Advertisement

ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಒಟ್ಟು ಶೇ.70.11ರಷ್ಟು ಮತದಾನ

08:53 PM Oct 28, 2020 | Suhan S |

ಧಾರವಾಡ: ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡು ಇಂದು ನಡೆದ ಪಶ್ಚಿಮ ಪದವೀಧರರ ಚುನಾವಣೆಯಲ್ಲಿ ಶೇ.70.11 ರಷ್ಟು ಮತದಾನ ನಡೆದಿದೆ.

Advertisement

ಧಾರವಾಡ ಜಿಲ್ಲೆಯಲ್ಲಿ ಶೇ.68.65 ರಷ್ಟು, ಹಾವೇರಿ ಜಿಲ್ಲೆಯಲ್ಲಿ ಶೇ.67.89 ರಷ್ಟು, ಗದಗ ಜಿಲ್ಲೆಯಲ್ಲಿ ಶೇ.74.59 ರಷ್ಟು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.71.08 ರಷ್ಟು ಮತದಾನವಾಗಿದೆ. ಗದಗ ಜಿಲ್ಲೆಯಲ್ಲೇ ಅತೀ ಹೆಚ್ಚು ಮತದಾನವಾದಂತಾಗಿದೆ.

ಧಾರವಾಡ ಜಿಲ್ಲೆಯಲ್ಲಿ 13282 ಪುರುಷ ಮತದಾರರಿದ್ದರೆ ಆ ಪೈಕಿ 9867 ಜನ ಮತದಾನ ಮಾಡಿದ್ದಾರೆ. 8263 ಜನ ಮಹಿಳಾ ಮತದಾರರಿದ್ದರೆ ಆ ಪೈಕಿ 4926 ಜನ ಮತದಾನ ಮಾಡಿದ್ದಾರೆ. ಇತರೆ 4 ಜನ ಮತದಾರರಿದ್ದರೆ ಅವರಾರೂ ಮತದಾನ ಮಾಡಿಲ್ಲ. ಒಟ್ಟು 21549 ಜನ ಮತದಾರರ ಪೈಕಿ 14793 ಜನ ಮತದಾನ ಮಾಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ 16220 ಜನ ಪುರುಷ ಮತದಾರರಿದ್ದರೆ ಆ ಪೈಕಿ 11699 ಜನ ಮತದಾನ ಮಾಡಿದ್ದರೆ, 7378 ಮಹಿಳಾ ಮತದಾರರ ಪೈಕಿ 4324 ಜನ ಹಕ್ಕು ಚಲಾಯಿಸಿದ್ದಾರೆ. ಇತರೆ 5 ಜನ ಇದ್ದರೆ ಇವರಾರೂ ಮತದಾನ ಮಾಡಿಲ್ಲ. ಒಟ್ಟಾರೆ 23603 ಜನ ಮತದಾರರ ಪೈಕಿ ಹಾವೇರಿ ಜಿಲ್ಲೆಯಲ್ಲಿ 16023 ಜನ ಮತದಾನ ಮಾಡಿದ್ದಾರೆ.

ಗದಗ ಜಿಲ್ಲೆಯಲ್ಲಿ 10979 ಜನ ಪುರುಷ ಮತದಾರರಿದ್ದರೆ ಆ ಪೈಕಿ 8579 ಜನ ಮತದಾನ ಮಾಡಿದ್ದರೆ, ಒಟ್ಟು 4998 ಜನ ಮಹಿಳಾ ಮತದಾರರ ಪೈಕಿ 3339 ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಲ್ಲಿಯೂ ಇತರೆ ಒಬ್ಬರು ಮತದಾರರಿದ್ದು, ಅವರೂ ಮತ ಚಲಾವಣೆ ಮಾಡಿಲ್ಲ.

Advertisement

ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ 7113 ಜನ ಪುರುಷ ಮತದಾರರಿದ್ದು, ಈ ಪೈಕಿ 5519  ಜನ ಮತದಾನ ಮಾಡಿದ್ದಾರೆ. 6034 ಮಹಿಳಾ ಮತದಾರರ ಪೈಕಿ 3826 ಜನ ಹಕ್ಕು ಚಲಾಯಿಸಿದ್ದಾರೆ. ಇಲ್ಲಿ ಇತರೆ ಒಬ್ಬರು ಮತದಾರರಿದ್ದು, ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಜಿಲ್ಲೆಯ ಒಟ್ಟು 13148 ಮತದಾರರ ಪೈಕಿ 9346 ಜನ ಮತದಾನ ಮಾಡಿದ್ದಾರೆ.

ನಾಲ್ಕೂ ಜಿಲ್ಲೆ ಸೇರಿದಂತೆ 35664 ಜನ ಪುರುಷರು, 16415 ಮಹಿಳಾ ಮತದಾರರು ಹಾಗೂ ಇತರೆ ಒಬ್ಬರು ಸೇರಿದಂತೆ ಒಟ್ಟು 74278 ಮತದಾರರ ಪೈಕಿ 52080 ಮತದಾರರು ಮತದಾನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next