Advertisement
ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಆಟಕ್ಕೆ ಮಳೆ ಅಡ್ಡಿಯ ನಡುವೆಯೂ 166 ರನ್‌ಗಳ ಗುರಿ ಬೆನ್ನಟ್ಟಿದ ವಿಂಡೀಸ್ ಬ್ರಾಂಡನ್ ಕಿಂಗ್ ಅವರ ಅತ್ಯಮೋಘ ಆಟದಿಂದ ಭರ್ಜರಿ ಜಯ ಒಲಿಸಿಕೊಂಡಿತು. 18 ಓವರ್ ಗಳಲ್ಲೇ 2 ವಿಕೆಟ್ ನಷ್ಟಕ್ಕೆ 171 ರನ್ ಗಳಿಸುವ ಮೂಲಕ ಸುಲಭ ಜಯ ತನ್ನದಾಗಿಸಿಕೊಂಡಿತು.
Related Articles
Advertisement
ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 4 ಎಸೆತಗಳಲ್ಲಿ 5 ಮತ್ತು ಶುಭಮನ್ ಗಿಲ್ 9 ಎಸೆತಗಳಲ್ಲಿ 9 ರನ್ ಗಳಿಸಿ ಔಟಾದರು. ಇವರಿಬ್ಬರೂ ಅಖೀಲ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ಒನ್‌ಡೌನ್ ಸೂರ್ಯಕುಮಾರ್ ಮತ್ತು ತಿಲಕ್ ವರ್ಮ ಒಂದಷ್ಟು ಹೊತ್ತು ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಿದರು. ಹೊಡಿಬಡಿ ಆಟಗಾರ ತಿಲಕ್ ವರ್ಮ 18 ಎಸೆತಗಳಲ್ಲಿ 2 ಸಿಕ್ಸ್, 3 ಬೌಂಡರಿಗಳ ನೆರವಿನಿಂದ 27 ರನ್ ಗಳಿಸಿದರು. ತಿಲಕ್ ವರ್ಮ ಕ್ರೀಸ್‌ನಲ್ಲಿ ಇದ್ದಷ್ಟು ಹೊತ್ತು ಮೊತ್ತ ಜೋರಾಗಿ ಏರುತ್ತಲೇ ಇತ್ತು.
ತಿಲಕ್ ವರ್ಮ ಔಟಾದ ಮೇಲೆ ಬಂದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ 13 ರನ್ ಗಳಿಸಲಷ್ಟೇ ಶಕ್ತವಾದರು. ಈ ಮೂಲಕ ಮತ್ತೂಮ್ಮೆ ವಿಫಲವಾದರು. ಹಾರ್ದಿಕ್ ಪಾಂಡ್ಯ 14 ರನ್ ಗಳಿಸಿದರು. ಅಕ್ಷರ್ ಪಟೇಲ್ 13 ರನ್ ಗಳಿಸಿ ಔಟಾದರು. ಅರ್ಷದೀಪ್ ಸಿಂಗ್ 8, ಕುಲದೀಪ್ ಯಾದವ್ ಶೂನ್ಯಕ್ಕೆ ಔಟಾದರು. ಸೂರ್ಯಕುಮಾರ್ ಯಾದವ್ 45 ಎಸೆತಗಳಲ್ಲಿ 61 ರನ್ ಗಳಿಸಿದರು. ಇದರಲ್ಲಿ 3 ಸಿಕ್ಸ್, 4 ಫೋರ್‌ಗಳಿವೆ. ಇದು ತಂಡದಲ್ಲಿಯೇ ಆಟಗಾರನೋರ್ವ ಗಳಿಸಿದ ಅತ್ಯಧಿಕ ರನ್.
ವೆಸ್ಟ್ ಇಂಡೀಸ್ ಪರ ಶೆಫರ್ಡ್ 31 ರನ್ ನೀಡಿ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನ್ನಿಸಿದರು. ಹಾಗೆಯೇ, ಅಖೀಲ್ 24ಕ್ಕೆ 2, ಹೋಲ್ಡರ್ 36 ರನ್‌ಗೆ 2 ವಿಕೆಟ್ ಗಳಿಸಿದರು. ಆಟಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಮೊದಲಾರ್ಧದ ಆಟ ವಿಳಂಬವಾಗಿ ಕೊನೆಗೊಂಡಿತು.