Advertisement
ಕೊನೆಯಲ್ಲಿ ದಕ್ಷಿಣ ಆಫ್ರಿಕಾದ ಕಠಿನ ಸವಾಲು ಎದುರಾಗುವುದರಿಂದ ಅಮೆರಿಕವನ್ನು ಮಣಿಸಬೇಕಾದುದು ಅನಿವಾರ್ಯ ಎಂಬುದು ಕೆರಿಬಿಯನ್ನರ ಸ್ಥಿತಿ. ಇಂಗ್ಲೆಂಡ್ ಎದುರಿನ ಸೋಲಿನಿಂದ ವೆಸ್ಟ್ ಇಂಡೀಸ್ಗೆ ಎದುರಾದ ಮತ್ತೂಂದು ಆಘಾತವೆಂದರೆ ಗ್ರೂಪ್ ಎರಡರ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದದ್ದು. ನೆಟ್ ರನ್ರೇಟ್ -1.343ಕ್ಕೆ ಇಳಿದಿದೆ. ಅಂದರೆ ಅಮೆರಿಕಕ್ಕಿಂತ ಕೆಳಕ್ಕೆ (-0.900). ಹೀಗಾಗಿ ಯುಎಸ್ಎಯನ್ನು ದೊಡ್ಡ ಅಂತರದಲ್ಲಿ ಮಣಿಸಬೇಕಿದೆ.
Related Articles
ಉದ್ಘಾಟನ ಪಂದ್ಯದಲ್ಲಿ ಕೆನಡಾವನ್ನು ಮಣಿಸಿದ ಅಮೆ ರಿಕ, ಬಳಿಕ ಪಾಕಿಸ್ಥಾನವನ್ನು ಕೆಡವಿ ಭಾರೀ ಸಂಚಲನ ಮೂಡಿ ಸಿತ್ತು. ಅನಂತರ ಮೊನಾಂಕ್ ಪಟೇಲ್ ಪಡೆ ಎಲ್ಲೂ ಗೆಲುವು ಸಾಧಿಸಿಲ್ಲ. ಆದರೆ ಆಡಿದ ಪ್ರಥಮ ವಿಶ್ವಕಪ್ನಲ್ಲೇ ದ್ವಿತೀಯ ಸುತ್ತಿಗೇರಿದ ಸಾಹಸ ಯಾವುದಕ್ಕೂ ಕಡಿಮೆ ಅಲ್ಲ.
Advertisement
ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಮೆರಿಕದ ಸೋಲಿನ ಅಂತರ 18 ರನ್ ಮಾತ್ರ. ಆದರೆ ಸೋಲು ಸೋಲೇ. ವಿಂಡೀಸ್ ವಿರುದ್ಧವೂ ಎಡವಿದರೆ ಅಮೆರಿಕದ ಹಾದಿ ಮುಚ್ಚಲಿದೆ.“ನಾವು ಉತ್ತಮ ಕ್ರಿಕೆಟ್ ಪ್ರದರ್ಶನ ನೀಡಿದ್ದೇವೆ. ತಂಡವಾಗಿ ಆಡಿದ್ದೇವೆ. ಆದರೆ ನಾವು ಸೂಪರ್-8 ಹಂತದಲ್ಲಿ ಪ್ರತಿಯೊಂದು ತಂಡದ ಪಾಲಿಗೂ ಅಂಡರ್ ಡಾಗ್ಸ್ ಆಗಿದ್ದೇವೆ’ ಎಂಬುದಾಗಿ ಯುಎಸ್ಎ ಬ್ಯಾಟರ್ ಸ್ಟೀವನ್ ಟೇಲರ್ ಹೇಳಿದ್ದಾರೆ.