ್ತು.
Related Articles
ಕೇರಳ, ಝಾರ್ಖಂಡ್ ಮತ್ತು ಛತ್ತೀಸ್‌ಗಢದಲ್ಲಿ ಅಲ್ಲಿನ ಸರಕಾರ ಗಳು ನಕ್ಸಲರನ್ನು ಮಟ್ಟ ಹಾಕಲು ಭಾರೀ ಕಾರ್ಯಾಚರಣೆಗೆ ಇಳಿದಿ ದ್ದವು. ಇದೇ ಹೊತ್ತಿನಲ್ಲಿ ಅಲ್ಲಿನ ದಾಳಿಗಳ ಕಾರಣದಿಂದ ನಕ್ಸಲರು ಕರ್ನಾಟಕದ ಪಶ್ಚಿಮ ಘಟ್ಟದೊಳಗೆ ನುಸುಳಿರಬಹುದೆನ್ನುವ ಸಂದೇಹ ವ್ಯಕ್ತವಾಗಿತ್ತು. ಅಲ್ಲಿನ ಸರಕಾರಗಳು ಕಾರ್ಯಾಚರಣೆಯನ್ನು ಮುಂದು ವರಿಸುತ್ತಿರುವುದು ಮತ್ತು ಪಶ್ಚಿಮಘಟ್ಟದ ತಪ್ಪಲಿನಲ್ಲಿಯೂ ಅಂಥ ಕಾರ್ಯಾಚರಣೆಯಿಂದ ತಪ್ಪಿಸಿ ಕೊಳ್ಳುವ ಸಲುವಾಗಿ ನಕ್ಸಲರು ಸುರಕ್ಷಿತ ಸ್ಥಳಗಳಿಗೆೆ ತೆರಳಿರಬಹುದು ಎನ್ನಲಾಗುತ್ತಿದೆ.
Advertisement
ಗ್ರಾಮಸ್ಥರಲ್ಲಿ ಆತಂಕ ಕೊಂಚ ದೂರ
ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದಲ್ಲಿ ನಕ್ಸಲರ ಚಲನವಲನ ಕಂಡುಬಂದ ಬಳಿಕ ಈ ಪ್ರದೇಶಗಳ ಅರಣ್ಯದಂಚಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು. ಒಂದೆಡೆ ಎನ್‌ಎನ್‌ಎಫ್ ವಿಚಾರಣೆಯ ಭಯ, ಇನ್ನೊಂದೆಡೆ ನಕ್ಸಲರು ಯಾವ ಹೊತ್ತಿಗೆ ಭೇಟಿ ನೀಡಬಹುದೋ ಎನ್ನುವ ಭೀತಿ. ಇದರ ನಡುವೆ ಜನ ಕಂಗಾಲಾಗಿದ್ದರು. ಗ್ರಾಮೀಣ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಆದರೆ ಒಂದೆರಡು ವಾರಗಳಿಂದ ನಕ್ಸಲರ ಚಲನವಲನ ಕಾಣಿಸಿಕೊಳ್ಳದೆ ಇರುವುದು ನಾಗರಿಕರು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಪರಾರಿಯಾಗಿರಬಹುದೆ? ಅಡಗಿಕೊಂಡಿರಬಹುದೇ?
ಚುನಾವಣೆ ಸನಿಹದಲ್ಲಿ ಬಿಗಿ ಭದ್ರತೆ, ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದರಿಂದ ನಕ್ಸಲರು ಈ ಭಾಗದಿಂದ ಸುರಕ್ಷಿತ ಭಾಗಕ್ಕೆ ತೆರಳಿರಬಹುದು ಎನ್ನುವ ಅಂದಾಜು ಒಂದು ಕಡೆಯಾದರೆ, ನಕ್ಸಲರು ಇಲ್ಲೇ ಇದ್ದು ತಟಸ್ಥರಾಗಿ ಸುರಕ್ಷಿತ ಸ್ಥಳದಲ್ಲಿ ಅಡಗಿಕೊಂಡಿರಬಹುದು; ತಮ್ಮ ಇರುವಿಕೆಯನ್ನು ತೋರಿಸಿಕೊಳ್ಳುತ್ತಿಲ್ಲ ಎನ್ನುವ ಅನುಮಾನವೂ ಈ ಭಾಗದ ಜನರಲ್ಲಿದೆ. ನಕ್ಸಲರು ಯಾವ ಕಡೆಗೆ ತೆರಳಿರಬಹುದು ಎನ್ನುವ ಬಗ್ಗೆ ಪೊಲೀಸರಿಗಾಗಲಿ, ಎನ್‌ಎನ್‌ಎಫ್ ಅಧಿಕಾರಿಗಳಿಗಾಗಲಿ ಸ್ಪಷ್ಟ ಮಾಹಿತಿ ಇಲ್ಲ. ಘಟ್ಟ ಪ್ರದೇಶಕ್ಕೆ ಅಥವಾ ಕೇರಳಕ್ಕೆ ತೆರಳಿರುವ ಸಾಧ್ಯತೆಯಿದೆ. ಚುನಾವಣೆ ಸಂದರ್ಭ ನಕ್ಸಲರಿಂದ ಅಹಿತಕರ ಘಟನೆ ನಡೆಯದಂತೆ ಎಲ್ಲ ಪೂರ್ವ ಸಿದ್ದತೆ ಮಾಡಿಕೊಂಡಿದ್ದೇವೆ. ಪಶ್ಚಿಮ ಘಟ್ಟ ತಪ್ಪಲಿನ ನಕ್ಸಲ್ ಪೀಡಿತ ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಕ್ಸಲ್ ನಿಗ್ರಹ ಪಡೆ ಸಂಪೂರ್ಣ ಸುತ್ತುವರಿದು ಭದ್ರತೆ ಒದಗಿಸಿದೆ. ಎಲ್ಲೆಡೆ ಶೋಧ ಕಾರ್ಯ ನಿರಂತರವಾಗಿದೆ. ಮತದಾರರು ನಿರ್ಭೀತಿಯಿಂದ ಮತಗಟ್ಟೆಗೆ ಬಂದು ಮತ ಚಲಾಯಿಸುವ ವಾತಾವರಣವಿದೆ.
– ಜಿತೇಂದ್ರ ಕುಮಾರ್ ದಯಾಮ, ಪೊಲೀಸ್ ಅಧೀಕ್ಷಕರು, ನಕ್ಸಲ್ ನಿಗ್ರಹ ಪಡೆ -ಬಾಲಕೃಷ್ಣ ಭೀಮಗುಳಿ