Advertisement

West Indies; ದ.ಆಫ್ರಿಕಾ ವಿರುದ್ದ ಟಿ20 ಸರಣಿ; ವಿಶ್ರಾಂತಿ ಪಡೆದ ರಸ್ಸೆಲ್‌, ಹೋಲ್ಡರ್

10:45 AM Aug 19, 2024 | Team Udayavani |

ಸೈಂಟ್‌ ಲೂಸಿಯಾ: ಪ್ರವಾಸಿ ದಕ್ಷಿಣ ಆಫ್ರಿಕಾ (South Africa) ವಿರುದ್ದ ಟೆಸ್ಟ್‌ ಸರಣಿಯಲ್ಲಿ 1-0 ಅಂತರದ ಸೋಲುಕಂಡ ವೆಸ್ಟ್‌ ಇಂಡೀಸ್‌ (West Indies) ಇದೀಗ ಟಿ20 ಸರಣಿಗೆ ಸಜ್ಜಾಗಿದೆ. ಆಗಸ್ಟ್‌ 24ರಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, ಇದೀಗ ವೆಸ್ಟ್‌ ಇಂಡೀಸ್‌ ತಂಡ ಪ್ರಕಟಿಸಲಾಗಿದೆ. ಟಿ20 ದೈತ್ಯ ಆಂದ್ರೆ ರಸ್ಸೆಲ್‌ ಸೇರಿದಂತೆ ಪ್ರಮುಖ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿಲ್ಲ.

Advertisement

ಕಳೆದ ಟಿ20 ವಿಶ್ವಕಪ್‌ ನಲ್ಲಿ ಆಡಿದ್ದ ಆಂದ್ರೆ ರಸ್ಸೆಲ್‌ (Andre Russel) ಇದೀಗ ವಿಶ್ರಾಂತಿ ಬಯಸಿದ್ದಾರೆ ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್ ಸಮಿತಿ ಹೇಳಿದರು. ಅವರು ಇತ್ತೀಚೆಗೆ ದಿ ಹಂಡ್ರೆಡ್‌ ಕೂಟದಲ್ಲಿ ಭಾಗವಹಿಸಿದ್ದರು.

ಮಾಜಿ ನಾಯಕ ಜೇಸನ್‌ ಹೋಲ್ಡರ್‌ ಅವರಿಗೂ ವಿರಾಮ ನೀಡಲಾಗಿದೆ. ತಂಡಕ್ಕಾಗಿ ಇಂಗ್ಲೆಂಡ್‌ ವಿರುದ್ದ ಮತ್ತು ದಕ್ಷಿಣ ಆಫ್ರಿಕಾ ವಿರುದ್ದ ಸತತ ಐದು ಟೆಸ್ಟ್‌ ಪಂದ್ಯಗಳಲ್ಲಿ ಆಡಿರುವ ಹೋಲ್ಡರ್‌ ಅವರಿಗೆ ವಿರಾಮ ನೀಡಲಾಗಿದೆ.

ಟೆಸ್ಟ್‌ ಸರಣಿಯಲ್ಲೂ ಸ್ಥಾನ ಪಡೆಯದ ಟಿ20 ಉಪ ನಾಯಕ ಅಲ್ಜಾರಿ ಜೋಸೆಫ್‌ ಅವರೂ ತಂಡದಲ್ಲಿ ಸ್ಥಾನ ಪಡೆದಿಲ್ಲ. ಗಾಯಗೊಂಡಿದ್ದ ಬ್ರಾಂಡನ್‌ ಕಿಂಗ್‌ ಅವರು ಇನ್ನೂ ಗುಣಮುಖರಾಗಿರದ ಕಾರಣ ತಂಡದಲ್ಲಿಲ್ಲ.

Advertisement

ರೋಮನ್‌ ಪೊವೆಲ್‌ ಅವರು ತಂಡದ ನಾಯಕರಾಗಿದ್ದು, ರೋಸ್ಟನ್‌ ಚೇಸ್‌ ಅವರು ಉಪ ನಾಯಕರಾಗಿದ್ದಾರೆ.

ಟಿ20 ವಿಶ್ವಕಪ್‌ ನಲ್ಲಿ ಒಂದೇ ಒಂದು ಪಂದ್ಯವಾಡದ ಶಿಮ್ರನ್‌ ಹೆಟ್ಮೇರ್‌ ಅವರು ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಅವರು 2023ರ ಡಿಸೆಂಬರ್‌ ನಲ್ಲಿ ಕೊನೆಯದಾಗಿ ಅಂತಾರಾಷ್ಟೀಯ ಟಿ20 ಪಂದ್ಯವಾಡಿದ್ದರು. ಆಲ್‌ ರೌಂಡರ್‌ ಫ್ಯಾಬಿಯನ್‌ ಅಲೆನ್‌ ತಂಡಕ್ಕೆ ಕಮ್‌ ಬ್ಯಾಕ್‌ ಮಾಡಿದ್ದಾರೆ.

ವೆಸ್ಟ್‌ ಇಂಡೀಸ್‌ ತಂಡ: ರೋಮನ್ ಪೊವೆಲ್ (ನಾ), ರೋಸ್ಟನ್ ಚೇಸ್ (ಉ.ನಾ), ಅಲಿಕ್ ಅಥಾನಾಜೆ, ಫ್ಯಾಬಿಯನ್ ಅಲೆನ್, ಜಾನ್ಸನ್ ಚಾರ್ಲ್ಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೆಯರ್, ಶಾಯ್ ಹೋಪ್, ಅಕೇಲ್ ಹೊಸೈನ್, ಶಮರ್ ಜೋಸೆಫ್, ಓಬೆಡ್ ಮೆಕಾಯ್, ಗುಡಕೇಶ್ ಮೋಟಿ, ನಿಕೋಲಸ್ ಪೂರನ್, ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೋ ಶೆಫರ್ಡ್.‌

Advertisement

Udayavani is now on Telegram. Click here to join our channel and stay updated with the latest news.

Next