Advertisement

ಬಿಜೆಪಿ ಮುಖಂಡ ಶುಕ್ಲಾ ಹತ್ಯೆ: ಟಿಎಂಸಿ, ಬಿಜೆಪಿ ನಡುವೆ ವಾಕ್ಸಮರ

05:06 PM Oct 07, 2020 | Nagendra Trasi |

ಕೋಲ್ಕತಾ: ಪಶ್ಚಿಮ ಬಂಗಾಳದ “ಉತ್ತರ 24 ಪರಗಣಾಸ್‌’ ಜಿಲ್ಲೆಯ ತಿತಾಗಢ ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದ ಬಿಜೆಪಿ ನಾಯಕ ಮನೀಶ್‌ ಶುಕ್ಲಾರವರ
ಹತ್ಯೆ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹಾಗೂ ವಿಪಕ್ಷ ಬಿಜೆಪಿ ನಡುವಿನ ಬಹಿರಂಗ ವಾಕ್ಸಮರಕ್ಕೆ ವೇದಿಕೆಯಾಗಿದೆ.

Advertisement

ಭಾನುವಾರ ರಾತ್ರಿ 7:30ರ ಸುಮಾರಿಗೆ, ತಿತಾಗಢ ಪೊಲೀಸ್‌ ಠಾಣೆ ಸಮೀಪ ಬೈಕ್‌ನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಶುಕ್ಲಾ ಮೇಲೆ ಗುಂಡು ಹಾರಿಸಿ ಹತ್ಯೆ
ಗೈದಿದ್ದರು. ಶುಕ್ಲಾ ತಿತಾಗಢ ನಗರಸಭೆಯ ಬಿಜೆಪಿ ಸದಸ್ಯರೂ ಆಗಿದ್ದರು.

ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೊಪ್ಪಿಸಿದೆ. ಮತ್ತೂಂದೆಡೆ, ಹತ್ಯೆಯನ್ನು
ತೀವ್ರವಾಗಿ ಖಂಡಿಸಿರುವ ಬಿಜೆಪಿ ಕಾರ್ಯಕರ್ತರು, ಜಿಲ್ಲೆಯ ಹಲವೆಡೆ ರಸ್ತೆ ತಡೆ ನಡೆಸಿ, ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರ ಬೇಸರ: ಶುಕ್ಲಾ ಹತ್ಯೆ ಬೆನ್ನಲ್ಲಿ ಭುಗಿಲೆದ್ದಿರುವ ಆಕ್ರೋಶದ ಸನ್ನಿವೇಶದ ಬಗ್ಗೆ ಮಾತನಾಡುವಂತೆ ಮಮತಾ ಬ್ಯಾನರ್ಜಿಯವರ ಮೊಬೈಲ್‌ಗೆ
ತಾವು ಕಳುಹಿಸಿದ ಸಂದೇಶಕ್ಕೆ ಪ್ರತಿಯಾಗಿ ಯಾವುದೇ ಉತ್ತರ ನೀಡಿಲ್ಲ ಎಂದು ರಾಜ್ಯಪಾಲ ಜಗದೀಪ್‌ ಧನ್‌ ಕರ್‌ ಆರೋಪಿಸಿದ್ದಾರೆ. ಅಲ್ಲದೆ, ತಾವು ಕಳುಹಿಸಿದ್ದ ಸಮನ್ಸ್‌ಗೂ ಸರ್ಕಾರದಿಂದ ಉತ್ತರ ಬಂದಿಲ್ಲ ಎಂದು ಬೇಸರಿಸಿದ್ದಾರೆ. ಇದರ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಲಾಪನ್‌ ಬಂಡೋಪಾಧ್ಯಾಯ, ರಾಜ್ಯಪಾಲರಿಗೆ ಸರ್ಕಾರದ ವಿವರಣೆ ಸಲ್ಲಿಸಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next