ನವದೆಹಲಿ:ಕೋವಿಡ್ ನ ಹೊಸ ರೂಪಾಂತರ ತಳಿ ಒಮಿಕ್ರಾನ್ ಮೊದಲ ಪ್ರಕರಣ ಪಶ್ಚಿಮಬಂಗಾಳದಲ್ಲಿ ಬುಧವಾರ(ಡಿಸೆಂಬರ್ 15) ಪತ್ತೆಯಾಗಿದೆ. ತೆಲಂಗಾಣ ಮೂಲದ 7 ವರ್ಷದ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಹೊಸ ಲುಕ್..!
ಆದರೆ ಮಗುವಿನ ಪೋಷಕರನ್ನು ಪರೀಕ್ಷೆಗೊಳಪಡಿಸಿದ್ದು, ನೆಗೆಟಿವ್ ವರದಿ ಬಂದಿರುವುದಾಗಿ ಹೇಳಿದೆ. ದಂಪತಿ ಮತ್ತು ಮಗು ವಿದೇಶದಿಂದ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಮಗುವಿನಲ್ಲಿ ಸೋಂಕು ಪತ್ತೆಯಾಗಿದ್ದು, ಬಳಿಕ ಅವರು ಪಶ್ಚಿಮಬಂಗಾಳಕ್ಕೆ ತೆರಳಿರುವುದಾಗಿ ವರದಿ ವಿವರಿಸಿದೆ.
ಹೈದರಾಬಾದ್ ನಲ್ಲಿ ಈಗಾಗಲೇ ಎರಡು ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಹೈದರಾಬಾದ್ ಗೆ ಆಗಮಿಸಿದ್ದ 24ವರ್ಷದ ಕೀನ್ಯಾ ಯುವತಿ ಮತ್ತು 23 ವರ್ಷದ ಸೋಮಾಲಿಯಾದ ಯುವಕನಲ್ಲಿ ಒಮಿಕ್ರಾನ್ ಪತ್ತೆಯಾಗಿತ್ತು.
ಒಮಿಕ್ರಾನ್ ಕ್ಷಿಪ್ರವಾಗಿ ಹರಡಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದ್ದು, ಇದು ಎಷ್ಟು ಗಂಭೀರವಾದ ಸೋಂಕು ಎಂಬುದು ಇನ್ನಷ್ಟೇ ಅಧ್ಯಯನ ನಡೆಸಬೇಕಾಗಿದೆ ಎಂದು ತಿಳಿಸಿತ್ತು.
ಕೋವಿಡ್ ಸೋಂಕು ಇನ್ನೂ ಮುಂದುವರಿದಿದೆ. ಏತನ್ಮಧ್ಯೆ ಜಗತ್ತಿನ 41 ದೇಶಗಳಲ್ಲಿ ಜನಸಂಖ್ಯೆಯ ಶೇ.10ರಷ್ಟು ಲಸಿಕೆಯನ್ನು ನೀಡಲು ಸಾಧ್ಯವಾಗಿಲ್ಲ ಹಾಗೂ 98 ದೇಶಗಳಲ್ಲಿ ಶೇ.40ರ ಗುರಿಯನ್ನೂ ತಲುಪಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.