Advertisement

ಪೊಲಾರ್ಡ್ ಆರ್ಭಟದ ನಡುವೆಯೂ ವಿಂಡೀಸ್‌ಗೆ ಆಘಾತ ನೀಡಿದ ಕಿವೀಸ್‌

07:50 AM Nov 28, 2020 | keerthan |

ಆಕ್ಲೆಂಡ್‌: ಮಳೆಯಿಂದ ಅಡಚಣೆಗೊಳಗಾಗಿ 16 ಓವರ್‌ಗಳಿಗೆ ಸೀಮಿತಗೊಂಡ ಪ್ರಥಮ ಟಿ20 ಪಂದ್ಯದಲ್ಲಿ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ನ್ಯೂಜಿಲ್ಯಾಂಡ್‌ 5 ವಿಕೆಟ್‌ಗಳ ಗೆಲುವು ಸಾಧಿಸಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ವಿಂಡೀಸ್‌, ನಾಯಕ ಕೈರನ್‌ ಪೊಲಾರ್ಡ್‌ ಅವರ ಸಿಡಿಲಬ್ಬರದ ಆಟದಿಂದ 16 ಓವರ್‌ ಗಳಲ್ಲಿ 7 ವಿಕೆಟಿಗೆ 180 ರನ್‌ ಪೇರಿಸಿತು. ಕಿವೀಸ್‌ಗೆ ಡಿ-ಎಲ್‌ ನಿಯಮದಂತೆ 176 ರನ್ನುಗಳ ಗುರಿ ಲಭಿಸಿತು. 15.2 ಓವರ್‌ ಗಳಲ್ಲಿ 5 ವಿಕೆಟಿಗೆ 179 ರನ್‌ ಬಾರಿಸಿ ಅಮೋಘ ಗೆಲುವು ಸಾಧಿಸಿತು.

ಕಿವೀಸ್‌ ಪರ ಮೊದಲ ಟಿ20 ಪಂದ್ಯ ಆಡಿದ ಡೆವೋನ್‌ ಕಾನ್ವೆ 41 ರನ್‌ (29 ಎಸೆತ, 5 ಬೌಂಡರಿ, 1 ಸಿಕ್ಸರ್‌), ಜಿಮ್ಮಿ ನೀಶಮ್‌ ಅಜೇಯ 48 ರನ್‌ (24 ಎಸೆತ, 5 ಬೌಂಡರಿ, 3 ಸಿಕ್ಸರ್‌) ಮತ್ತು ಮಿಚೆಲ್‌ ಸ್ಯಾಂಟ್ನರ್‌ ಅಜೇಯ 31 ರನ್‌ ಬಾರಿಸಿದರು (18 ಎಸೆತ, 3 ಸಿಕ್ಸರ್‌). ನೀಶಮ್‌-ಸ್ಯಾಂಟ್ನರ್‌ ಮುರಿಯದ 6ನೇ ವಿಕೆಟಿಗೆ 3 ಓವರ್‌ ಗಳಿಂದ 39 ರನ್‌ ಸೂರೆಗೈದು ತಂಡವನ್ನು ದಡ ಮುಟ್ಟಿಸಿದರು.

ವೆಸ್ಟ್‌ ಇಂಡೀಸ್‌ 59ಕ್ಕೆ 5 ವಿಕೆಟ್‌ ಕಳೆದುಕೊಂಡಾಗ ಸ್ಫೋಟಿಸತೊಡಗಿದ ಪೊಲಾರ್ಡ್‌ ಕೇವಲ 37 ಎಸೆತ ನಿಭಾಯಿಸಿ ಅಜೇಯ 75 ರನ್‌ ಬಾರಿಸಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು. ಈ ಅವಧಿಯಲ್ಲಿ 8 ಸಿಕ್ಸರ್‌, 4 ಬೌಂಡರಿ ಸಿಡಿಯಲ್ಪಟ್ಟಿತು. 21 ರನ್ನಿಗೆ 5 ವಿಕೆಟ್‌ ಕಿತ್ತ ನ್ಯೂಜಿಲ್ಯಾಂಡಿನ ಲಾಕಿ ಫ‌ರ್ಗ್ಯುಸನ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌ -16 ಓವರ್‌ಗಳಲ್ಲಿ 7 ವಿಕೆಟಿಗೆ 180 (ಪೊಲಾರ್ಡ್‌ ಔಟಾಗದೆ 75, ಫ್ಲೆಚರ್‌ 34, ಅಲನ್‌ 30, ಫ‌ರ್ಗ್ಯುಸನ್‌ 21ಕ್ಕೆ 5, ಸೌಥಿ 22ಕ್ಕೆ 2). ನ್ಯೂಜಿಲ್ಯಾಂಡ್‌-15.2 ಓವರ್‌ಗಳಲ್ಲಿ 5 ವಿಕೆಟಿಗೆ 179 (ನೀಶಮ್‌ ಔಟಾಗದೆ 48, ಕಾನ್ವೆ 41, ಸ್ಯಾಂಟ್ನರ್‌ ಔಟಾಗದೆ 31, ಥಾಮಸ್‌ 23ಕ್ಕೆ 2).

Advertisement

ಪಂದ್ಯಶ್ರೇಷ್ಠ: ಲಾಕಿ ಫ‌ರ್ಗ್ಯುಸನ್‌

Advertisement

Udayavani is now on Telegram. Click here to join our channel and stay updated with the latest news.

Next