Advertisement

ವನಿತಾ ವಿಶ್ವಕಪ್‌: ಭಾರತಕ್ಕೆ ವಿಂಡೀಸ್ ಎದುರು ಅಮೋಘ ಗೆಲುವು; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ

01:51 PM Mar 12, 2022 | Team Udayavani |

ಹ್ಯಾಮಿಲ್ಟನ್‌: ವನಿತಾ ವಿಶ್ವಕಪ್‌ ಪಂದ್ಯಾವಳಿಯ “ಲಕ್ಕಿ ಟೀಮ್’ ಆಗಿದ್ದ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ ಶನಿವಾರ 155 ರನ್ ಗಳ ಭಾರಿ ಗೆಲುವು ದಾಖಲಿಸಿ ಸಂಭ್ರಮಿಸಿದೆ. ಆಡಿದ 3 ಪಂದ್ಯಗಳಲ್ಲಿ2 ಪಂದ್ಯ ಗೆದ್ದು1 ಪಂದ್ಯ ಸೋತಿರುವ ಮಹಿಳೆಯರು ಅಂಕಪಟ್ಟಿಯಲ್ಲಿ 4 ಅಂಕ ಸಂಪಾದಿಸಿ +1.333 ರನ್ ರೇಟ್ ನೊಂದಿಗೆ ಅಗ್ರ ಸ್ಥಾನಕ್ಕೆ ಏರಿದ್ದಾರೆ.

Advertisement

ಭಾರತದ ಪಾಲಿಗೆ ಪಾಲಿಗೆ ಗೆಲುವು ಅನಿವಾರ್ಯವಾಗಿದ್ದ ವೇಳೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮಿಥಾಲಿ ರಾಜ್ ಬಳಗ ವಿಂಡೀಸ್ ಮಹಿಳೆಯರ ದಾಳಿಯನ್ನು ದಂಡಿಸಿ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 317 ರನ್ ಗಳ ಅಮೋಘ ಮೊತ್ತ ಪೇರಿಸಿತ್ತು. ಆರಂಭಿಕ ಆಟಗಾರ್ತಿ ಸ್ಮ್ರತಿ ಮಂಧನ ಆಕರ್ಷಕ ಶತಕ ಸಿಡಿಸಿದರು. 119 ಎಸೆತಗಳಲ್ಲಿ 123 ರನ್ ಗಳಿಸಿದ ಅವರು ತಮ್ಮ ಇನ್ನಿಂಗ್ಸ್ ನಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್ ಗಳನ್ನೂ ಹೊಡೆದಿದ್ದರು.

ಮಾಧ್ಯಮ ಕ್ರಮಾಂಕದಲ್ಲಿ ಆಟಕ್ಕಿಳಿದ ಹರ್ಮ್ ಪ್ರೀತ್ ಕೌರ್ ಅವರು ಭರ್ಜರಿ ಶತಕ ಸಿಡಿಸಿ ತಂಡದ ಭರ್ಜರಿ ಮೊತ್ತಕ್ಕೆ ಕಾರಣರಾದರು. 107 ಎಸೆತಗಳಲ್ಲಿ 109 ರನ್ ಗಳಿಸಿದ ಅವರು 10 ಬೌಂಡರಿ ಮತ್ತು 2 ಸಿಕ್ಸರ್ ಗಳನ್ನು ಹೊಡೆದಿದ್ದರು.

ಉಳಿದಂತೆ ಆರಂಭಿಕ ಆರಗಾರ್ತಿ ಯಶ್ತಿಕಾ ಭಾಟಿಯಾ 31, ದೀಪ್ತಿ ಶರ್ಮ 15 , ಪೂಜಾ ವಸ್ತ್ರಾಕಾರ್ 10 ರನ್ ಕೊಡುಗೆ ಸಲ್ಲಿಸಿದರು.

ಬೃಹತ್ ಗುರಿ ಬೆನ್ನಟ್ಟಿದ ವಿಂಡೀಸ್ ಮಹಿಳೆಯರು 40.3 ಓವರ್ ಆಗುವಷ್ಟರಲ್ಲಿ 162 ರನ್ ಗಳಿಸಿ ತನ್ನ ಎಲ್ಲಾ ವಿಕೆಟ್ ಗಳನ್ನ ಕಳೆದುಕೊಂಡು ಭಾರತೀಯ ನಾರಿಯರಿಗೆ ಶರಣಾದರು.

Advertisement

ಭಾರತದ ಬೌಲಿಂಗ್ ನಲ್ಲಿ ಸ್ನೇಹ ರಾಣಾ 9.3 ಓವರ್ ಎಸೆದು 1 ಮೇಡನ್ ಓವರ್ ನೊಂದಿಗೆ 22 ರನ್( 2.3 ) ಬಿಟ್ಟು ಕೊಟ್ಟು 3 ವಿಕೆಟ್ ಪಡೆದು ಗಮನ ಸೆಳೆದರು. ರಾಜೇಶ್ವರಿ ಗಾಯಕ್ವಾಡ್ ಅವರು 10 ಓವರ್ ಎಸೆದು 3 ಮೇಡನ್ ಓವರ್ ಗಳೊಂದಿಗೆ ರನ್ ಬಿಟ್ಟು ಕೊಟ್ಟು ಒಂದು ವಿಕೆಟ್ ಪಡೆದರು. ಮೇಘನಾ ಸಿಂಗ್ 2 ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next