Advertisement

ವಿಂಡೀಸ್‌-ಲಂಕಾ ಡೇ-ನೈಟ್‌ ಟೆಸ್ಟ್‌

06:25 AM Feb 08, 2018 | |

ಕೊಲಂಬೊ: ವೆಸ್ಟ್‌ ಇಂಡೀಸ್‌ ತನ್ನ ನೆಲದಲ್ಲಿ ಮೊದಲ ಹಗಲು ರಾತ್ರಿ ಟೆಸ್ಟ್‌ ಪಂದ್ಯವನ್ನು ಆಯೋಜಿಸಲು ಮುಂದಡಿ ಇರಿಸಿದೆ. ಮುಂಬರುವ ಜೂನ್‌ ತಿಂಗಳಲ್ಲಿ ಶ್ರೀಲಂಕಾ ತಂಡದ ಆಗಮನದ ವೇಳೆ ಈ ಡೇ-ನೈಟ್‌ ಟೆಸ್ಟ್‌ ನಡೆಯಲಿದೆ.

Advertisement

ಇದು 3 ಪಂದ್ಯಗಳ ಟೆಸ್ಟ್‌ ಸರಣಿಯಾಗಿದ್ದು, ಜೂ. 23ರಿಂದ ಬಾರ್ಬಡಾಸ್‌ನ “ಕೆನ್ಸಿಂಗ್ಸ್‌ಟನ್‌ ಓವಲ್‌’ನಲ್ಲಿ ಆರಂಭವಾಗಲಿರುವ ಅಂತಿಮ ಪಂದ್ಯ ಹಗಲು-ರಾತ್ರಿಯಾಗಿ ನಡೆಯಲಿದೆ. ಈ ವಿಷಯವನ್ನು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಮೇ ತಿಂಗಳಲ್ಲಿ ಕೆರಿಬಿಯನ್‌ ನಾಡಿಗೆ ಬಂದಿಳಿಯುವ ಶ್ರೀಲಂಕಾ ಕ್ರಿಕೆಟ್‌ ತಂಡ 2 ಅಭ್ಯಾಸ ಪಂದ್ಯಗಳನ್ನಾಡಿದ ಬಳಿಕ ಟೆಸ್ಟ್‌ ಸರಣಿ ಆರಂಭಿಸಲಿದೆ. ಮೊದಲ ಟೆಸ್ಟ್‌ ಜೂ. 6ರಿಂದ ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೋದ “ಕ್ವೀನ್ಸ್‌ ಪಾರ್ಕ್‌ ಓವಲ್‌’ನಲ್ಲಿ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next